ಕಡಿಮೆ ಬೆಲೆಗೆ ಚಿನ್ನ, ಐಫೋನ್, ಲ್ಯಾಪ್ ಟಾಪ್ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ದೋಚಿ ಸಿಕ್ಕಿಬಿದ್ದ ಖತರ್ನಾಕ್ ದಂಪತಿ
ಏರ್ಪೋರ್ಟ್ ಕಸ್ಟಮ್ಸ್ ಆಫೀಸರ್ ಎಂದು ಚಿನ್ನ, ಲ್ಯಾಪ್ ಟಾಪ್, ಐಫೋನ್ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಅರ್ಧ ಬೆಲೆಗೆ ಕೊಡಿಸುವುದಾಗಿ ಹೇಳಿಕೊಂಡು ಜನಗಳಿಂದ ಹಣ ಪೀಕುತ್ತಿದ್ದ ಖತರ್ನಾಕ್ ದಂಪತಿಗಳನ್ನು ಬಂಧಿಸಿದ ಪೊಲೀಸರು.
ಬೆಂಗಳೂರು: ದೇವನಹಳ್ಳಿ ಏರ್ಪೋರ್ಟ್ನಲ್ಲಿಕೆಲಸ ಕೊಡಿಸುವುದಾಗಿ ಹಾಗೂ ಕಡಿಮೆ ಬೆಲೆಗೆ ಚಿನ್ನ, ಐಫೋನ್, ಲ್ಯಾಪ್ ಟಾಪ್ಗಳನ್ನು ಕೊಡಿಸುವುದಾಗಿ ನಂಬಿಸಿ ಹಣ ಪೀಕುತ್ತಿದ್ದ ಖತರ್ನಾಕ್ ದಂಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ದಾರ್ಬಿನ್ದಾಸ್ ಅಲಿಯಾಸ್ ಮೋಹನ್ ದಾಸ್, ಪತ್ನಿ ಧನುಷ್ಯ ಅಲಿಯಾಸ್ ರಾಚೆಲ್ ಬಂಧಿತ ದಂಪತಿ. ಈ ದಂಪತಿ ಕಡಿಮೆ ಬೆಲೆಗೆ ಚಿನ್ನ, ಐಫೋನ್, ಲ್ಯಾಪ್ ಟಾಪ್ಗಳನ್ನು ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ದೋಚಿಕೊಂಡು ಹೋಗಿದ್ದು, ನಂಬಿದವರಿಗೆ ಮಕ್ಮಲ್ ಟೋಪಿ ಹಾಕಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಪ್ರತಿಷ್ಠಿತ ಬ್ರಿಗೇಡ್ ಅರ್ಚಿಡ್ಸ್ (Brigade orchid) ಮತ್ತು ಕೊಡಿಗೇಹಳ್ಳಿ(kodigehalli) ಬಳಿಯ ಫ್ಲಾಟ್ಗಳಲ್ಲಿ ದಾರ್ಬಿನ್ದಾಸ್ ಅಲಿಯಾಸ್ ಮೋಹನ್ ದಾಸ್, ಪತ್ನಿ ಧನುಷ್ಯ ಅಲಿಯಾಸ್ ರಾಚೆಲ್ ಎಂಬ ದಂಪತಿಗಳು ವಾಸವಾಗಿದ್ದರು. ತನ್ನ ಪತಿ ಏರ್ಪೋರ್ಟ್ನ ಕಸ್ಟಮ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಕ್ಕ ಪಕ್ಕದ ಫ್ಲಾಟ್ಗಳಲ್ಲಿರುವ ನಿವಾಸಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ,. ಪತ್ನಿ ಧನುಷ್ಯ ಅಲಿಯಾಸ್ ರಾಚೆಲ್. ಗಂಡನಿಗೆ ಏರ್ಪೋರ್ಟ್ನಲ್ಲಿ ವಿದೇಶದಿಂದ ಬರುವ ಐಫೋನ್ಗಳು, ಕೆಜಿಗಟ್ಟಲೆ ಚಿನ್ನ ಲ್ಯಾಪ್ ಟಾಪ್ಗಳು ಫ್ರೀಯಾಗಿ ಸಿಕ್ತಿದ್ದು, ನಿಮಗೂ ಬೇಕಾದಲ್ಲಿ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸುತ್ತಿದ್ದರು. ಅದೇ ರೀತಿ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒರ್ವ ಮಹಿಳೆ ಬಳಿ ಚಿನ್ನ ಕೊಡಿಸುವುದಾಗಿ ಹೇಳಿ 68 ಲಕ್ಷಕ್ಕೂ ಅಧಿಕ ಹಣ ಪಡೆದು ಎಸ್ಕೇಪ್ ಆಗಿದ್ದರು.
ಸಿಲಿಕಾನ್ ಸಿಟಿಯಲ್ಲಿ ಹಲವು ಕಡೆ ಇದೇ ರೀತಿ ಮಾಡಿದ್ದ ಈ ವಂಚಕ ದಂಪತಿ ನಂತರ ದೇವನಹಳ್ಳಿ ಬಳಿಗೆ ಬಂದಿದ್ದು ಬ್ರಿಗೇಡ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದು, ಅಲ್ಲಿಯು ನಕಲಿ ಐಡಿ ಕಾರ್ಡ್ ತೋರಿಸಿ ಜನರನ್ನು ನಂಬಿಸಿದ್ದರು. ಜೊತೆಗೆ ಪುಟ್ಟ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಪತ್ನಿ ಅಲ್ಲಿಯೂ ಪೋಷಕರ ಜೊತೆ ಸ್ನೇಹ ಬೆಳೆಸಿ ಅವರ ಬಳಿಯು ಹೆಚ್ಚಿನ ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದರು. ಹೀಗಾಗಿ ಕಡಿಮೆ ಬೆಲೆಗೆ ಚಿನ್ನ, ಐಪೋನ್, ಲ್ಯಾಪ್ ಟಾಪ್ಗಳು ಸಿಗುತ್ತದೆ. ಎಂದು ನಂಬಿ ಲಕ್ಷ ಲಕ್ಷ ಹಣ ಕೊಟ್ಟಿದ್ದವರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.
ಹಣ ಕೊಟ್ಟ ಮೇಲೆ ವಂಚನೆಯಾಗಿರುವ ವಿಚಾರ ತಿಳಿದ ಒಂದಷ್ಟು ಜನ ದೇವನಹಳ್ಳಿ ಮತ್ತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಖತರ್ನಾಕ್ ದಂಪತಿ ವಿರುದ್ದ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಇಬ್ಬರು ಖತರ್ನಾಕ್ ವಂಚಕ ದಂಪತಿಯನ್ನು ಉಡುಪಿಯ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ ಬಂದಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಸೇರ್ಪಡೆ, ಡಿಲೀಟ್: ಮುಸ್ಲಿಂ ಹಾಗೂ ದಲಿತರೇ ಟಾರ್ಗೆಟ್
ಬಂಧಿತ ದಂಪತಿ ಆರೋಪಿಗಳಿಂದ ಈಶಾನ್ಯ ವಿಭಾಗ ಪೊಲೀಸರು 30 ಲಕ್ಷ 50 ಸಾವಿರ ನಗದು ಹಣ, 106 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇನ್ನೂ ಮುಂದೆಯಾದರೂ ಜನರು ಅರ್ಧ ಬೆಲೆಗೆ ಚಿನ್ನ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕೊಡಿಸುತ್ತಾರೆ ಎಂದು ನಂಬುವ ಮುನ್ನ ಎಚ್ಚರವಹಿಸುವುದು ಒಳ್ಳೆಯದು.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ