ಫರೀದಾಬಾದ್: ಕಾರು ಕದಿಯಲು ಹೋಗಿ ನಿದ್ರೆಗೆ ಜಾರಿದ ಕಳ್ಳ
ಕಾರನ್ನು ಕದಿಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ವಾಹನದೊಳಗೆ ಮಲಗಿದ್ದ ಘಟನೆ ಫರೀದಾಬಾದ್ನಲ್ಲಿ ನಡೆದಿದೆ.
ಕಾರನ್ನು ಕದಿಯಲು ಹೋಗಿದ್ದ ವ್ಯಕ್ತಿಯೊಬ್ಬ ವಾಹನದಲ್ಲೇ ನಿದ್ರೆಗೆ ಜಾರಿರುವ ಘಟನೆ ಫರೀದಾಬಾದ್ನಲ್ಲಿ ನಡೆದಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಫರಿದಾಬಾದ್‌ನಲ್ಲಿ ಕಾರೊಂದನ್ನು ಕದಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ವಾಹನದೊಳಗೆ ನಿದ್ದೆಗೆ ಜಾರಿದ್ದ. ಕಾರಿನ ಮಾಲೀಕ ತನ್ನ ವಾಹನದಲ್ಲಿ ಯಾರೋ ಮಲಗಿರುವುದನ್ನು ಕಂಡಾಗ ಘಟನೆ ಬೆಳಕಿಗೆ ಬಂದಿದೆ.
ವಾಹನದ ಮಾಲೀಕರು ಹಿಂದಿನ ರಾತ್ರಿ ಎಂದಿನಂತೆ ತನ್ನ ಕಾರನ್ನು ನಿಲ್ಲಿಸಿದ್ದರು. ಕಾರನ್ನು ಸ್ವಚ್ಛಗೊಳಿಸಬೇಕೆಂದು ಬೆಳಗ್ಗೆ ಕಾರಿನ ಬಳಿ ಹೋದಾಗ ಯಾರೋ ಕಾರಿನ ಸೈಡ್ ಲಾಕ್ ಒಡೆದಿರುವುದನ್ನು ಗಮನಿಸಿದರು. ಆ ಸಂದರ್ಭದಲ್ಲಿ ಯಾರೋ ಕಾರಿನಿಂದ ಗೊರಕೆ ಹೊಡೆಯುತ್ತಿರುವ ಶಬ್ದ ಬಂದು ಅಚ್ಚರಿಯಾಗಿತ್ತು.
ಕೂಡಲೇ ಕಳ್ಳನನ್ನು ನೋಡಿದ ರವಿ ಅಧಿಕಾರಿಗಳನ್ನು ಎಚ್ಚರಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನೊಳಗೆ ಪತ್ತೆಯಾದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಓದಿ: ರಾಯಚೂರು: ಕಾರ್ನಲ್ಲಿ ಬಂದಿಳಿದು ಹೈಟೆಕ್ ಕಳ್ಳತನ! ಒಂದೇ ರಾತ್ರಿ ನಾಲ್ಕು ದೇವಸ್ಥಾನಗಳಲ್ಲಿ ಕೃತ್ಯ, ಬೆಚ್ಚಿದ ಜನ
ವ್ಯಕ್ತಿ, ಕಾರು ಕದಿಯಲು ಪ್ರಯತ್ನಿಸುತ್ತಿರುವಾಗ, ಆತ ಕುಡಿದ ಅಮಲಿನಲ್ಲಿ ನಿದ್ದೆಗೆ ಜಾರಿದನು, ಆತನ ಬಳಿಯಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನದ ಮಾಲೀಕರ ಪ್ರಕಾರ ಆರೋಪಿ ಕಾರಿನ ಬಲಭಾಗದ ಡೋರ್ ಲಾಕ್ ಮತ್ತು ಗೇರ್ ಲಾಕ್ ಅನ್ನು ಮುರಿದಿದ್ದಾರೆ. ಮತ್ತೊಂದು ಘಟನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಲು ಮನೆಗೆ ನುಗ್ಗಿದವ ಹಾಸಿಗೆ ನೋಡಿ ಅಲ್ಲೇ ನಿದ್ರೆಗೆ ಜಾರಿರುವ ಘಟನೆಯೂ ನಡೆದಿತ್ತು.
ಮೈಸೂರಿನಲ್ಲಿ ಮಾಜಿ ಸಚಿವರ ಕಾರನ್ನೇ ಕದ್ದ ಖದೀಮ ಕಳ್ಳರಿಗೆ ಕಳ್ಳತನ ಮಾಡುವುದಕ್ಕೆ ಜಾಗ ಯಾವುದಾದರೇನು? ಯಾರದ್ದಾದರೇನು? ಅದು ಖದೀಮರಿಗೆ ಸಂಬಂಧ ಇಲ್ಲ. ನಿಜ ಮೈಸೂರಿನಲ್ಲಿ ಮಾಜಿ ಸಚಿವ ಶಿವಣ್ಣ ಕಾರನ್ನೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮೈಸೂರಿನ (Mysuru) ವಿಜಯನಗರ ಮೂರನೇ ಹಂತದಲ್ಲಿ ಘಟನೆ ನಡೆದಿದೆ.
ಮುಸುಕುಧಾರಿ ಓರ್ವ, ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೋವಾ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಾಂಪೌಂಡ್ ಹಾರಿ ಮನೆಯೊಳಗೆ ನುಗ್ಗಿ ಕೀ ತೆಗೆದುಕೊಂಡು ಬಂದು ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ. ಜೂನ್ 6ರ ಮಧ್ಯರಾತ್ರಿ 1 ಗಂಟೆಯಲ್ಲಿ ಈ ಕೃತ್ಯ ನಡೆದಿದ್ದು, ಕಳ್ಳನ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಂಪೌಂಡ್ ಹಾರಿ ಮನೆಯೊಳಗೆ ನುಗ್ಗಿರುವ ಕಳ್ಳ ಕೀ ತೆಗೆದುಕೊಂಡು ಬಂದ ಕಾರು ತೆಗೆದುಕೊಂಡು ಹೋಗಿದ್ದಾನೆ. ಕಾರು ಕದ್ದವನು ಮತ್ತೆ ಬಂದು ಫೈಲ್‌ಗಳು ಹಾಗೂ ಗಣಪತಿ ವಿಗ್ರಹ ಇಟ್ಟು ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇನ್ನು ಘಟನೆ ಬಗ್ಗೆ ಮಾಧ್ಯಮಗಖಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೋಟೆ ಶಿವಣ್ಣ. 20 ವರ್ಷದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಜೂನ್ 5 ರಂದು ಹೆಚ್ ಡಿ.ಕೋಟೆಗೆ ಹೋಗಿ ಬಂದು ರಾತ್ರಿ 8 ಗಂಟೆಗೆ ಕಾರು ನಿಲ್ಲಿಸಿದ್ದೆ. ಈ ರಸ್ತೆಯಲ್ಲಿ ನೂರಾರು ಕಾರು ನಿಲ್ಲುತ್ತವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ