ಆಯುಧ ಪೂಜೆ ಹಿನ್ನೆಲೆ ಮಗನ ಕಂಪನಿಗೆ ಭೇಟಿ ನೀಡಿ ಕಾರ್ಮಿಕರಿಗೆ ಬೋನಸ್ ಹಂಚಿದ ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮಗನ ಮ್ಯಾಗ್ನಾಟಿಕ್ ಹಾಗೂ ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಾರ್ಮಿಕರಿಗೆ ಬೋನಸ್ ನೀಡಿದ್ದಾರೆ.

ಆಯುಧ ಪೂಜೆ ಹಿನ್ನೆಲೆ ಮಗನ ಕಂಪನಿಗೆ ಭೇಟಿ ನೀಡಿ ಕಾರ್ಮಿಕರಿಗೆ ಬೋನಸ್ ಹಂಚಿದ ಸಿಎಂ ಬಸವರಾಜ ಬೊಮ್ಮಾಯಿ
ಆಯುಧ ಪೂಜೆ ಹಿನ್ನೆಲೆ ಮಗನ ಕಂಪನಿಗೆ ಭೇಟಿ ನೀಡಿ ಕಾರ್ಮಿಕರಿಗೆ ಬೋನಸ್ ಹಂಚಿದ ಸಿಎಂ ಬಸವರಾಜ ಬೊಮ್ಮಾಯಿ

ದೇವನಹಳ್ಳಿ: ದಸರಾ ಆಯುಧ ಪೂಜೆ ಹಿನ್ನೆಲೆಯಲ್ಲಿ ಮಗ ಭರತ್‌ ಕಂಪನಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಆಟೋಮೊಬೈಲ್ ಫ್ಯಾಕ್ಟರಿಗೆ ಸಿಎಂ ಭೇಟಿ ನೀಡಿದ್ದಾರೆ.

ಮಹಾಮಾರಿ ಕೊರೊನಾ ನಿಯಂತ್ರಣದಲ್ಲಿದ್ದು ಇಂದು ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಮಾಡಲಾಗದ ಆಯುಧ ಪೂಜೆಯನ್ನು ಇಂದು ನಾಡಿನಾದ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ. ಈ ನಡುವೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮಗನ ಮ್ಯಾಗ್ನಾಟಿಕ್ ಹಾಗೂ ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಾರ್ಮಿಕರಿಗೆ ಬೋನಸ್ ನೀಡಿದ್ದಾರೆ. ಅರ್ಧಗಂಟೆಗಳ‌ ಕಾಲ ಪ್ಯಾಕ್ಟರಿಯಲ್ಲಿ ದಸರಾ ಪೂಜೆ ಸಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಪತ್ನಿ ಚೆನ್ನಮ್ಮ ಹಾಗೂ ಅವರ ಪುತ್ರ  ಭರತ್‌ ಫ್ಯಾಕ್ಟರಿಯಲ್ಲಿನ ಯಂತ್ರಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ಕಾರ್ಮಿಕರಿಗೆ ವಿಜಯದಶಮಿ ಶುಭಾಶಯ ತಿಳಿಸಿ ಉಡುಗೊರೆ ಹಾಗೂ ಸಿಹಿಯನ್ನು ಹಂಚಿದರು. ಈ ವೇಳೆ ಜಿಲ್ಲಾಧಿಕಾರಿ ಶ್ರೀನಿವಾಸ್, ಡಿವೈಎಸ್ಪಿ ರಂಗಪ್ಪ, ಇನ್ಸ್‌ಪೆಕ್ಟರ್‌ಗಳಾದ ಸತೀಶ್‌ಕುಮಾರ್‌, ನವೀನ್‌ಕುಮಾರ್‌ ಎಂ.ಬಿ. ಪಿಎಸ್‌ಐ ಭವಿತಾ ಉಪಸ್ಥಿತರಿದ್ದರು.

Basavaraj Bommai

ಮಗನ ಕಂಪನಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ

ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ
ಇಂದು ರಾಜ್ಯಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು ರಾಜ್ಯದ ಬಹುತೇಕ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ. ಜನರ ಖರೀದಿ ಭರಾಟೆ ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಆಯುಧ ಪೂಜೆಗೆ ಹೂವು, ಹಣ್ಣು, ಬಾಳೆಕಂದು ಖರೀದಿ ಮಾಡಲು ಜನ ಮುಗಿಬಿದ್ದಿದ್ದು ಕೆ.ಆರ್.ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.

ಅಶ್ವಿನೀ ಮಾಸದ ಶುಕ್ಲಪಕ್ಷದ ನವಮೀ ದಿನದ ಆಯುಧ ಪೂಜೆ ಇಂದಿದ್ದು ನಾಳೆ ವಿಜಯದಶಮಿ ಈ ಹಿನ್ನೆಲೆಯಲ್ಲಿ ಖರೀದಿ ಜೋರಾಗಿದೆ. ಕಳೆದ ಭಾರಿ ಕೊರೊನಾ ಕಾರಣಕ್ಕೆ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಹೀಗಾಗಿ ಹಬ್ಬದ ಮೂಡ್ನಲ್ಲಿ ಸಿಟಿ ಮಂದಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Mysore Palace Ayudha Puja: ಮೈಸೂರಿನಲ್ಲಿ ಆಯುಧ ಪೂಜೆ ಸಂಭ್ರಮ, ರಾಜ ವಂಶಸ್ಥರಿಂದ ಪಟ್ಟದ ಕತ್ತಿ, ಪಲ್ಲಕ್ಕಿ ಪೂಜೆ

Read Full Article

Click on your DTH Provider to Add TV9 Kannada