ನೆಲಮಂಗಲ: ಇತ್ತೀಚೆಗೆ ಖತರ್ನಾಕ್ ಕಳ್ಳರು ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಮೊದಲು ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಬಸ್ ಹತ್ತುವಾಗ ಅದೆಷ್ಟೂ ಮಂದಿ ಪರ್ಸ್, ಮೊಬೈಲ್, ಹಣ ಕಳೆದುಕೊಂಡಿದ್ದಾರೆ. ಅದೇ ರೀತಿ ಯಲಹಂಕದ ಸಾವಿತ್ರಮ್ಮ ಎನ್ನವವರು ಬಿಎಂಟಿಸಿ ಬಸ್‌ನಲ್ಲಿ ತನ್ನ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಬಿಎಂಟಿಸಿ ರೂಟ್ ಸಂಖ್ಯೆ 401ರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯಲಹಂಕದ ಸಾವಿತ್ರಮ್ಮ ಕುಣಿಗಲ್‌ನ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಕಾರ್ಯಕ್ರಮದಲ್ಲಿ ಚಿನ್ನ ಹಾಕಿಕೊಳ್ಳಲು ತನ್ನ ಚಿನ್ನವನ್ನು ಬ್ಯಾಗ್ನಲ್ಲಿ ಹೊತ್ತೊಯ್ಯುತ್ತಿದ್ದರು. ಬಿಎಂಟಿಸಿ ಬಸ್‌ನಲ್ಲಿದ್ದಾಗಲೇ ಬ್ಯಾಗ್‌ನಲ್ಲಿದ್ದ ಚಿನ್ನ ಕಳ್ಳತನವಾಗಿದೆ. ಜಾಲಹಳ್ಳಿಯಲ್ಲಿ ಬಸ್ ಬದಲಿಸುವಾಗ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿತ್ರಮ್ಮನ ಬ್ಯಾಗ್ನಲ್ಲಿ ಒಂದೂವರೆ ಲಕ್ಷ ಬೆಲೆಬಾಳುವ 35ಗ್ರಾಂ ಚಿನ್ನಾಭರಣಗಳಿದ್ದವು ಎನ್ನಲಾಗಿದೆ. ತಮ್ಮ ತವರೂರಾದ ಕುಣಿಗಲ್ನಲ್ಲಿ ತಮ್ಮನ ಪತ್ನಿ ಗೀತಾ ಅವರ ಸೀಮಂತ ಕಾರ್ಯಕ್ರಮ ಇತ್ತು. ಬಸ್ನಲ್ಲಿ ಚಿನ್ನಾಭರಣ ಧರಿಸಿ ಪ್ರಯಾಣಿಸುವುದು ಅಪಾಯವೆಂದು ಬ್ಯಾಗ್ನಲ್ಲಿ ಇಟ್ಟಿದ್ದರು. ಆದರೆ ಬಸ್ನಲ್ಲಿ ನೂಕು ನುಗ್ಗಲು ಮಾಡಿ ಕಳ್ಳತನ ಮಾಡಿದ್ದಾರೆ. ಇನ್ನು ಬಸ್ ನಂ 401ರಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಈಗಾಗಲೇ ಈ ಬಸ್ನಲ್ಲಿ ಪ್ರಯಾಣಿಸುವ ಅನೇಕ ಮಂದಿ ತಮ್ಮ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಈ ಬಗ್ಗೆ ಮಾಹಿತಿ ಇದ್ದರೂ ಪ್ರಕರಣ ದಾಖಲಿಸಲು ಮುಂದಾಗಿಲ್ಲ. ಸದ್ಯ ಚಿನ್ನಾಭರಣ ಕಳೆದುಕೊಂಡ ಸಾವಿತ್ರಮ್ಮ ಪ್ರಕರಣ ದಾಖಲಿಸಿದ್ದು ಆದಷ್ಟು ಬೇಗ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕಳ್ಳರ ಗ್ಯಾಂಗ್ ಅರೆಸ್ಟ್ ಮಾಡಬೇಕಿದೆ.
ಇದನ್ನೂ ಓದಿ: ಕಳ್ಳತನ, ಕೊರೊನಾ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ವಿನೂತನ ಪ್ರಯತ್ನ; ಅಶರೀರ ವಾಣಿಯಿಂದ ಬರುತ್ತೆ ಎಚ್ಚರಿಕೆ
Published On - 11:46 am, Sun, 22 August 21