ಕೊರೊನಾ ಕ್ವಾರಂಟೈನ್ ಕಾಟ.. ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಎದುರಾಯ್ತು ಸಿಬ್ಬಂದಿ ಕೊರತೆ!
ಕೋರೊನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಲೆ ಇದೆ, ಇದೀಗ ಕೊರೋನಾ ವಾರಿಯರ್ಸ್ ಪೊಲೀಸರಿಗೂ ಸಹ ಕೊರೋನಾ ಸೋಂಕು ಹರಡುತ್ತಿರುವ ವಿಚಾರ ಬೆಳಕಿಗೆ ಬರುತ್ತಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಈಗಾಗಲೇ ಸುಮಾರು 10 ಠಾಣೆಗಳು ಕ್ವಾರಂಟೈನ್ ಆಗಿವೆ. ಕೊರೋನ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಹೋಯ್ಸಳ ಚಾಲಕ ಕಾನ್‌ಸ್ಟಬಲ್ ಒಬ್ಬರಿಗೆ ಸೋಂಕು ತಗುಲಿದ್ದು ಸೋಲದೇವನಹಳ್ಳಿ ಪೋಲಿಸರಿಗೆ ತಲೆಬಿಸಿಯಾಗಿದೆ. ಬೆಂಗಳೂರು ಉತ್ತರ ವಿಭಾಗದ ಸೋಲದೇವನಹಳ್ಳಿ ಠಾಣೆಯಲ್ಲಿ 70 ಸಿಬ್ಬಂದಿಗಳಿದ್ದು ಸೋಂಕಿತನ ಸಂಪರ್ಕದಲ್ಲಿದ್ದು 14 […]

ಕೋರೊನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಲೆ ಇದೆ, ಇದೀಗ ಕೊರೋನಾ ವಾರಿಯರ್ಸ್ ಪೊಲೀಸರಿಗೂ ಸಹ ಕೊರೋನಾ ಸೋಂಕು ಹರಡುತ್ತಿರುವ ವಿಚಾರ ಬೆಳಕಿಗೆ ಬರುತ್ತಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಈಗಾಗಲೇ ಸುಮಾರು 10 ಠಾಣೆಗಳು ಕ್ವಾರಂಟೈನ್ ಆಗಿವೆ. ಕೊರೋನ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಹೋಯ್ಸಳ ಚಾಲಕ ಕಾನ್‌ಸ್ಟಬಲ್ ಒಬ್ಬರಿಗೆ ಸೋಂಕು ತಗುಲಿದ್ದು ಸೋಲದೇವನಹಳ್ಳಿ ಪೋಲಿಸರಿಗೆ ತಲೆಬಿಸಿಯಾಗಿದೆ.
ಬೆಂಗಳೂರು ಉತ್ತರ ವಿಭಾಗದ ಸೋಲದೇವನಹಳ್ಳಿ ಠಾಣೆಯಲ್ಲಿ 70 ಸಿಬ್ಬಂದಿಗಳಿದ್ದು ಸೋಂಕಿತನ ಸಂಪರ್ಕದಲ್ಲಿದ್ದು 14 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸುಮಾರು 20 ಜನ ಸಿಬ್ಬಂದಿ ವಿವಿದೆ ಉದ್ದೇಶದ ಮೇಲೆ ಬೇರೆ ಠಾಣೆಗಳಿಗೆ ಕರ್ತವ್ಯದ ಮೇಲೆ ನಿಯೋಜಿಸಲಾಗಿದ್ದು ಸದ್ಯ ಇನ್ಸ್‌ಪೆಕ್ಟರ್ ಸೇರಿ ಠಾಣೆಯಲ್ಲಿ ಸುಮಾರು 35 ಸಿಬ್ಬಂದಿಗಳು ಉಳಿದಿದ್ದಾರೆ.
ಕೇವಲ 35 ಸಿಬ್ಬಂದಿಗಳನ್ನ ಬಳಸಿಕೊಂಡು ದೊಡ್ಡ ವ್ಯಾಪ್ತಿಯ ಠಾಣೆಯಲ್ಲಿ 24 ಗಂಟೆಗಳ ಕಾಲ ಕೆಲಸ ನಿರ್ವಹಿಸುವುದು ಪೊಲೀಸರಿಗೆ ತಲೆಬಿಸಿಯಾಗಿದೆ. ಅಪರಾಧ ಪ್ರಕರಣಗಳ ತನಿಖೆ, ಬೀಟ್ ರೌಂಡ್ಸ್, ಕೊರೋನಾ ಡ್ಯೂಟಿ, ಸೀಲ್‌ಡೌನ್ ಏರಿಯಾ ಡ್ಯೂಟಿ ಠಾಣೆ ಸಿಬ್ಬಂದಿಗಳ ನಿಯೋಜನೆ ಸಹ ಕ್ಲಿಷ್ಟಕರವಾಗಿದ್ದು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೋಂಕು ಹರಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಪ್ರತಿ ಠಾಣೆಯಲ್ಲಿ ಸ್ವಾಗತಗಾರರು, ಬರಹಗಾರರು, ಠಾಣಾ ಮುಖ್ಯಸ್ಥರು, ವಾಹನ ಚಾಲಕರು, ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ಇತರೆ ಸಿಬ್ಬಂದಿ ಠಾಣೆಯಲ್ಲಿಯೇ ಕೆಲಸ ನಿರ್ವಹಿಸಲೇಬೇಕು, ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಪೊಲೀಸರ ಕೊರತೆಯಿಂದ ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದೆ. ಮನೆಗೂ ಹೋಗದೆ ಕೆಲವೊಮ್ಮೆ ದಿನದ 24 ಗಂಟೆ ಕೆಲಸ ಮಾಡುವ ಪರಿಸ್ಥಿತಿ ಬಂದೊದಗಿದೆ ಅಂತಾರೆ ಕೆಲವು ಹೆಸರೇಳಲು ಇಚ್ಚಿಸದ ಸಿಬ್ಬಂದಿ.
ಒಟ್ಟಾರೆ ಕೊರೋನಾ ಸಂದಿಗ್ನ ಪರಿಸ್ಥಿತಿಯಲ್ಲಿ ಪೊಲೀಸರಿಗೆ ವೈರಸ್ ತಗಲುತ್ತಿದ್ದು, ಪ್ರಾಥಮಿಕ ಸಂಪರ್ಕಿತರನ್ನ ಕ್ವಾರಂಟೈನ್ ಮಾಡಲಾಗುತ್ತಿದ್ದು, ಪರ್ಯಾಯವಾಗಿ ಸಿಬ್ಬಂದಿ ನಿಯೋಜಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಿದೆ.




Published On - 2:02 pm, Thu, 11 June 20




