Nithya Menen: ಮದುವೆ ವಿಚಾರದಲ್ಲಿ ಮೌನ ಮುರಿದ ನಿತ್ಯಾ ಮೆನನ್; ನಿಜ ವಿಚಾರ ಬಿಚ್ಚಿಟ್ಟ ನಟಿ
ನಿತ್ಯಾ ಮೆನನ್ ಅವರಿಗೆ ಪರಭಾಷೆಯಲ್ಲಿಯೂ ಸಖತ್ ಬೇಡಿಕೆ ಇದೆ. ಈ ಮಧ್ಯೆ ನಿತ್ಯಾ ಮದುವೆ ಆಗಲಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈಗ ನಿತ್ಯಾ ಮೆನನ್ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಅಭಿಮಾನಿಗಳು ಸಂತಸ ಪಡುವ ವಿಚಾರ ಒಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ನಿತ್ಯಾ ಮೆನನ್ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಅನೇಕ ಕಡೆಗಳಲ್ಲಿ ಬಿತ್ತರ ಆಗಿತ್ತು. ಅವರು ಖ್ಯಾತ ಮಲಯಾಳಂ ನಟನ ಜತೆ ವಿವಾಹವಾಗುತ್ತಾರೆ ಎಂಬುದು ವರದಿಯಲ್ಲಿ ಇತ್ತು. ಈ ವಿಚಾರ ಕೇಳಿ ನಿತ್ಯಾ ಮೆನನ್ ಫ್ಯಾನ್ಸ್ ಖುಷಿ ಪಟ್ಟಿದ್ದರು. ಅಷ್ಟೇ ಅಲ್ಲ, ನಿತ್ಯಾ ಮೆನನ್ ಅವರನ್ನು ಮದುವೆ ಆಗುತ್ತಿರುವ ಆ ನಟ ಯಾರು ಎಂಬುದನ್ನು ಫ್ಯಾನ್ಸ್ ಹುಡುಕಾಡಿದ್ದರು. ಆದರೆ, ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ನಿತ್ಯಾ ಮೆನನ್ ಮೌನ ಮುರಿದಿದ್ದು, ಈ ವಿಚಾರವನ್ನು ಅವರು ಅಲ್ಲಗಳೆದಿದ್ದಾರೆ.
ನಿತ್ಯಾ ಮೆನನ್ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದ ಮಂದಿಗೂ ಅವರು ಚಿರಪರಿಚಿತರು. ಸುದೀಪ್ ನಟನೆಯ ‘ಕೋಟಿಗೊಬ್ಬ 2’ ಚಿತ್ರಕ್ಕೆ ಅವರೇ ನಾಯಕಿ ಆಗಿದ್ದರು. ಈ ಚಿತ್ರ 2016ರಲ್ಲಿ ತರೆಗೆ ಬಂತು. ಇದಾದ ಬಳಿಕ ಅವರು ಕನ್ನಡದಲ್ಲಿ ನಟಿಸಿಲ್ಲ. ಅವರಿಗೆ ಪರಭಾಷೆಯಲ್ಲಿಯೂ ಸಖತ್ ಬೇಡಿಕೆ ಇದೆ. ಈ ಮಧ್ಯೆ ನಿತ್ಯಾ ಮದುವೆ ಆಗಲಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈಗ ನಿತ್ಯಾ ಮೆನನ್ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಮಲಯಾಳಂ ನಟನ ಜತೆ ನಿತ್ಯಾ ಮೆನನ್ ಮದುವೆ ಆಗುತ್ತಿದ್ದಾರೆ ಎಂದು ಸುದ್ದಿ ಬಿತ್ತರ ಆಗಿರುವುದನ್ನು ಕೇಳಿ ಅವರು ಸಾಕಷ್ಟು ಅಪ್ಸೆಟ್ ಆಗಿದ್ದಾರೆ ಎಂದು ವರದಿ ಆಗಿದೆ. ‘ಮಲಯಾಳಂ ನಟನ ಜತೆ ಮದುವೆ ಆಗುತ್ತಿದ್ದೇನೆ ಎಂಬುದು ಸುಳ್ಳು ಸುದ್ದಿ. ಈ ಸುದ್ದಿಯಲ್ಲಿ ನಿಜವಿಲ್ಲ’ ಎಂದು ಅವರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಇದನ್ನೂ ಓದಿ: ‘ಮೈನಾ’ ಸುಂದರಿಗೆ ಕಂಕಣ ಭಾಗ್ಯ: ಸ್ಟಾರ್ ಹೀರೋ ಜತೆ ಮದುವೆ ಆಗಲಿರುವ ನಿತ್ಯಾ ಮೆನನ್?
ನಿತ್ಯಾ ಮೆನನ್ ಅವರು ‘19(1)(ಎ)’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಇಂದ್ರಜಿತ್ ಸುಕುಮಾರನ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಇಂದು ವಿ. ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಇದಲ್ಲದೆ ಇನ್ನೂ ಎರಡು ಸಿನಿಮಾಗಳಲ್ಲಿ ನಿತ್ಯಾ ಮೆನನ್ ನಟಿಸುತ್ತಿದ್ದಾರೆ.
Published On - 6:58 am, Thu, 21 July 22