ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಿ ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 20, 2024 | 5:02 PM

ಬಿಎಂಟಿಸಿ ನೌಕರರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಮೇಲಾಧಿಕಾರಿಗಳ ಕಿರುಕುಳವೇ ಇದಕ್ಕೆ ಕಾರಣವೆಂಬ ಆರೋಪ ಕೂಡ ಕೇಳಿಬಂದಿದೆ. ಅದರಂತೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದ ಟೋಲ್ ಪ್ಲಾಜಾ ಬಳಿ ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಿ ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಿ ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ
ಬಿಎಂಟಿಸಿ ಚಾಲಕ ಆತ್ಮಹತ್ಯೆ
Follow us on

ಬೆಂಗಳೂರು ಗ್ರಾಮಾಂತರ, ಫೆ.20: ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಿ ಬಿಎಂಟಿಸಿ ಚಾಲಕ(BMTC driver) ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹೊಸಕೋಟೆ ಹೊರವಲಯದ ಟೋಲ್ ಪ್ಲಾಜಾ ಬಳಿ ನಡೆದಿದೆ. ಆತ್ಮಹತ್ಯೆ ಯತ್ನ ಕಂಡ ಕೂಡಲೇ ಸ್ಥಳಿಯರು ಮತ್ತು ಆತನ ಸಹೋದ್ಯೋಗಿಗಳು ರಕ್ಷಿಸಿದ್ದಾರೆ. ನಂಜುಂಡಯ್ಯ ಆತ್ಮಹತ್ಯೆಗೆ ಯತ್ನಿಸಿದ ಬಿಎಂಟಿಸಿ ಚಾಲಕ. ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಸ್ಥಳಕ್ಕಾಗಮಿಸಿದ ಹೊಸಕೋಟೆ ಪೋಲಿಸರು ಚಾಲಕನನ್ನು ಮನವೊಲಿಕೆ ಮಾಡಿ ಅಧಿಕಾರಿಗಳ ಜೊತೆ ಕಳುಹಿಸಿದ್ದಾರೆ.

ಆರ್ಡರ್ ತಗೊಂಡು ಬೈಕ್ ಕದಿತಿದ್ದ ಬೈಕ್ ಕಳ್ಳನ ಬಂಧನ

ಬೆಂಗಳೂರು: ಆರ್ಡರ್​ ತೆಗೆದುಕೊಂಡು ಬೈಕ್​ ಕದಿಯುತ್ತಿದ್ದ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ದಾಸರಹಳ್ಳಿಯ ಪೃಥ್ವಿರಾಜ್(30) ಬಂಧಿತ ಆರೋಪಿ. ಬಂಧಿತನ ಬಳಿ ಇದ್ದ 20 ಬೈಕ್​ಗಳು, ಮೊಬೈಲ್​ನ್ನು ಜಪ್ತಿ ಮಾಡಲಾಗಿದೆ. ಇತ ದಾಸರಹಳ್ಳಿ, ನಾಗಸಂದ್ರ ಮೆಟ್ರೋ ಸೇರಿದಂತೆ ಪಾರ್ಕಿಂಗ್ ಪ್ರದೇಶದಲ್ಲಿ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದ, ಬಳಿಕ ಕದ್ದ ಬೈಕ್​ ಗಳನ್ನು ಆಂಧ್ರ, ತುಮಕೂರು, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದ. ಈ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಅಸಾಮಿ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ:ವಿಜಯನಗರ: ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ

ಸ್ಕೂಟಿಗೆ ಟಿಪ್ಪರ್​ ಡಿಕ್ಕಿ, ಸವಾರ ಸಾವು

ಬಾಗಲಕೋಟೆ: ಎಷ್ಟೇ ಜಾಗರೂಕರಾಗಿದ್ದರು. ಎದುರುಗಡೆ ಬರುವ ವಾಹನದವರು ಸರಿಯಿಲ್ಲವೆಂದರೆ ಯಾರದೋ ಅಜಾಗರೂಕತೆಗೆ ಇನ್ಯಾರೂ ಉಸಿರು ಚೆಲ್ಲುವಂತಾಗುತ್ತದೆ. ಅದರಂತೆ ಇಂದು ಸ್ಕೂಟಿಗೆ ಟಿಪ್ಪರ್​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ನಗರದ ಸೀಮಿಕೇರಿ ಬೈಪಾಸ್​​ ರಸ್ತೆಯಲ್ಲಿ ನಡೆದಿದೆ. ಸ್ಥಳಕ್ಕಾಗಮಿಸಿದ ಬಾಗಲಕೋಟೆ ಸಂಚಾರಿ ಠಾಣೆ ಪೊಲೀಸರು, ಮೃತ ಸ್ಕೂಟಿ ಸವಾರನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Tue, 20 February 24