ಬೆಂಗಳೂರು​: ದೇವರ ಕೋಣೆಯಲ್ಲಿ ಹಚ್ಚಿದ್ದ ದೀಪದಿಂದ ಅಗ್ನಿ ಅವಘಡ;ತಾಯಿ-ಮಗಳನ್ನ ರಕ್ಷಿಸಿದ ಅಗ್ನಿಶಾಮಕ ದಳ ಸಿಬ್ಬಂದಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 26, 2024 | 5:10 PM

ಎಲೆಕ್ಟ್ರಾನಿಕ್ ಸಿಟಿಯ(Electronic City) ನೀಲಾದ್ರಿ ನಗರದಲ್ಲಿನ ಕಾನ್​ಕಾರ್ಡ್ ಕುಪರ್ಟಿನೊ ಲೇಔಟ್​​ನ ವಿಲ್ಲಾದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಠಾಣಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಾಯಿ-ಮಗಳು ಬಚಾವ್ ಆಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಬಟ್ಟೆ, ಮಂಚ, ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಬೆಂಗಳೂರು​: ದೇವರ ಕೋಣೆಯಲ್ಲಿ ಹಚ್ಚಿದ್ದ ದೀಪದಿಂದ ಅಗ್ನಿ ಅವಘಡ;ತಾಯಿ-ಮಗಳನ್ನ ರಕ್ಷಿಸಿದ ಅಗ್ನಿಶಾಮಕ ದಳ ಸಿಬ್ಬಂದಿ
ಎಲೆಕ್ಟ್ರಾನಿಕ್ ಸಿಟಿ ಅಗ್ನಿ ಅವಘಡ
Follow us on

ಬೆಂಗಳೂರು, ಮಾ.26: ಎಲೆಕ್ಟ್ರಾನಿಕ್ ಸಿಟಿಯ(Electronic City) ನೀಲಾದ್ರಿ ನಗರದಲ್ಲಿನ ಕಾನ್​ಕಾರ್ಡ್ ಕುಪರ್ಟಿನೊ ಲೇಔಟ್​​ನ ವಿಲ್ಲಾದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಠಾಣಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಾಯಿ-ಮಗಳು ಬಚಾವ್ ಆಗಿದ್ದಾರೆ. ಇನ್ನು ಈ ವಿಲ್ಲಾದಲ್ಲಿ ಅನುಪ್ ಅಂಜನ್ ಮತ್ತು ಮೇಹಾ ದಂಪತಿ ವಾಸವಿದ್ದು, ಇಂದು ಬೆಳಿಗ್ಗೆ ದೇವರ ಕೋಣೆಯಲ್ಲಿ ದೀಪ ಹಚ್ಚಿ ಬಾಲ್ಕನಿಯ ರೂಮ್​ವೊಂದರಲ್ಲಿ ತಾಯಿ-ಮಗಳು ಇದ್ದರು. ಈ ವೇಳೆ ದೇವರ ಕೋಣೆಯಲ್ಲಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡಿದೆ.

ಇದರಿಂದ ಗ್ರೌಂಡ್ ಪ್ಲೋರ್​ನಲ್ಲಿ ಬೆಂಕಿ ಸಂಪೂರ್ಣವಾಗಿ ಆವರಿಸಿದೆ. ಈ ವೇಳೆ ಬಾಲ್ಕನಿಯಿಂದ ಕೆಳಗೆ ಬರಲಾಗದೆ ತಾಯಿ-ಮಗಳ ರೋಧನೆ ಅನುಭವಿಸಿದ್ದಾರೆ. ಬಳಿಕ ತಾಯಿ-ಮಗಳ ಕಿರುಚಾಟ ಕೇಳಿದ ಸ್ಥಳೀಯರು, ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಅಗ್ನಿ ಅವಘಡದಲ್ಲಿ ಸಿಲುಕಿದ್ದ ತಾಯಿ-ಮಗಳನ್ನು ರಕ್ಷಿಸಿ, ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಬಟ್ಟೆ, ಮಂಚ, ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಇದನ್ನೂ ಓದಿ:ಉಡುಪಿಯಲ್ಲಿ ರಣ ಬಿಸಿಲು: ಅಗ್ನಿಶಾಮಕ ವಾಹನಗಳು ಗುಜರಿ ಸೇರಿವೆ, ಅಗ್ನಿ ಅವಘಡಕ್ಕೆ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ!

ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಬೆಂಕಿ ಅವಘಡ

ಬೆಂಗಳೂರು: ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಬೆಂಕಿ ಅವಘಡ ಸಂಭವಿಸಿದೆ. ವೇಸ್ಟ್ ಬಟ್ಟೆ, ಬೆಡ್ ಹಾಕಿದ್ದ ಕಂಟೇನರ್​ನಲ್ಲಿ ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು,ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಕೂಡಲೇ 2 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ