ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 27, 2024 | 5:35 PM

ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 23 ಲಕ್ಷಕ್ಕೂ ಅಧಿಕ ಮೊತ್ತದ ವಂಚನೆ ನಡೆದಿದೆ. ಆಭರಣ ಮೌಲ್ಯಮಾಪಕ ಮಂಜುನಾಥ ಎಂಬಾತ ನಕಲಿ ಚಿನ್ನಾಭರಣ ಅಡವಿಟ್ಟು ವಂಚಿಸಿದ್ದಾರೆ. ಅನೇಕ ಜನರ ಖಾತೆಗಳನ್ನು ಬಳಸಿಕೊಂಡು ಕೃತ್ಯ ಎಸಗಲಾಗಿದೆ. ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ
ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ
Follow us on

ನೆಲಮಂಗಲ, ಡಿಸೆಂಬರ್​ 27: ಆಭರಣ ಮೌಲ್ಯಮಾಪಕನಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ 23 ಲಕ್ಷಕ್ಕೂ ಹೆಚ್ಚು ಹಣ ವಂಚನೆ (fraud) ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಆಭರಣ ಮೌಲ್ಯಮಾಪಕ ಮಂಜುನಾಥ ವಂಚಕ. ನೆಲಮಂಗಲ ಪೊಲೀಸ್ ಠಾಣೆಗೆ ಮ್ಯಾನೇಜರ್ ಆನಂದ್ ದೂರು ನೀಡುತ್ತಿದ್ದಂತೆ ಇತ್ತ ವಂಚಕ ಪರಾರಿ ಆಗಿದ್ದಾರೆ. ತಂಗಿಯ ಮದುವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ ಎದರಾಗಿದೆ.

ಅರ್ಧ ಕೆಜಿಯಷ್ಟು ನಕಲಿ ಚಿನ್ನಾಭರಣ ಅಡವಿಟ್ಟು ಮಂಜುನಾಥ ವಂಚಿಸಿದ್ದಾರೆ. ಆದರ್ಶ ಹೆಸರಿನಲ್ಲಿ 3 ಲಕ್ಷ ರೂ., ಲೋಕೇಶ್ ಹೆಸರಿನಲ್ಲಿ 4 ಲಕ್ಷ ರೂ., ಸುದರ್ಶನ್ ಹೆಸರಿನಲ್ಲಿ 3 ಲಕ್ಷ ರೂ., ಗಿರೀಶ್ ಹೆಸರಿನಲ್ಲಿ 5 ಲಕ್ಷ ರೂ., ಐಶ್ವರ್ಯ ಹೆಸರಿನಲ್ಲಿ 3 ಲಕ್ಷ ರೂ. ಮತ್ತು ಹರೀಶ್ ಹೆಸರಿನಲ್ಲಿ 3 ಲಕ್ಷ ರೂ. ಹೀಗೆ ಬೇರೆ ಬೇರೆಯವರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಲಾಗಿದೆ.

ಇದನ್ನೂ ಓದಿ: ಮಾರಿಕಾಂಬೆ ದೇವಿಯ ಗೊಂಬೆ ನಾಪತ್ತೆ: ಮುರಿನಕಟ್ಟೆಯಲ್ಲಿ ಸ್ಥಳೀಯರು, ಪೊಲೀಸರ ನಡುವೆ ಮಾತಿನ ಚಕಮಕಿ

ತಂಗಿ ಮದುವೆ ಸಾಲವಿದೆ ಎಂದು ಬೇರೆಯವರನ್ನು ಕರೆತಂದು ಬೇರೆಯವರ ಬ್ಯಾಂಕ್ ಖಾತೆ ಮೂಲಕ ನಕಲಿ ಚಿನ್ನಾಭರಣ ಅಡಮಾನವಿಡಲಾಗಿದೆ. ಆಭರಣ ಪರೀಕ್ಷೆ ವೇಳೆ ನಕಲಿ ಚಿನ್ನಾಭರಣವೆಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್​ ಆನಂದ್ ಪತ್ತೆಹಚ್ಚಿದ್ದಾರೆ. ಸದ್ಯ ಪೊಲೀಸರಿಗೆ ದೂರು ನೀಡಿದ್ದು, ವಂಚಕನ ಮಾತಿಗೆ ಮರುಳಾಗಿ ಖಾತೆಗೆ ಹಣ ಹಾಕಿಸಿಕೊಂಡವರಿಗೂ ಪೊಲೀಸರಿಂದ ನೋಟಿಸ್ ನೀಡಲಾಗಿದೆ.

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿ ಪರಾರಿಯಾದ ಕಳ್ಳ

ಇನ್ನು ಖರೀದಿ ನೆಪದಲ್ಲಿ ಖತರ್ನಾಕ್ ಕಳ್ಳ ಚಿನ್ನದ ಸರ ಎಗರಿಸಿ ಪರಾರಿಯಾಗಿರುವಂತಹ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ನಗರದ ರಥಬೀದಿಯ ಎಸ್​​ಜೆ‌ ಅರ್ಕೆಡ್ ಬಳಿ‌ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರಿಂದ ಕಳ್ಳನ ಪತ್ತೆಗಾಗಿ ಶೋಧ ನಡೆದಿದೆ. ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಪೊಲೀಸರನ್ನೂ ಬಿಡದ ಸೈಬರ್ ವಂಚಕರು: ಬೆಂಗಳೂರಿನ ಹಲವು ಪೊಲೀಸರ ವಾಟ್ಸ್ಆ್ಯಪ್, ಮೊಬೈಲ್ ಹ್ಯಾಕ್!

ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳ 30 ಗ್ರಾಂ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿ ಆಗಿದ್ದಾನೆ. ಚಿನ್ನದ ಸರಗಳನ್ನು ಮಹಿಳಾ ಸಿಬ್ಬಂದಿ ತೋರಿಸುತ್ತಿದ್ದರು. ಇದೇ ವೇಳೆ ಕೈಗೆ ಸಿಕ್ಕ ಸರವನ್ನು ಎಳೆದು ನೋಡ ನೋಡುತ್ತಿದ್ದಂತೆ ಕಳ್ಳ ಎಗರಿಸಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:34 pm, Fri, 27 December 24