ಬೆಂಗಳೂರು ಗ್ರಾಮಾಂತರ, ಆ.14: ಜಿಲ್ಲೆಯ ದೇವನಹಳ್ಳಿ() ತಾಲೂಕಿನ ವಿಜಯಪುರ ಪಟ್ಟಣದ ಜಯಲಕ್ಷ್ಮಮ್ಮ ಮತ್ತು ನಾಗಪ್ಪ ಎನ್ನುವ ಈ ದಂಪತಿ ಜೀವನೋಪಾಯಕ್ಕೆ ಎಂದು ಕುರಿ ಮತ್ತು ಮೇಕೆಗಳನ್ನ ಮೇಯಿಸಿಕೊಂಡಿದ್ದು, ಹಳೆಯ ಮನೆಯಲ್ಲೆ ವಾಸವಾಗಿದ್ದರು. ಜೊತೆಗೆ ಕಳೆದ ಒಂದು ವರ್ಷದಿಂದೆ ವೃದ್ದ ನಾಗಪ್ಪಗೆ ಅನಾರೋಗ್ಯವಾಗಿದೆ ಎಂದು ತಿಳಿದವರ ಮೂಲಕ ಜನಸ್ಮಾಲ್ ಪೈನಾನ್ಸ್ ಬ್ಯಾಂಕ್ನಿಂದ 2 ಲಕ್ಷ ಹಣ ಪಡೆದಿದ್ದರಂತೆ. ಜೊತೆಗೆ 1 ಲಕ್ಷ 90 ಸಾವಿರ ಹಣವನ್ನ ವೃದ್ದೆ ತೀರಿಸಿದ್ದು, ಉಳಿದ ಹಣ ಕಟ್ಟಲು ತಡ ಮಾಡಿದ್ದಾರೆ.
ಹೀಗಾಗಿ ಕಟ್ಟಿದ ಹಣ ಬಡ್ಡಿಗೆ ಸರಿಹೋಯ್ತು, ಅಸಲು ಕಟ್ಟಬೇಕು ಎಂದು ಮನೆ ಬಳಿಗೆ ಬಂದ ಪೈನಾನ್ಸ್ ಸಿಬ್ಬಂದಿ, ಮನೆಯಲ್ಲೆ ಕುರಿ ಮೇಕೆ ಮತ್ತು ಕೋಳಿಯನ್ನ ಬಿಟ್ಟು ಮನೆ ಡೋರ್ಗೆ ಬೀಗ ಹಾಕಿDevanahalli ಅಮಾನವೀಯವಾಗಿ ವರ್ತಿಸಿ ಲಾಕ್ ಮಾಡಿಕೊಂಡು ಹೋಗಿದ್ದಾರೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಮನೆಯ ಮೇಲ್ಚಾವಣಿಗೆ ಏಣಿ ಹಾಕಿಕೊಂಡು ಜಾನುವಾರುಗಳಿಗೆ ವೃದ್ದ ದಂಪತಿ ಮೇವು ನೀರು ನೀಡುತ್ತಾ ಮನೆಯಿಲ್ಲದೆ ಪರದಾಡಿದ್ದಾರೆ.
ಇದನ್ನೂ ಓದಿ:ದೇವನಹಳ್ಳಿ: ಹುಟ್ಟಹಬ್ಬ ಆಚರಿಸಲು ಲಾಗ್ಡ್ರೈವ್ ಹೊರಟಿದ್ದ ಯುವಕರ ವಾಹನ ಅಪಘಾತ, ಇಬ್ಬರು ಸಾವು
ವೃದ್ದ ದಂಪತಿ ಮನೆಯಿಲ್ಲದೆ ಜಾನುವಾರುಗಳನ್ನ ಸಾಕಲು ಪರದಾಡುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಅಧಿಕಾರಿಗಳ ಸಮೇತ ಭೇಟಿ ನೀಡಿದರು. ಜತೆಗೆ ಪೈನಾನ್ಸ್ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್, ಜಾನುವಾರುಗಳನ್ನ ಮನೆಯಲ್ಲಿಟ್ಟು ಸೀಜ್ ಮಾಡಿದಕ್ಕೆ ಪುಲ್ ಗರಂ ಆದರು. ಅಲ್ಲದೆ ಸಿಬ್ಬಂದಿಯಿಂದ ಮನೆಯ ಬೀಗ ಒಡೆದು ಹಾಕಿಸಿ ವೃದ್ದರನ್ನ ಮನೆ ಒಳಗಡೆ ಕಳಿಸಿದ್ದು, ಪೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಲು ಬಂದ್ರೆ ತಮಗೆ ದೂರು ನೀಡುವಂತೆ ವೃದ್ದ ದಂಪತಿಗೆ ದೈರ್ಯ ಹೇಳಿದರು.
ಜೊತೆಗೆ ವೃದ್ದ ದಂಪತಿಯ ಪರಿಸ್ಥಿತಿಯನ್ನ ಕಂಡ ತಹಶಿಲ್ದಾರ್ ವೈಯುಕ್ತಿಕವಾಗಿ ವೃದ್ದರಿಗೆ 5 ಸಾವಿರ ನಗದು ಹಣವನ್ನ ನೀಡಿ ಸಹಾಯ ಮಾಡಿದ್ದು, ಮುಂದಿನ ದಿನಗಳಲ್ಲಿ ವೃದ್ದರಿಗೆ ಸರ್ಕಾರದ ವತಿಯಿಂದ ಸೂರು ಕಲ್ಪಿಸುವ ಭರವಸೆಯನ್ನ ನೀಡಿದರು. ಒಟ್ಟಾರೆ ವೃದ್ದರು ಜಾನುವಾರುಗಳನ್ನ ಮನೆಯಲ್ಲಿಟ್ಟು ಖಾಸಗಿ ಪೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದಿದ್ದು ನಿಜಕ್ಕೂ ಅಮಾನವೀಯ. ಇನ್ನು ಖಾಸಗಿ ಪೈನಾನ್ಸ್ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ತಹಶೀಲ್ದಾರ್ ಮುಂದಾಗಿದ್ದು, ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಖಾಸಗಿ ಪೈನಾನ್ಸ್ಗಳಿಗೆ ಬುದ್ದಿ ಕಲಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ