ನಂದಿ ಬೆಟ್ಟ ಸುತ್ತು ಹಾಕಿಕೊಂಡು ಬಂದ ದುಬೈ ವಿಮಾನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ತುರ್ತು ಭೂಸ್ವರ್ಶ
ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. 200 ಪ್ರಯಾಣಿಕರನ್ನ ಹೊತ್ತು ಹಾರಿದ್ದ ವಿಮಾನ ತಾಂತ್ರಿಕ ದೋಷದಿಂದ ಭೂಸ್ಪರ್ಶ ಮಾಡಿದೆ.
ದೇವನಹಳ್ಳಿ: ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ(Kempegowda International Airport Bengaluru) ನಿನ್ನೆ(ಮಾರ್ಚ್ 02) ರಾತ್ರಿ 9.07ಕ್ಕೆ ನಡೆದಿದೆ. ದುಬೈಗೆ ತೆರಳುತ್ತಿದ್ದ ಎತಿಹಾದ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಮತ್ತೆ ವಾಪಾಸ್ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷದಿಂದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
EY 237 ಸಂಖ್ಯೆಯ ಎತಿಹಾದ್ ವಿಮಾನ 200 ಪ್ರಯಾಣಿಕರನ್ನ ಹೊತ್ತು ಬೆಂಗಳೂರಿನಿಂದ ಅಬುದಭಿಗೆ ಹಾರಿತ್ತು. ಈ ವೇಳೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ನಂದಿ ಬೆಟ್ಟ ಸುತ್ತು ಹಾಕಿಕೊಂಡು ತಕ್ಷಣವೇ ತುರ್ತು ಭೂಸ್ಪರ್ಶ ಮಾಡಿದೆ. ನಂತರ ದೋಷ ಸರಿಪಡಿಸಿಕೊಂಡು ನಾಲ್ಕು ಗಂಟೆ ತಡವಾಗಿ ವಿಮಾನ ಅಬುದಭಿಗೆ ತೆರಳಿದೆ. ಘಟನೆ ವೇಳೆ ಪ್ರಯಾಣಿಕರಲ್ಲಿ ಕೆಲ ಹೊತ್ತು ಆತಂಕ ಮೂಡಿತ್ತು.
ಟರ್ಮಿನಲ್ 2ರಿಂದ ವಿಸ್ತಾರ ವಿಮಾನ ಸೇವೆ; ಮಾರ್ಚ್ 26ರಿಂದ ಲಭ್ಯ
ಬೆಂಗಳೂರು: ಟಾಟಾ ಸಮೂಹದ (Tata Group) ಸಿಂಗಾಪುರ ಏರ್ಲೈನ್ಸ್ ಬ್ರ್ಯಾಂಡ್ ಆಗಿರುವ ‘ವಿಸ್ತಾರ (Vistara)’ ಮಾರ್ಚ್ 26ರಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2ರಿಂದ ಸೇವೆ ಆರಂಭಿಸಲಿದೆ. ಇದರೊಂದಿಗೆ, ಟರ್ಮಿನಲ್ 2ರಿಂದ ಕಾರ್ಯಾಚರಣೆ ಆರಂಭಿಸುತ್ತಿರುವ ಮೂರನೇ ವಿಮಾನಯಾನ ಸಂಸ್ಥೆಯಾಗಲಿದೆ. ‘ಡಿಯರ್ ಬೆಂಗಳೂರು, ನಾವು ಟರ್ಮಿನಲ್ 2 ಅನ್ನು ಪ್ರವೇಶಿಸುತ್ತಿದ್ದೇವೆ. ನಮ್ಮ ವಿಮಾನಗಳು ಮಾರ್ಚ್ 26ರಿಂದ ಟರ್ಮಿನಲ್ 2ರಿಂದ ಕಾರ್ಯಾಚರಣೆ ಮಾಡಲಿವೆ’ ಎಂದು ಟ್ವೀಟ್ ಮೂಲಕ ವಿಸ್ತಾರ ಮಾಹಿತಿ ನೀಡಿದೆ. ವಿಸ್ತಾರ ವಿಮಾನಗಳು ಬೆಂಗಳೂರಿನಿಂದ ಮುಂಬೈ, ಗೋವಾ, ಡೆಹ್ರಾಡೂನ್, ದೆಹಲಿ, ಹೈದರಾಬಾದ್, ಪುಣೆ ಹಾಗೂ ಚಂಡೀಗಢಕ್ಕೆ ತೆರಳುತ್ತವೆ.
ಪ್ರಸ್ತುತ ಏರ್ ಏಷ್ಯಾ, ಸ್ಟಾರ್ ಏರ್ವೇಸ್ ಟರ್ಮಿನಲ್ 2ರಿಂದ ಕಾರ್ಯಾಚರಣೆ ನಡೆಸುತ್ತಿವೆ. ಜನವರಿ 15ರಂದು ಸ್ಟಾರ್ ಏರ್ವೇಸ್ ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ತೆರಳುವ ಮೂಲಕ ಟರ್ಮಿನಲ್ 2ರಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ಮತ್ತು ಡ್ರಾಪ್ ಮಾಡಲು ಸುಗಮ ವಾಹನ ಆಗಮನ, ನಿರ್ಗಮನಕ್ಕಾಗಿ ಟರ್ಮಿನಲ್ 2ಗೆ ಐದು ಪಥದ ಮಾರ್ಗವೂ ಇದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:41 pm, Mon, 3 April 23