ದೇವನಹಳ್ಳಿ: ಅಪಾರ್ಟ್ಮೆಂಟ್ (Apartment) ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ. ಶೆಡ್ ಮೇಲೆ ಗೋಡೆ ಕುಸಿದು ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಮೃತ ಕಾರ್ಮಿಕರು ಉತ್ತರ ಭಾರತ ಮೂಲದ ನಿವಾಸಿಗಳು. ಶೆಡ್ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು. ಈ ವೇಳೆ ಅಪಾರ್ಟ್ಮೆಂಟ್ ಗೋಡೆ ಕುಸಿದಿದೆ. ಉಳಿದ ನಾಲ್ಕು ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳಕ್ಕೆ ಎಎಸ್ಪಿ ಪುರುಷೋತ್ತಮ್ ಹಾಗೂ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖಾಸಗಿ ಸಂಸ್ಥೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಿತ್ತು. ಕೂಲಿ ಕಾರ್ಮಿಕರು ಸೌಪರ್ಣಿಕಾ ಅಪಾರ್ಟ್ಮೆಂಟ್ ಬಳಿ ತಂಗಲು ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ರಾತ್ರಿ ಸುರಿದ ಮಳೆಗೆ ಪಕ್ಕದ ಗೋಡೆ ಶೆಡ್ ಮೇಲೆ ಕುಸಿದು ದುರಂತ ಸಂಭವಿಸಿದೆ. ಬಹು ಕಟ್ಟಡ ನಿರ್ಮಾಣದ ಹಂತದಲ್ಲಿದೆ. ಮನೋಜ್ ಕುಮಾರ್ ಸದಯ್ (35 ), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದಯ್ (22) ಮೃತ ದುರ್ದೈವಿಗಳು. ಮತ್ತೊರ್ವನ ಹೆಸರು ಪತ್ತೆಯಾಗಿಲ್ಲ. ಇನ್ನು ಘಟನೆಯಲ್ಲಿ ಸುನಿಲ್ ಮಂಡಲ್, ಶಂಭು ಮಂಡಲ, ದಿಲೀಪ್, ದುರ್ಗೇಶ್ಗೆ ಗಾಯವಾಗಿದೆ. ಗಾಯಾಳುಗಳನ್ನ ವೈಟ್ ಫೀಲ್ಡ್ನ ವೈದೇಹಿ ಅಸ್ವತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ‘ಪುಷ್ಪ 2’ ಬಗ್ಗೆ ಹೆಚ್ಚಿತು ಅಂತೆ-ಕಂತೆ; ‘ಇಂಥ ಸುದ್ದಿ ಎಲ್ಲಿ ಸಿಗುತ್ತದೆ’ ಎಂದು ನೇರವಾಗಿ ಪ್ರಶ್ನೆ ಮಾಡಿದ ಮನೋಜ್ ಬಾಜ್ಪಾಯಿ
ಕೆಎಸ್ಆರ್ಟಿಸಿ ಬಸ್ಗೆ ಕಾರು ಡಿಕ್ಕಿ:
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಗೆ ಕಾರು ಡಿಕ್ಕಿಯಾಗಿ ಕಾರು ಚಾಲಕ ದುರ್ಮರಣ ಹೊಂದಿದ್ದಾರೆ. ಏರ್ಪೋರ್ಟ್ ರಸ್ತೆಯ BSF ಕ್ಯಾಂಪಸ್ ಬಳಿ ಈ ಘಟನೆ ನಡೆದಿದೆ. ಲೋಹಿತ್ ಪ್ರಸಾದ್ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ. ಡಿವೈಡರ್ ಹಾರಿ ಕಾರು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ. ಬೆಳಗಿನ ಜಾವ 3.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಜಖಂ ಆಗಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
Published On - 8:53 am, Thu, 21 July 22