ಸಿಡಿದೆದ್ದ ತಿಗಳ ಸಮುದಾಯದ ನಾಯಕರು: ಹೂಡಿ ವಿಜಯ್ ಕುಮಾರ್ ಗೆ ಮಾಲೂರು ಟಿಕೆಟ್ ನೀಡದಿದ್ದರೆ ಬಿಜೆಪಿಗೆ ಮತ ಹಾಕಲ್ಲ ಎಂದು ಎಚ್ಚರಿಕೆ
ಈ ಬಾರಿಯ ಮಾಲೂರು ಬಿಜೆಪಿ ಟಿಕೆಟನ್ನು ಹೂಡಿ ವಿಜಯ್ ಕುಮಾರ್ ಗೆ ನೀಡುವಂತೆ ದ್ರೌಪದಮ್ಮ ದೇವಾಲಯದಲ್ಲಿ ಕರ್ಪೂರ ಹಚ್ಚಿ ಘೋಷಣೆ ಕೂಗಿ ಒತ್ತಾಯಿಸಿದ್ದಾರೆ.
ದೇವನಹಳ್ಳಿ: ಬಿಜೆಪಿ ವಿರುದ್ಧ ವಹ್ನಿಕುಲ ತಿಗಳ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಈ ಬಾರಿಯ ಮಾಲೂರು ಟಿಕೆಟನ್ನು ಹೂಡಿ ವಿಜಯ್ ಕುಮಾರ್ ಗೆ ನೀಡುವಂತೆ ದ್ರೌಪದಮ್ಮ ದೇವಾಲಯದಲ್ಲಿ ಕರ್ಪೂರ ಹಚ್ಚಿ ಘೋಷಣೆ ಕೂಗಿ ಒತ್ತಾಯಿಸಿದ್ದಾರೆ. ಟಿಕೆಟ್ ನೀಡದಿದ್ದರೆ ತಿಗಳ ಸಮುದಾಯ ಬಿಜೆಪಿ ವಿರುದ್ಧ ನಿಲ್ಲುವುದಾಗಿ ಹೊಸಕೋಟೆಯಲ್ಲಿ ವಹ್ನಿಕುಲ ತಿಗಳ ಸಮುದಾಯದ ರಾಜ್ಯಾಧ್ಯಕ್ಷ ಜಯರಾಜ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದ ತಿಗಳ ಸಮುದಾಯದ ಮುಖಂಡ ಹೂಡಿ ವಿಜಯ್ ಕುಮಾರ್ ಗೆ ಮಾಲೂರು ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ದ್ರೌಪದಮ್ಮ ದೇವಾಲದಯಲ್ಲಿ ಸಭೆ ಸೇರಿದ ತಿಗಳ ಸಮುದಾಯದ ಮುಖಂಡರು ನಮ್ಮ ಸಮುದಾಯದಲ್ಲಿ ಪ್ರಬಲ ರಾಜಕೀಯ ನಾಯಕರಿಲ್ಲ. ಆದ್ರೆ ಈ ಬಾರಿ ಪ್ರಬಲ ನಾಯಕರಾಗಿ ಹೂಡಿ ವಿಜಯ್ ಕುಮಾರ್ ಬಂದಿದ್ದು ಮಾಲೂರಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಹೂಡಿ ವಿಜಯ್ ಕುಮಾರ್ ಗೆ ಮಾಲೂರು ಟಿಕೆಟ್ ನೀಡಿ ಆ ಮೂಲಕ ಸಮುದಾಯಕ್ಕೆ ಓರ್ವ ನಾಯಕನನ್ನ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತೆಲೆ ಚೆಚ್ಚಿಕೊಂಡ ಸಂಡೂರು ಶಾಸಕ
ಜೊತೆಗೆ ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ರು ಹೊಸಕೋಟೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವ ಮಾಜಿ ಶಾಸಕ ಮಂಜುನಾಥಗೌಡಗೆ ಯಾವುದೇ ಕಾರಣಕ್ಕೂ ಈ ಬಾರಿ ಟಿಕೆಟ್ ನೀಡಬಾರದು ಅಂತ ಒತ್ತಾಯಿಸಿದ್ದಾರೆ. ಇನ್ನೂ ಒಂದು ವೇಳೆ ಹೂಡಿ ವಿಜಯಕುಮಾರ್ ಗೆ ಹೊರತು ಪಡಿಸಿ ಬೇರೆಯವರಿಗೆ ಮಾಲೂರಿನ ಬಿಜೆಪಿ ಟಿಕೆಟ್ ನೀಡಿದಲ್ಲಿ ಅವರ ವಿರುದ್ಧ ರಾಜ್ಯಾದ್ಯಂತ ತಿಗಳ ಸಮುದಾಯ ತಿರುಗಿಬೀಳಲಿದ್ದು ಬಿಜೆಪಿ ವಿರುದ್ದವಾಗಿ ಮತ ಚಲಾಯಿಸುವುದಾಗಿ ತಿಗಳ ಸಮುದಾಯದ ರಾಜ್ಯಾಧ್ಯಕ್ಷ ಜಯರಾಜ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ