ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ನುಗ್ಗಿ ಪಾಗಲ್ ಪ್ರೇಮಿಯ ಹುಚ್ಚಾಟ; ಮುರಿದು ಬಿದ್ದ ಮದುವೆ, ಯುವಕ ಆಸ್ಪತ್ರೆ ದಾಖಲು
10 ನೇ ತರಗತಿಯಲ್ಲಿ ಜೊತೆಯಲ್ಲಿ ಓದಿದ್ದ ಯುವಕ ಯುವತಿ ವಾಟ್ಸ್ ಆಪ್ ಗ್ರೂಪ್ ಮೂಲಕ ಸ್ನೇಹಿತರಾಗಿದ್ದರು. ಈ ವೇಳೆ ಇಬ್ಬರ ನಡುವಿನ ಸ್ನೇಹವನ್ನ ಯುವಕ ಪ್ರೀತಿ ಅಂದುಕೊಂಡಿದ್ದ.
ದೊಡ್ಡಬಳ್ಳಾಪುರ: ಪಾಗಲ್ ಪ್ರೇಮಿಯೊಬ್ಬ ಕಲ್ಯಾಣ ಮಂಟಪಕ್ಕೆ ನುಗ್ಗಿ ರಂಪಾಟ ನಡೆಸಿ ಮದುವೆ ಮುರಿದ ಘಟನೆ ಬೆಂಗಳೂರು ಗ್ರಾ. ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆಯಾಗ್ತಿದ್ದಾಳೆ ಎಂದು ಕಲ್ಯಾಣ ಮಂಟಪಕ್ಕೆ ನುಗ್ಗಿದ ಯುವಕ ಮದುವೆ ನಿಲ್ಲಿಸುವಂತೆ ಗಲಾಟೆ ಮಾಡಿ ಪುಂಡಾಟ ಮೆರೆದಿದ್ದಾನೆ. ಈ ವೇಳೆ ಯುವತಿ ಸಂಬಂಧಿಕರು ಯುವಕನನ್ನು ಥಳಿಸಿದ್ದಾರೆ.
ಬೆಂಗಳೂರು ಮೂಲದ ನಿತೀಶ್ ಹಲ್ಲೆಗೊಳಗಾದ ಪಾಗಲ್ ಪ್ರೇಮಿ. 10 ನೇ ತರಗತಿಯಲ್ಲಿ ಜೊತೆಯಲ್ಲಿ ಓದಿದ್ದ ಯುವಕ ಯುವತಿ ವಾಟ್ಸ್ ಆಪ್ ಗ್ರೂಪ್ ಮೂಲಕ ಸ್ನೇಹಿತರಾಗಿದ್ದರು. ಈ ವೇಳೆ ಇಬ್ಬರ ನಡುವಿನ ಸ್ನೇಹವನ್ನ ಯುವಕ ಪ್ರೀತಿ ಅಂದುಕೊಂಡಿದ್ದ. ಆದ್ರೆ ಯುವತಿ ನಿತೀಶ್ ನನ್ನ ಮದುವೆಯಾಗಲು ನಿರಾಕರಿಸಿ ಬೇರೊಬ್ಬನ ಜೊತೆ ಮದುವೆಯಾಗಲು ಹಸೆಮಣೆ ಏರಿದ್ದಳು. ಇದನ್ನು ಸಹಿಸದ ಯುವಕ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ್ದಾನೆ. ಮದುವೆಯನ್ನು ನಿಲ್ಲಿಸಿದ್ದಾನೆ.
ಇದನ್ನೂ ಓದಿ: Bagalkot: ಪಿಎಸ್ ಐ ವಿರುದ್ಧ ಸಾರ್ವಜನಿಕವಾಗಿ ಕೂಗಾಡಿ ಸೀನ್ ಸೃಷ್ಟಿಸಿದ ಜಮಖಂಡಿ ಕಾಂಗ್ರೆಸ್ ಶಾಸಕ ಅನಂದ ನ್ಯಾಮಗೌಡ
ಇನ್ನು ಗಲಾಟೆ ಹಿನ್ನೆಲೆ ಚಾಕುವಿನಿಂದ ಯುವಕ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನಿಗೆ ವಿಕ್ಟೋರಿಯಾ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಲಾಟೆ ಹಿನ್ನೆಲೆಯಲ್ಲಿ ಮದುವೆ ಮುರಿದು ಬಿದ್ದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಂದೆಯಿಂದಲೇ ಮಗಳ ಬರ್ಬರ ಕೊಲೆ
ಬೆಂಗಳೂರಿನ ಕೊಡಿಗೇಹಳ್ಳಿಯ ಧನಲಕ್ಷ್ಮೀ ಲೇಔಟ್ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ತಂದೆಯಿಂದಲೇ ಮಗಳ ಬರ್ಬರ ಕೊಲೆಯಾಗಿದೆ. ದೊಣ್ಣೆಯಿಂದ ಹೊಡೆದು ಆಶಾ(32) ಕೊಲೆ ಮಾಡಿದ ತಂದೆ ರಮೇಶ್ನನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮದುವೆಯಾಗಿದ್ದ ಆಶಾ ಗಂಡನಿಂದ ದೂರವಾಗಿದ್ದರು. ಈ ಹಿನ್ನೆಲೆ ತಂದೆ ಮನೆಯಲ್ಲೇ ಉಳಿದುಕೊಂಡಿದ್ದರು. ಅಲ್ಲದೇ ತಂದೆ, ತಾಯಿ, ತಂಗಿಗೆ ಕಿರುಕುಳ ನೀಡುತ್ತಿದ್ದರಂತೆ. ಇದೇ ಕಾರಣಕ್ಕೆ ನಿನ್ನೆ ರಾತ್ರಿ ಜಗಳವಾಗಿದೆ. ಈ ವೇಳೆ ತಂದೆ ರಮೇಶ್ ದೊಣ್ಣೆಯಿಂದ ತಲೆಗೆ ಹೊಡೆದ್ದು ಆಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ರಮೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:15 pm, Thu, 16 March 23