ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ: ಬಿಎಸ್ಪಿ ಮುಖಂಡನಿಂದ ಯುವಕನ ಮೇಲೆ ಹಲ್ಲೆ
ಹಲಸೂರು ಕೆರೆ ಬಳಿ ಬಿಎಸ್ಪಿ ಸ್ಟೇಟ್ ಜನರಲ್ ಸೆಕ್ರೆಟರಿ ಬೋರ್ಡ್ ಇರುವ ಕಾರು ಪುನೀತ್ ಎಂಬ ಯುವಕ ಗಾಡಿಗೆ ಡಿಕ್ಕಿ ಹೊಡೆದಿದ್ದು, ಅದನ್ನು ಪ್ರಶ್ನಿಸಿದ ಯುವಕನ ಮೇಲೆ ಮೂವರು ಸೇರಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಕುರಿತು ಪುನೀತ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು, ಫೆ.20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ಬಹುಜನ ಸಮಾಜವಾದಿ ಪಾರ್ಟಿ(Bahujan Samaj Party) ಮುಖಂಡನಿಂದ ಯುವಕನ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಕೆಲಸದ ನಿಮ್ಮಿತ್ತ ತೆರಳುತ್ತಿದ್ದ ಪುನೀತ್ ಎಂಬಾತನ ಗಾಡಿಗೆ ಹಲಸೂರು ಕೆರೆ ಬಳಿ ಬಿಎಸ್ಪಿ ಸ್ಟೇಟ್ ಜನರಲ್ ಸೆಕ್ರೆಟರಿ ಬೋರ್ಡ್ ಇರುವ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರಿನಲ್ಲಿದ್ದವರನ್ನ ಡಿಕ್ಕಿ ಹೊಡೆದ ಬಗ್ಗೆ ಪ್ರಶ್ನೆ ಮಾಡಿದಾಗ, ಕಾರಿನಲ್ಲಿದ್ದ ಮೂವರು ಪುನೀತ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪುನೀತ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಿಸಿಯೂಟ ವಿಚಾರಕ್ಕೆ ವಿದ್ಯಾರ್ಥಿನಿಗೆ ಶಿಕ್ಷಕಿ ಥಳಿಸಿದ ಆರೋಪ
ಹುಬ್ಬಳ್ಳಿ: ಬಿಸಿಯೂಟ ವಿಚಾರಕ್ಕೆ ವಿದ್ಯಾರ್ಥಿನಿಗೆ ಶಿಕ್ಷಕಿ ಥಳಿಸಿದ ಆರೋಪ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜುಂಜನಬೈಲ್ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಳಿಬಂದಿದೆ. ಶಿಕ್ಷಕಿಯೋರ್ವಳು ಕೊಠಡಿಯಲ್ಲಿ ಕೂಡಿ ಹಾಕಿ ಕೋಲಿನಿಂದ ಥಳಿಸಿದ್ದು,ನೋವು ತಾಳಲಾರದೇ ವಿದ್ಯಾರ್ಥಿನಿಯರು ಕ್ಲಾಸ್ ರೂಮ್ ಬಿಟ್ಟು ಹೊರಗೆ ಹೋಗಿದ್ದಾರೆ. ಬಳಿಕ ಶಿಕ್ಷಕಿಯ ನಡೆ ಖಂಡಿಸಿ ಶಾಲೆ ಎದುರು ವಿದ್ಯಾರ್ಥಿಗಳು, ಪಾಲಕರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಪತ್ನಿಯನ್ನು ಮಾತಾಡಿಸಿದ್ದಕ್ಕೆ ಎದುರು ಮನೆ ಯುವಕನ ಮೇಲೆ ಹಲ್ಲೆ
ಬೈಕಿಗೆ ಬಿಎಂಟಿಸಿ ಬಸ್ ಡಿಕ್ಕಿ; ಬೈಕ್ ಸಂಪೂರ್ಣ ಜಖಂ
ಬೆಂಗಳೂರು: ಬಾಗಲಗುಂಟೆ ಬಳಿಯ ಭೈರವೇಶ್ವರ ಸರ್ಕಲ್ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸಂಪೂರ್ಣ ಜಖಂ ಆದ ಘಟನೆ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಜೈಪಾಲ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು, ಬಸ್ ಚಾಲಕ ಉದಯ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿರು ಚಿಕ್ಕಬಾಣಾವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Tue, 20 February 24