ನೆಲಮಂಗಲ: ಟ್ರಾವೆಲ್ ಹೆಸರಲ್ಲಿ ನೂರಾರು ಕಾರುಗಳನ್ನ ಮಾರಾಟ ಮಾಡಿದ್ದ ಅರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸರು 4 ಜನರನ್ನ ಅರೆಸ್ಟ್ ಮಾಡಿದ್ದಾರೆ. ಟ್ರಾವೆಲ್ ಮಾಲೀಕ ಶಿವರಾಜ್ ಸೇರಿದಂತೆ ಕೃಷ್ಣೇಗೌಡ, ಶ್ರೀಕಾಂತ್, ಅಸ್ಗರ್ ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳು ಆರ್.ಎಸ್ ಟ್ರಾವೆಲ್ ಕಛೇರಿಯೊಂದನ್ನ ಓಪನ್ ಮಾಡಿ, ಭೋಗಕ್ಕೆಂದು ಕಾರುಗಳನ್ನು ಟ್ರಾವೆಲ್ಸ್ನಲ್ಲಿ ಅಟ್ಯಾಚ್ ಮಾಡಿಸಿಕೊಂಡು ಬಾಡಿಗೆ ನೀಡುವುದಾಗಿ ನಂಬಿಸಿದ್ದರು. ಅದೇ ಕಾರುಗಳನ್ನ ಮಾರಾಟ ಮಾಡಿ ಪರಾರಿಯಾಗಿದ್ದರು.
ಕಾರುಗಳನ್ನ ಮಾರಾಟ ಮಾಡಿ ಪರಾರಿಯಾಗಿದ್ದ ಆರೋಪಿಗಳು ಸದ್ಯ ಅರೆಸ್ಟ್ ಆಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಬಂಧಿತರಿಂದ 108 ಕಾರುಗಳಲ್ಲಿ 97 ಕಾರುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ಡ್ರಗ್ಸ್ ಮಾರುತ್ತಿದ್ದ ಆರೋಪಿ ಸೆರೆ
ಕೊಕೇನ್, ಎಂಡಿಎಂಎ ಡ್ರಗ್ಸ್ ಮಾರುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜೀರಿಯಾ ಮೂಲದ ಆಗು ಜೆಮ್ ಔರಾ ಎಂಬಾತನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಐಟಿ-ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂಬ ಮಾಹಿತಿ ಇದೆ. ಸದ್ಯ ಬಂಧಿತನಿಂದ ಸುಮಾರು 11 ಲಕ್ಷ ಮೌಲ್ಯದ ಕೊಕೇನ್, ಎಂಡಿಎಂಎ ಮತ್ತು ಕಾರನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
‘ಪುನೀತ್ ಇಲ್ಲದೇ ‘ಜೇಮ್ಸ್’ ಶೂಟಿಂಗ್ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್ ಭಾವುಕ ನುಡಿ
Petrol Rate: ಇಂಧನ ದರ ಸ್ಥಿರ; ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ನೋಡಿ