ನಾಲ್ಕನೇ ತರಗತಿ ಬಾಲಕಿಗೆ ಐರನ್​ ಬಾಕ್ಸ್​ನಿಂದ ಸುಟ್ಟು ಮಲತಾಯಿ ಕ್ರೌರ್ಯ; ಅಧಿಕಾರಿಗಳಿಂದ ರಕ್ಷಣೆ

ಆ ಬಾಲಕಿ ತನ್ನ ತಾಯಿ ಮಾಡಿದ ತಪ್ಪಿಗೆ ಮಲತಾಯಿ ಬಳಿ ನೋವು ತಿನ್ನುತಿತ್ತು, ತಂದೆ ಇಲ್ಲದಾಗ ಮಲತಾಯಿ ನೀಡಿರುವ ನೋವು ಒಂದಾ, ಎರಡಾ. ಆಕೆ ನೀಡಿರುವ ನೋವಿನ ಬಗ್ಗೆ ನೀವೇನಾದ್ರು ಕೇಳುದ್ರೆ, ಯಪ್ಪಾ ಇಂತಹವರು ಈ ಭೂಮಿ ಮೇಲೆ ಇನ್ನೂ ಇದ್ದಾರ ಎನ್ನುವುದು ಗ್ಯಾರಂಟಿ. ಅಷ್ಟಕ್ಕೂ ಏನಿದು ಮನಕಲುಕುವ ಘಟನೆ ಅಂತೀರಾ? ಈ ಸ್ಟೋರಿ ಓದಿ.

ನಾಲ್ಕನೇ ತರಗತಿ ಬಾಲಕಿಗೆ ಐರನ್​ ಬಾಕ್ಸ್​ನಿಂದ ಸುಟ್ಟು ಮಲತಾಯಿ ಕ್ರೌರ್ಯ; ಅಧಿಕಾರಿಗಳಿಂದ ರಕ್ಷಣೆ
ಮಲತಾಯಿ
Edited By:

Updated on: Feb 25, 2024 | 7:18 PM

ಬೆಂಗಳೂರು, ಫೆ.25: ಬೆಂಗಳೂರು ಉತ್ತರ ತಾಲ್ಲೂಕಿನ ಅಂಚೆಪಾಳ್ಯ(Anchepalya) ಗ್ರಾಮದಲ್ಲಿ. ನಾಲ್ಕನೇ ತರಗತಿ ಓದುತ್ತಿರುವ ಪುಟ್ಟ ಬಾಲಕಿಗೆ ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಮಲತಾಯಿ(Stepmother) ಮಮತಾ ಎಂಬುವವರು ಕಿರುಕುಳ ನೀಡುತ್ತಿದ್ದಳಂತೆ. ಮಮತಾ ಗಂಡ ಶ್ರೀನಿವಾಸ್ ಕೆಲಸಕ್ಕೆ ಎಂದು ಮನೆಯಿಂದ ಹೊರಡುತ್ತಿದಂತೆ ಮೃಗಿಯ ವರ್ತನೆ ತೋರುತ್ತಿದ್ದ ಮಮತಾ, ಬಾಲಕಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸುತ್ತಿದ್ದಳಂತೆ. ಒಂದು ಸಣ್ಣ ಮಗು ಎಂಬುದನ್ನು ಸಹ ನೋಡದೆ ಐರನ್ ಬಾಕ್ಸ್​ನಿಂದ ಸುಟ್ಟಿರುವುದಲ್ಲದೆ, ಕಾದ ಕಬ್ಬಿಣದ ಸಲಾಕೆಯಿಂದ ಮಗುವಿನ ಕೈಕಾಲು ಸುಟ್ಟಿದ್ದಾಳಂತೆ.

ಇನ್ನು ಶ್ರೀನಿವಾಸ್ ಈ ಮೊದಲೇ ಒಂದು ಮದುವೆ ಆಗಿದ್ದು, ಯಾವುದೋ ಕಾರಣಕ್ಕೆ ಮೊದಲ ಪತ್ನಿ ಬೇರೊಬ್ಬನ ಜೊತೆ ಪರಾರಿಯಾಗಿದ್ದರು. ಈ ಹಿನ್ನೆಲೆ ಕಾನೂನು ಮುಖಾಂತರ ವಿಚ್ಚೆಧನ ಪಡೆದಿದ್ದನಂತೆ, ಆಗ ಶ್ರೀನಿವಾಸ್ ಮಗಳು ಈತನ ಪಾಲಗಿದ್ದು, ಇತ ಕೂಡ ಮರು ಮದುವೆಯಾಗಿದ್ದಾನೆ. ಮಮತಾ ಸಹ ಬೇರೊಬ್ಬ ಗಂಡಿನೊಂದಿಗೆ ಮದುವೆಯಾಗಿದ್ದು
ಕಾನೂನಿನ ಮುಖಾಂತರ ಆಕೆಯು ಸಹ ವಿಚ್ಚೆದನ ಪಡೆದು ಶ್ರೀನಿವಾಸ್​ನನ್ನು ಮದುವೆ ಆಗಿದ್ದಾಳೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತಂತೆ.

ಇದನ್ನೂ ಓದಿ:ಯಲ್ಲಾಪುರ ಬಸ್​ ನಿಲ್ದಾಣದಲ್ಲಿ ಮಹಿಳೆಯ ಬಟ್ಟೆ ಹರಿದು ಹಲ್ಲೆ: ದೂರು ದಾಖಲಿಸಿಕೊಳ್ಳದ ಪೊಲೀಸರು

ಸ್ವಲ್ಪ ದಿನಗಳು ಕಳೆದ ಮೇಲೆ ಮಮತಾ ತನ್ನ ಮಲಮಗಳಿಗೆ ನಿತ್ಯ ಕಿರುಕುಳ ನೀಡಲು ಶುರು ಮಾಡಿಕೊಂಡಿದ್ದಾಳೆ. ಮಗಳು ವಿನಾಕಾರಣ ಹಠ ಮಾಡುತ್ತಾಳೆ ಎಂದು ಶ್ರೀನಿವಾಸ್ ಬಳಿ ದೂರು ಹೇಳಿದ್ದಾಳೆ. ಈ ನಡುವೆ ಹುಚ್ಚಿಯಂತೆ ಕ್ರೌರ್ಯ ಮೆರೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಾದನಾಯಕನಹಳ್ಳಿ ಪೋಲೀಸರ ಸಮ್ಮುಖದಲ್ಲಿ ಮಗುವಿನ ರಕ್ಷಣಾ ಕಾರ್ಯ ನಡೆದಿದೆ. ಏನೇ ಆಗಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ರೆ,
ಅಪ್ರಾಪ್ತ ಮಕ್ಕಳ ಮೇಲೆ ಇಂದು ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಪೋಷಕರು, ಶಿಕ್ಷಕರು, ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಮಕ್ಕಳ ಸಂಬಂಧಿತ ಇಲಾಖೆಯ ಅಧಿಕಾರಿಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಇದರ ನಿಯಂತ್ರಣಕ್ಕೆ ಮುನ್ನುಡಿ ಬರೆಯಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ