AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ, ದೇವನಹಳ್ಳಿ ಡಿಹೆಚ್​ಒ ಕಚೇರಿಗೆ ಬೀಗ

ದೇವನಹಳ್ಳಿ ತಾಲೂಕಿನ ಚಪ್ಪರ ಕಲ್ಲು ಬಳಿಯ ಡಿಹೆಚ್​ಒ ಕಚೇರಿಯ ಹಳೇ ಡಿಹೆಚ್​ಒ ವಿಜಯೇಂದ್ರ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಆದ್ರೆ ಡಿಹೆಚ್​ಒ ವಿಜಯೇಂದ್ರ ಅವರು ಕೆಎಟಿ ಮೂಲಕ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದು ಆ.18ರಂದು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ ಆ.19ರಂದು ಕಚೇರಿಗೆ ನೂತನ ಡಿಹೆಚ್​ಒ ಸುನೀಲ್​ ಕುಮಾರ್ ಕಾಲಿಟ್ಟಿದ್ದು ಹುದ್ದೆಯನ್ನು ಅಲಂಕರಿಸಲು ಪಟ್ಟು ಹಿಡಿದಿದ್ದಾರೆ.

ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ, ದೇವನಹಳ್ಳಿ ಡಿಹೆಚ್​ಒ ಕಚೇರಿಗೆ ಬೀಗ
ಹೊಸ ಡಿಹೆಚ್​ಒ ಸುನೀಲ್, ಹಳೇ ಡಿಹೆಚ್​ಒ ವಿಜಯೇಂದ್ರ
ನವೀನ್ ಕುಮಾರ್ ಟಿ
| Edited By: |

Updated on: Aug 21, 2023 | 11:15 AM

Share

ದೇವನಹಳ್ಳಿ, ಆ.21: ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದ್ದು ಬೆಂಗಳೂರು ಗ್ರಾ. ಡಿಸಿ ಕಚೇರಿಯಲ್ಲಿರುವ ಡಿಹೆಚ್​ಒ ಕಚೇರಿಗೆ(DHO Office) ಬೀಗ ಹಾಕಲಾದ ಪ್ರಸಂಗ ದೇವನಹಳ್ಳಿಯಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ಚಪ್ಪರ ಕಲ್ಲು ಬಳಿಯ ಡಿಹೆಚ್​ಒ ಕಚೇರಿಯ ಸೀಟ್​ಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಹೊಸ ಡಿಹೆಚ್​​ಒ ಸುನೀಲ್​ ಕುಮಾರ್​​ ಹಾಗೂ ಹಳೇ ಡಿಹೆಚ್​ಒ ವಿಜಯೇಂದ್ರ ನಡುವೆ ಜಟಾಪಟಿ ನಡೆಯುತ್ತಿದೆ.

ದೇವನಹಳ್ಳಿ ತಾಲೂಕಿನ ಚಪ್ಪರ ಕಲ್ಲು ಬಳಿಯ ಡಿಹೆಚ್​ಒ ಕಚೇರಿಯ ಹಳೇ ಡಿಹೆಚ್​ಒ ವಿಜಯೇಂದ್ರ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಆದ್ರೆ ಡಿಹೆಚ್​ಒ ವಿಜಯೇಂದ್ರ ಅವರು ಕೆಎಟಿ ಮೂಲಕ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದು ಆ.18ರಂದು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ ಆ.19ರಂದು ಕಚೇರಿಗೆ ನೂತನ ಡಿಹೆಚ್​ಒ ಸುನೀಲ್​ ಕುಮಾರ್ ಕಾಲಿಟ್ಟಿದ್ದು ಹುದ್ದೆಯನ್ನು ಅಲಂಕರಿಸಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಡಿಹೆಚ್​ಒ ಸೀಟ್ ಮೇಲೆ ಕೂರಲು ಇಬ್ಬರ ನಡುವೆ ಕಿತ್ತಾಟ ನಡೆಯುತ್ತಿದೆ.

ಇದನ್ನೂ ಓದಿ: ಸಿಎಂ ಕಚೇರಿಯಿಂದ ಒಂದೇ ಹುದ್ದೆಗೆ ನಾಲ್ವರಿಗೆ ಶಿಫಾರಸು: ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲು​ ವಾಗ್ದಾಳಿ

ಡಿಹೆಚ್​ಒ ಕಚೇರಿಗೆ ಬೀಗ

ಇನ್ನು ಕಳೆದ ಒಂದೂವರೆ ವರ್ಷದಿಂದ ಡಿಹೆಚ್ಒ ಆಗಿ ವಿಜಯೇಂದ್ರ ಕೆಲಸ ಮಾಡ್ತಿದ್ದಾರೆ. ಈ‌ ನಡುವೆ ಹೊಸ ಸರ್ಕಾರದಿಂದ ನೂತನ ಡಿಹೆಚ್ಒ ಆಗಿ ಸುನೀಲ್ ಕುಮಾರ್ ನೇಮಕಗೊಂಡಿದ್ದಾರೆ. ಆದರೆ ಅವಧಿ ಮುಗಿದಿಲ್ಲ ಎಂದು ವರ್ಗಾವಣೆ ಆದೇಶಕ್ಕೆ ಕೆಎಟಿ ಮೋರೆ ಹೋಗಿ ಡಿಹೆಚ್ಒ ವಿಜಯೇಂದ್ರ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೆ ಕಳೆದ ಶುಕ್ರವಾರದಿಂದ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಹೀಗಾಗಿ ಶನಿವಾರ ಸಂಜೆ ಕಚೇರಿಗೆ ಬಂದ ನೂತನ ಡಿಹೆಚ್ಒ ಸುನೀಲ್ ಬೀಗ ಹಾಕಿಕೊಂಡು ಹೋಗಿದ್ದರು. ಡಿಹೆಚ್ಒ ಕೊಠಡಿಗೆ ಬೀಗ ಜಡಿದ ಹಿನ್ನೆಲೆ ಸಿಬ್ಬಂದಿ ಸಂಕಷ್ಟ ಎದುರಿಸುವಂತಾಗಿತ್ತು. ಸದ್ಯ ಇಂದು ನೂತನ ಡಿಹೆಚ್ಒ ಸುನೀಲ್ ಬೆಳ್ಳಂ ಬೆಳಗ್ಗೆ ಕಚೇರಿಗೆ ಆಗಮಿಸಿ ಬೀಗ ತೆಗೆದು ಸೀಟ್​ ಮೇಲೆ ಕುಳಿತಿದ್ದರು. ಸಿಬ್ಬಂದಿ ಆಗಮನಕ್ಕೂ ಮುನ್ನವೇ ಆಗಮಿಸಿ ಡಿಹೆಚ್ಒ ಕಚೇರಿಯ ಬೀಗ ತೆಗೆದು ಒಳಗಡೆ ಕೂತಿದ್ದಾರೆ. ಇಬ್ಬರು ಅಧಿಕಾರಿಗಳ ಜಗಳ ಹಿನ್ನೆಲೆ ಡಿಹೆಚ್ಒರ ಸರ್ಕಾರಿ ಪೋನ್ ಸ್ವಿಚ್ ಆಫ್ ಮಾಡಲಾಗಿದೆ. ಸರ್ಕಾರಿ ಕಾರು ಹೊಸ ಡಿಹೆಚ್ಒ ಸುನೀಲ್ ಬಳಿ ಇದ್ರೆ, ಸರ್ಕಾರಿ ಫೋನ್ ನಂಬರ್ ಹಳೆ ಡಿಹೆಚ್ಒ ವಿಜಯೇಂದ್ರ ಬಳಿ ಇದೆ. ಇಬ್ಬರ ಜಗಳಿಂದಾಗಿ ಸಿಬ್ಬಂದಿ, ಸಾರ್ವಜನಿಕರು ತೊಂದರೆಗೆ ಸಿಲುಕಿದಂತಾಗಿದೆ.

ದೇವನಹಳ್ಳಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ