ಬೆಂಗಳೂರು ಗ್ರಾಮಾಂತರ: ದೇವರ ಮೆರವಣಿಗೆ ವೇಳೆ ಪ್ರಸಾದ ಪಡೆಯಲು ಹೋದ ಬಾಲಕನ ಮೇಲೆ ಜಾತಿಯ ಕಾರಣಕ್ಕಾಗಿ ಯುವಕನೋರ್ವ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್ 16ನೇ ತಾರೀಖು ನಡೆದಿರುವ ಘಟನೆ ಇದಾಗಿದ್ದು, ದೇವನಹಳ್ಳಿ ತಾಲ್ಲೂಕಿನ ರಾಮನಾಥಪುರದಲ್ಲಿ ಜರುಗಿದೆ. ಗ್ರಾಮದಲ್ಲಿ ದೇವರ ಮೆರವಣಿಗೆ ವೇಳೆ ಪ್ರಸಾದ ಪಡೆಯಲು ಹೋಗಿದ್ದ ಬಾಲಕನನ್ನು ತರಾಟೆಗೆ ತೆಗೆದುಕೊಂಡ ಕಿಶೋರ್ ಎಂಬ ಯುವಕ ಹಾಗೂ ಆತನ ಕುಟುಂಬಸ್ಥರು ಕೀಳು ಜಾತಿಯವರು ದೇವರ ಬಳಿ ಬರ್ತಿರಾ ಎಂದು ಹೇಳಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬಾಲಕನ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಆತನ ತಂದೆ, ತಾಯಿಗೂ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕ ಮುನಿ ಆಂಜಿನಪ್ಪ ಮತ್ತು ಆಶಾ ಕಾರ್ಯಕರ್ತೆ ಅರುಣ ದಂಪತಿಗಳ ಮೇಲೆ ಹಲ್ಲೆ ಎಸಗಿದ ಆರೋಪ ಕೇಳಿಬಂದಿದ್ದು ದೇವನಹಳ್ಳಿ ತಾಲ್ಲೂಕಿನ ರಾಮನಾಥಪುರ ಗ್ರಾಮದಲ್ಲಿ ಇದು ನಡೆದಿದೆ.
ಬಾಲಕನ ತಂದೆ ತಾಯಿ ಮೇಲೆಯು ಕಿಶೋರ್ ಮತ್ತು ಆತನ ಕುಟುಂಬಸ್ಥರಿಂದ ಹಲ್ಲೆ ನಡೆದ ನಂತರ ಹಲ್ಲೆಗೊಳಗಾಗಿ ಭಯಭೀತಗೊಂಡ ದಂಪತಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಅವರಿಗೆ ದಲಿತ ಮುಖಂಡರೂ ಸಾಥ್ ನೀಡಿದ್ದು ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಘಟನೆಯ ನಂತರ ರಾಜಿ ಪಂಚಾಯ್ತಿ ಮಾಡಲು ಗ್ರಾಮದ ಮುಖಂಡರು ಯತ್ನ ಮಾಡಿದ್ದಾರೆ ಎನ್ನಲಾಗಿದೆ. ನಂತರ ಹಲ್ಲೆ ವಿರುದ್ದ ಕೇಸ್ ನೀಡಿದಕ್ಕೆ ಊರು ಖಾಲಿ ಮಾಡಿಸೋದಾಗಿ ಧಮ್ಕಿ ಹಾಕಿದ ಆರೋಪ ಇದೀಗ ಕೇಳಿಬರುತ್ತಿದ್ದು, ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(Boy assaulted by an youth and his family for caste reason in Bengaluru)
ಇದನ್ನೂ ಓದಿ:
ಸೋಮವಾರದಿಂದ ಶಾಲೆ ಆರಂಭ; ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಕಡ್ಡಾಯವಾಗಿ ಪಾಲಿಸಬೇಕಾದ ಅಂಶಗಳು ಇಲ್ಲಿವೆ
ಸಣ್ಣ ಸಮುದಾಯಗಳ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ: ಸಿ.ಎಸ್.ದ್ವಾರಕನಾಥ್