‘ಪುಷ್ಪ 2’ ಚಿತ್ರದ (Pushpa 2) ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ಅಲ್ಲು ಅರ್ಜುನ್ (Allu Arjun) ನಟನೆಯ ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇನ್ನೂ ಆರಂಭ ಆಗಿಲ್ಲ. ಆಗಲೇ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಈ ಚಿತ್ರದ ಒಟಿಟಿ ಹಕ್ಕಿಗೆ ದೊಡ್ಡ ಬೇಡಿಕೆ ಬಂದಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಈ ಚಿತ್ರದಲ್ಲಿ ಬಾಲಿವುಡ್ ನಟ ಮನೋಜ್ ಬಾಜ್ಪಾಯಿ ನಟಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಸುದ್ದಿ ನೋಡಿ ಸ್ವತಃ ಮನೋಜ್ ಬಾಜ್ಪಾಯಿ ಅವರು ಅಚ್ಚರಿ ಹೊರಹಾಕಿದ್ದಾರೆ. ಈ ಸುದ್ದಿ ಓದಿ ಅವರು ನಕ್ಕಿದ್ದಾರೆ.
ನಟ ಮನೋಜ್ ಬಾಜ್ಪಾಯಿ ಅವರು ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಅವರು ಸದ್ಯ, ‘ದಿ ಫ್ಯಾಮಿಲಿ ಮ್ಯಾನ್ 3’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರ ಬಗ್ಗೆ ಸಾಕಷ್ಟು ಅಂತೆ-ಕಂತೆ ಹರಿದಾಡುತ್ತಿವೆ. ‘ಪುಷ್ಪ 2’ ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ಮಾಡಲಿದ್ದಾರೆ ಎಂದು ವರದಿ ಆಗಿತ್ತು. ಇದಕ್ಕೆ ಹಾಸ್ಯಾಸ್ಪದವಾಗಿ ಮನೋಜ್ ಬಾಜ್ಪಾಯಿ ಅವರು ಪ್ರತಿಕ್ರಿಯಿಸಿದ್ದಾರೆ.
‘ಪುಷ್ಪ ಸೀಕ್ವೆಲ್ನಲ್ಲಿ ಪೊಲೀಸ್ ಪಾತ್ರ ಮಾಡಲು ಮನೋಜ್ ಬಾಜ್ಪಾಯಿಗೆ ಆಫರ್ ನೀಡಲಾಗಿದೆ’ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಈ ಟ್ವೀಟ್ಅನ್ನು ರೀಟ್ವೀಟ್ ಮಾಡಿರುವ ಮನೋಜ್ ಬಾಜ್ಪಾಯಿ ಅವರು, ‘ನಿಮಗೆ ಈ ರೀತಿಯ ಸುದ್ದಿಗಳು ಎಲ್ಲಿಂದ ಸಿಗುತ್ತದೆ’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಈ ಸುದ್ದಿ ಫೇಕ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸೌತ್ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಸೋತಿದ್ದು ಯಾಕೆ? ಎಲ್ಲವನ್ನೂ ವಿವರಿಸಿದ ಮನೋಜ್ ಬಾಜ್ಪಾಯಿ
‘ಪುಷ್ಪ’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಕಾರಣಕ್ಕೆ ‘ಪುಷ್ಪ 2’ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಶೂಟಿಂಗ್ ಆಗಸ್ಟ್ನಿಂದ ಆರಂಭವಾಗುವ ಸಾಧ್ಯತೆ ಇದೆ. ಈ ಚಿತ್ರದ ಪಾತ್ರವರ್ಗ ಈ ಬಾರಿ ಮತ್ತಷ್ಟು ಹಿರಿದಾಗಲಿದೆ. ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಡಾಲಿ ಧನಂಜಯ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.