ಪೋಷಕರ ಮೇಲಿನ ಸೇಡಿಗೆ ಮಕ್ಕಳ ಮೇಲೆ ರಿವೇಂಜ್​​: ಕಿಡಿಗೇಡಿಗಳಿಂದ ಮಕ್ಕಳಿಗೆ ವಿಷಪ್ರಾಶನ

Devanahalli News: ಪೋಷಕರ ಮೇಲಿನ ದ್ವೇಷಕ್ಕೆ ದುಷ್ಕರ್ಮಿಗಳು ಇಬ್ಬರು ಮಕ್ಕಳಿಗೆ ವಿಷಪ್ರಾಶನ ಮಾಡಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದೆ.

ಪೋಷಕರ ಮೇಲಿನ ಸೇಡಿಗೆ ಮಕ್ಕಳ ಮೇಲೆ ರಿವೇಂಜ್​​: ಕಿಡಿಗೇಡಿಗಳಿಂದ ಮಕ್ಕಳಿಗೆ ವಿಷಪ್ರಾಶನ
ವಿಷಪ್ರಾಶನಕ್ಕೊಳಗಾದ ಹೆಣ್ಣುಮಕ್ಕಳು
Follow us
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 03, 2023 | 9:55 PM

ಬೆಂಗಳೂರು ಗ್ರಾಮಾಂತರ, ಆಗಸ್ಟ್​ 03: ಪೋಷಕರ ಮೇಲಿನ ದ್ವೇಷಕ್ಕೆ ದುಷ್ಕರ್ಮಿಗಳು ಇಬ್ಬರು ಮಕ್ಕಳಿಗೆ ವಿಷಪ್ರಾಶನ (poisoned) ಮಾಡಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದೆ. ಅನುಷ ಮತ್ತು ಪಲ್ಲವಿ ಇಬ್ಬರಿಗೆ ಬಲವಂತವಾಗಿ ವಿಷ ಕುಡಿಸಲಾಗಿದೆ. ಇತ್ತೀಚೆಗೆ ನಡೆದ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಸೇಡಿನಿಂದ ಕೃತ್ಯವೆಸಗಲಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಮಾನಸ ಆಸ್ಪತ್ರೆಯಲ್ಲಿ ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದ ಅಶೋಕ್ ಮತ್ತು ಶಿಲ್ಪಾ ದಂಪತಿ ನೆನ್ನೆ ಬೆಳಗ್ಗೆ ನಿದ್ದೆಯೆದ್ದವರೆ ಕೆಲಸಕ್ಕೆ ಅಂತ ತಮ್ಮ ಹೂತೋಟಕ್ಕೆ ತೆರಳಿದ್ದಾರೆ. ಇತ್ತ ಪೋಷಕರು ತೋಟದ ಕಡೆ ತೆರಳುತ್ತಿದ್ದಂತೆ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯಲ್ಲಿದ್ದ ಪಲ್ಲವಿಯನ್ನ ಹೆದರಿಸಿ ವಿಷದ ಬಾಟಲ್ ಅನ್ನ ಕುಡಿಸಿ ಎಸ್ಕೇಪ್ ಆಗಿದ್ದರು.

ಇನ್ನೂ ನಿನ್ನೆ ಘಟನೆಯಿಂದಲೇ ಆತಂಕಕ್ಕೀಡಾಗಿದ್ದ ದಂಪತಿಗಳು ಚೇತರಿಸಿಕೊಳ್ಳುವ ಮುನ್ನ ಇಂದು ಬೆಳಗ್ಗೆ ಮತ್ತೆ ಬಂದ ಕಿಡಿಗೇಡಿಗಳು ಪಕ್ಕದ ಮನೆಯ ಪಲ್ಲವಿಯ ಚಿಕ್ಕಪ್ಪನ ಮಗಳಾದ ಅನುಷಾಳಿಗೂ ಇದೇ ರೀತಿ ಹೆದರಿಸಿ ವಿಷ ಕುಡಿಸಿದ್ದು ನಂತರ ಮನೆಯಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: Crime News: ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

ವಿಷ ಕುಡಿಸಿ ಕಿಡಿಗೇಡಿಗಳು ಎಸ್ಕೇಪ್ ಆಗ್ತಿದ್ದಂತೆ ಪಲ್ಲವಿ ಮನೆಯಿಂದ ಹೊರಗಡೆ ಬಂದು ಕಿರುಚಾಡಿದ್ದು ನಂತರ ಸ್ಥಳಿಯರು ದೇವನಹಳ್ಳಿಯ ಖಾಸಗಿ ಆಸ್ವತ್ರೆಗೆ ಬಾಲಕಿಯನ್ನ ಕರೆತಂದಿದ್ದಾರೆ. ನಿನ್ನೆ ಮತ್ತು ಇಂದು ಸರಣಿ ಒಂದೇ ಕುಟುಂಬದ ಇಬ್ಬರು ಮಕ್ಕಳ ಮೇಲೆ ವಿಷಪ್ರಾಷನ ಕೃತ್ಯ ನಡೆಸಿರುವುದು ಗ್ರಾಮಕ್ಕೆ ಗ್ರಾಮವನ್ನೆ ಒಂದು ಕ್ಷಣ ಬೆಚ್ಚಿ ಬೀಳಿಸಿದೆ.

ನಿನ್ನೆ ಪಲ್ಲವಿಗೆ ವಿಷ ಕುಡಿಸಿ ಎಸ್ಕೇಪ್ ಆಗಿದ್ದ ಖದೀಮರು ಪೊಲೀಸ್ ಕೇಸ್ ಆಗಿದ್ದರು ಇಂದು ಬೆಳಗ್ಗೆ ಮತ್ತೆ ಬಂದು ಅದೇ ಕೃತ್ಯ ಮಾಡಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಇಂದು ಮುಂಜಾನೆ ಬಾಲಕಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಚಾಕುವಿನಿಂದ ಕೈ ಕೊಯ್ದಿದ್ದು ವಿಷ ಕುಡಿಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ವಿಷ ಕುಡಿಸಿದ್ದಾರೆ.

ಇದನ್ನೂ ಓದಿ: ಜಮೀನು ವಿಚಾರಕ್ಕಾಗಿ‌ ಎರಡು ಸಮುದಾಯಗಳ ನಡುವೆ ಮಾರಾಮಾರಿ: ದೂರು ದಾಖಲು

ಪಲ್ಲವಿ ತಾಯಿ ಶಿಲ್ಪ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ ಪರ ಮತ ಚಲಾಯಿಸಿ ಗೆಲ್ಲಿಸಿದ್ದರಂತೆ. ಹೀಗಾಗಿ ರಾಜಕೀಯ ದ್ವೇಷದಿಂದ ಈ ರೀತಿ ಮಕ್ಕಳಿಗೆ ವಿಷ ಕುಡಿಸಿ ನಮ್ಮ ಮೇಲಿನ ಸೇಡನ್ನ ಮಕ್ಕಳ ಮೇಲೆ ತೋರಿಸುತ್ತಿದ್ದಾರೆ ಅಂತ ಆರೋಪಿಸಿದ್ದು, ಗ್ರಾಮಸ್ಥರೆ ಕೃತ್ಯವೆಸಗಿರುವ ಶಂಕೆಯನ್ನ ವ್ಯಕ್ತಪಡಿಸಿದ್ದಾರೆ.

ವೈಯುಕ್ತಿಕ ದ್ವೇಷಗಳಿದಲ್ಲಿ ನೇರ ನೇರವಾಗಿ ಗುದ್ದಾಡುವುದನ್ನ ಬಿಟ್ಟು ಮನೆಯಲ್ಲಿದ್ದ ಮಕ್ಕಳಿಗೆ ವಿಷ ಕುಡಿಸಿ ಅಮಾನವೀಯವಾಗಿ ನಡೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸ. ಈ ಬಗ್ಗೆ ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು ಆರೋಪಿಗಳ ಬಂಧನದ ನಂತರ ವಿಷಪ್ರಾಷನದ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬರಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:27 pm, Thu, 3 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ