ಬೆಂಗಳೂರಿನಲ್ಲಿ ಮತ್ತೊಂದು ಹಿಟ್​ ಆ್ಯಂಡ್​ ರನ್: ತಾಯಿ ಸಾವು, ಮಗುವಿನ ಸ್ಥಿತಿ ಗಂಭೀರ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2024 | 3:58 PM

ದೊಡ್ಡಬಳ್ಳಾಪುರದ ನಂದಿಮೋರಿ ಬಳಿ ಅಪರಿಚಿತ ವಾಹನದ ಹಿಟ್ ಆ್ಯಂಡ್ ರನ್‌ನಲ್ಲಿ 25 ವರ್ಷದ ತಾಯಿ ಸಾವನ್ನಪ್ಪಿದ್ದಾರೆ. ಅವರ 4 ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ. ಶಾಲೆಯಿಂದ ಮಗುವನ್ನು ಮನೆಗೆ ಕರೆದುಕೊಂಡು ಬರುವಾಗ ಈ ದುರ್ಘಟನೆ ನಡೆದಿದೆ. ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಆನ್‌ಲೈನ್ ಗೇಮಿಂಗ್‌ನಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಮತ್ತೊಂದು ಹಿಟ್​ ಆ್ಯಂಡ್​ ರನ್: ತಾಯಿ ಸಾವು, ಮಗುವಿನ ಸ್ಥಿತಿ ಗಂಭೀರ
ಬೆಂಗಳೂರಿನಲ್ಲಿ ಮತ್ತೊಂದು ಹಿಟ್​ ಆ್ಯಂಡ್​ ರನ್: ತಾಯಿ ಸಾವು, ಮಗುವಿನ ಸ್ಥಿತಿ ಗಂಭೀರ
Follow us on

ದೇವನಹಳ್ಳಿ, ಡಿಸೆಂಬರ್​ 04: ಅಪರಿಚಿತ ವಾಹನವೊಂದು ಹಿಟ್ ಆ್ಯಂಡ್ ರನ್ (Hit and Run) ಮಾಡಿ ಚಾಲಕ ಪರಾರಿಯಾಗಿದ್ದು, ತಾಯಿ ಮೃತಪಟ್ಟಿದ್ದರೆ, ಮಗುವಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ನಂದಿಮೋರಿ ಬಳಿ ನಡೆದಿದೆ. ನಗರದ ಪಾಲನಜೋಗಹಳ್ಳಿ ನಿವಾಸಿ ಭಾನುಪ್ರಿಯ (25) ಮೃತ ದುರ್ದೈವಿ. ಮನೋಜ್ (4) ಗಂಭೀರವಾಗಿ ಗಾಯಗೊಂಡ ಮಗು.

ಶಾಲೆಯಿಂದ ಮಗುವನ್ನು ವಾಪಸ್ ಮನೆಗೆ ಕರೆದುಕೊಂಡು ಬರುವ ವೇಳೆ‌ ದುರ್ಘಟನೆ ನಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸಾವ್ರದಿಂದಾಗಿ ತಾಯಿ ಭಾನುಪ್ರಿಯ ಸಾವನ್ನಪ್ಪಿದ್ದಾರೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ಆಸ್ವತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಸರ್ಕಾರಿ ಆಸ್ವತ್ರೆಯ ಶವಾಗಾರಕ್ಕೆ ಮೃತ ದೇಹ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಆನ್​ಲೈನ್​ ಗೇಮಿಂಗ್​ಗೆ ಯುವಕ ಸಾವು

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಆನ್​ಲೈನ್​ ಗೇಮಿಂಗ್​ಗೆ ಯುವಕ ಬಲಿಯಾಗಿರುವಂತಹ ಘಟನೆ 10 ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ನೇಣುಬಿಗಿದುಕೊಂಡು ಪ್ರವೀಣ್(19)​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆನ್​ಲೈನ್​​ ಗೇಮ್​ ಹುಚ್ಚಿಗೆ ಕಾಲೇಜಿಗೂ ಹೋಗುತ್ತಿರಲಿಲ್ಲ. ಆನ್​ಲೈನ್ ಗೇಮ್ ಆಡಲು ಸಾಲ ಮಾಡಿಕೊಂಡಿದ್ದ. ಇತ್ತೀಚೆಗೆ ಪ್ರವೀಣ್​ಗೆ ಸಾಲಗಾರರ ಕಾಟ ಕೂಡ ಜಾಸ್ತಿ ಆಗಿತ್ತು. ಸಾಲ‌ ನೀಡಿದವರು ಬ್ಲ್ಯಾಕ್​ ಮೇಲ್ ಮಾಡಿದ ಆರೋಪ ಕೂಡ ಕೇಳಿಬಂದಿದೆ.

ಇದನ್ನೂ ಓದಿ: ಬೈಕ್ ಕಳ್ಳತನ ಆರೋಪಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಹುಬ್ಬಳ್ಳಿ ಪೊಲೀಸರ ಹಣದ ದಾಹ ಬಯಲು

ಆನ್​ಲೈನ್ ಗೇಮ್​ನಿಂದ ಗೆದ್ದ ಹಣವನ್ನೂ ತೆಗೆದುಕೊಳ್ಳುತ್ತಿದ್ದರಂತೆ. ಇದೇ ಕಾರಣಕ್ಕೆ ಬೇಸತ್ತು ಯುವಕ ಪ್ರವೀಣ್​ ಆತ್ಮಹತ್ಯೆ ಆರೋಪ ಮಾಡಲಾಗಿದೆ. 3 ದಿನದ ಹಿಂದೆ ಕೆ.ಆರ್.ಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವ್ಹೀಲಿಂಗ್​ ಮಾಡುತ್ತಿದ್ದ 11 ಬೈಕ್​ ​ಪುಂಡರ ಬಂಧನ: 10 ಬೈಕ್​ ವಶಕ್ಕೆ

ಬೆಂಗಳೂರಿನಲ್ಲಿ ವ್ಹೀಲಿಂಗ್​ ಪುಂಡರ ವಿರುದ್ಧ ಪೊಲೀಸರು ಕಾರ್ಯಾಚರಣೆ ಮಾಡಿ ವ್ಹೀಲಿಂಗ್​ ಮಾಡುತ್ತಿದ್ದ 11 ಬೈಕ್​ ​ಪುಂಡರ ಬಂಧಿಸಿದ್ದು, 10 ಬೈಕ್​ ವಶಕ್ಕೆ ಪಡೆಯಲಾಗಿದೆ. ನಗರದ ಟಿಸಿ ಪಾಳ್ಯ, ಹೆಚ್​ಬಿಆರ್​ ಲೇಔಟ್​ನಲ್ಲಿ ವ್ಹೀಲಿಂಗ್​ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರ ಮೇಲೆ K.R.ಪುರ, ಕೆಜಿ ಹಳ್ಳಿ ಸಂಚಾರಿ ಠಾಣೆಯಲ್ಲಿ FIR ದಾಖಲಿಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.