134 ದಿನಗಳಿಂದ ಹೋರಾಟ ನಡೆಸುತ್ತಿರುವ 71 ರೈತರ ವಿರುದ್ಧ ಸ್ವಾತಂತ್ರ್ಯೋತ್ಸವ ವೇಳೆ ಪೊಲೀಸರು ಎಫ್​ಐಆರ್​ ಹಾಕಿದರು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ವ್ಯಾಪ್ತಿ ಚನ್ನರಾಯಪಟ್ಟಣ ಹೋಬಳಿಯಲ್ಲಿ (Channarayapatna farmers) ಭೂಸ್ವಾಧೀನಕ್ಕೆ ( KIADB) ರೈತರು 134 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

134 ದಿನಗಳಿಂದ ಹೋರಾಟ ನಡೆಸುತ್ತಿರುವ 71 ರೈತರ ವಿರುದ್ಧ ಸ್ವಾತಂತ್ರ್ಯೋತ್ಸವ ವೇಳೆ ಪೊಲೀಸರು ಎಫ್​ಐಆರ್​ ಹಾಕಿದರು!
71 ರೈತರ ವಿರುದ್ಧ ಸ್ವಾತಂತ್ರ್ಯೋತ್ಸವ ವೇಳೆ ಸಿಎಂ ಬೊಮ್ಮಾಯಿ ಪೊಲೀಸರು ಎಫ್​ಐಆರ್​ ಹಾಕಿದರು!
TV9kannada Web Team

| Edited By: sadhu srinath

Aug 16, 2022 | 2:26 PM

ದೇವನಹಳ್ಳಿ: ಹೌದು ಆ ಊರಿನಲ್ಲಿ ರೈತರು 134 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಹಾಗೆಂದೇ ನಿನ್ನೆ ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆ ಸಂದರ್ಭದಲ್ಲೂ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಅಷ್ಟಕ್ಕೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಥ್ಯದ ರಾಜ್ಯ ಪೊಲೀಸರು ಒಟ್ಟು 71 ರೈತರ ವಿರುದ್ಧ ಎಫ್​ಐಆರ್​ ಹಾಕಿದ್ದಾರೆ.

ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನಕ್ಕೆ ರೈತರ ವಿರೋಧ – ಕೆಐಎಡಿಬಿಗೆ ಕೃಷಿ ಭೂಮಿ ಸ್ವಾಧೀನ ವಿರೋಧಿಸುತ್ತಿರುವ ಮಹಾಪರಾಧಕ್ಕೆ…

ಸ್ವಾತಂತ್ರ್ಯೋತ್ಸವ ವೇಳೆ ಪ್ರತಿಭಟನೆ ನಡೆಸಿದ್ದ ರೈತರ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಠಾಣೆಯಲ್ಲಿ ಕ್ರಿಮಿನಲ್​ ಮೊಕದ್ದಮೆ ಹೂಡಲಾಗಿದೆ. ಐಪಿಸಿ ಸೆಕ್ಷನ್ 188, 283, 290 ಮತ್ತು 291ರಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇಷ್ಟಕ್ಕೂ ಆ 721 ಮಂದಿ ರೈತಾಪಿ ಜನ ಮಾಡುತ್ತಿದ್ದ (134 ದಿನಗಳಿಂದ) ತಪ್ಪಾದರೂ ಏನಪ್ಪಾ ಅಂದರೆ ರಾಜ್ಯ ಸರ್ಕಾರದ ಕೆಐಎಡಿಬಿ ಸಂಸ್ಥೆಯು ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸುತ್ತಾ ಬಂದಿದ್ದರು. ಅದಕ್ಕಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದರು.

ದೇವನಹಳ್ಳಿಯ ಸರ್ಕಾರಿ ಕಾಲೇಜು ಮೈದಾನದಲ್ಲಿ ರೈತರು ಪ್ರತಿಭಟಿಸುತ್ತಿದ್ದರು. ಇದೇ ವೇಳೆ, ಸ್ವಾತಂತ್ರ್ಯೋತ್ಸವದ ಅಂಗವಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಭಾಷಣ ಮಾಡುತ್ತಿದ್ದರು. ಆ ವೇಳೆ ರೈತರು ವೇದಿಕೆಯತ್ತ ನುಗ್ಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ, ನೂಕಾಟವಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ವ್ಯಾಪ್ತಿ ಚನ್ನರಾಯಪಟ್ಟಣ ಹೋಬಳಿಯಲ್ಲಿ (Channarayapatna farmers) ಭೂಸ್ವಾಧೀನಕ್ಕೆ ( KIADB) ರೈತರು 134 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada