ನಟಿ ಅದಿತಿ ರಾವ್ ಜತೆ ತಮಿಳು ನಟ ಸಿದ್ದಾರ್ಥ್ ಡೇಟಿಂಗ್? ಮುಂಬೈನಲ್ಲಿ ಸುತ್ತಾಟ

ಅದಿತಿ ಮನೆಗೆ ಸಿದ್ದಾರ್ಥ್​ ತೆರಳಿದ್ದರು. ಸಿದ್ದಾರ್ಥ್ ಮನೆಯಿಂದ ಹೊರ ಬರುತ್ತಿದ್ದಂತೆ ಪಾಪರಾಜಿಗಳು ಅವರನ್ನು ಮುತ್ತಿಕೊಂಡಿದ್ದಾರೆ. ಇದು ಸಿದ್ದಾರ್ಥ್ ಕೋಪಕ್ಕೆ ಕಾರಣವಾಗಿದೆ.

ನಟಿ ಅದಿತಿ ರಾವ್ ಜತೆ ತಮಿಳು ನಟ ಸಿದ್ದಾರ್ಥ್ ಡೇಟಿಂಗ್? ಮುಂಬೈನಲ್ಲಿ ಸುತ್ತಾಟ
ಸಿದ್ದಾರ್ಥ್​-ಅದಿತಿ
TV9kannada Web Team

| Edited By: Rajesh Duggumane

Jul 21, 2022 | 7:43 AM

ತಮಿಳು ನಟ ಸಿದ್ದಾರ್ಥ್ (Siddharth) ಅವರು ಇತ್ತೀಚೆಗೆ ಸಖತ್ ಚ್ಯೂಸಿ ಆಗಿದ್ದಾರೆ. ಅವರು ತಮ್ಮ ಪಾಲಿಗೆ ಬಂದ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಿದ್ದಾರ್ಥ್ ಅವರು ವೈಯಕ್ತಿಕ ವಿಚಾರ ಹಾಗೂ ತಮ್ಮ ಸಿದ್ಧಾಂತಗಳ ಕಾರಣದಿಂದಲೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಅವರು ಖ್ಯಾತ ನಟಿ ಅದಿತಿ ರಾವ್ ಹೈದರಿ (Aditi Rao Hydari) ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಅದಿತಿ ಜತೆ ಕಾಣಿಸಿಕೊಂಡ ಸಂದರ್ಭದಲ್ಲಿ ವಿಡಿಯೋ ಶೂಟ್ ಮಾಡಲು ಬಂದ ಪಾಪರಾಜಿಗಳ ವಿರುದ್ಧ ಸಿದ್ದಾರ್ಥ್ ರೇಗಾಡಿದ್ದಾರೆ.

ನಟಿ ಅದಿತಿ ರಾವ್ ಹೈದರಿ ಅವರು ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿಯೇ ಅವರು ಮನೆ ಹೊಂದಿದ್ದಾರೆ. ಅದಿತಿ ಮನೆಗೆ ಸಿದ್ದಾರ್ಥ್​ ತೆರಳಿದ್ದರು. ಸಿದ್ದಾರ್ಥ್ ಮನೆಯಿಂದ ಹೊರ ಬರುತ್ತಿದ್ದಂತೆ ಪಾಪರಾಜಿಗಳು ಅವರನ್ನು ಮುತ್ತಿಕೊಂಡಿದ್ದಾರೆ. ಇದು ಸಿದ್ದಾರ್ಥ್ ಕೋಪಕ್ಕೆ ಕಾರಣವಾಗಿದೆ.

ಯಾವುದಾದರೂ ಸೆಲೆಬ್ರಿಟಿ ವಿಮಾನ ನಿಲ್ದಾಣ, ಜಿಮ್ ಹಾಗೂ ಇತರ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡರೆ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಸೆಲೆಬ್ರಿಟಿಗಳ ಫೋಟೋ ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ. ಅದೇ ರೀತಿ  ಸಿದ್ದಾರ್ಥ್ ಅವರ ಫೋಟೋ ಕ್ಲಿಕ್ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಇದಕ್ಕೆ ಸಿದ್ದಾರ್ಥ್ ಅಪ್ಸೆಟ್ ಆಗಿದ್ದಾರೆ.

‘ನನಗೆ ಇದೆಲ್ಲ ಇಷ್ಟ ಆಗುವುದಿಲ್ಲ. ನಾನು ತುಂಬಾನೇ ಕೂಲ್ ಆಗಿ ಹೇಳುತ್ತಿದ್ದೇನೆ. ನಾನು ಇಲ್ಲಿಯವನಲ್ಲ. ಇಲ್ಲಿಯವರು ಬಂದರೆ ನೀವು ಫೋಟೋ ತೆಗೆದುಕೊಳ್ಳಿ. ಮುಂದಿನ ಬಾರಿ ನಾನು ಇಷ್ಟು ವಿನಮ್ರವಾಗಿ ಮಾತನಾಡುವುದಿಲ್ಲ’ ಎಂದಿದ್ದಾರೆ ಸಿದ್ದಾರ್ಥ್. ಅದಿತಿ ಕೂಡ ಸಿದ್ದಾರ್ಥ್ ಹಿಂದೆ ಬಂದಿದ್ದಾರೆ. ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಅದಿತಿ ರಾವ್​ ಹೈದರಿ

ಇದನ್ನೂ ಓದಿ

‘ಮಹಾ ಸಮುದ್ರಮ್’ ಸಿನಿಮಾದಲ್ಲಿ ಅದಿತಿ ಹಾಗೂ ಸಿದ್ದಾರ್ಥ್ ಒಟ್ಟಾಗಿ ನಟಿಸಿದ್ದರು. ಈ ಸೆಟ್​ನಲ್ಲಿ ಇಬ್ಬರ ಮಧ್ಯೆ ಲವ್ ಆಗಿದೆ. ಆ ಬಳಿಕ ಇವರು ಡೇಟಿಂಗ್ ಶುರುಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ರಾಜ್​ಕುಮಾರ್ ರಾವ್ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಏಪ್ರಿಲ್​ನಲ್ಲಿ ಸಿದ್ದಾರ್ಥ್ ಬರ್ತ್​ಡೇ ಆಚರಿಸಿಕೊಂಡಿದ್ದರು. ಈ ವೇಳೆ ಫೋಟೋ ಪೋಸ್ಟ್ ಮಾಡಿದ್ದ ಅದಿತಿ ಅವರು, ಪ್ರೀತಿಯಿಂದ ಸಿದ್ದಾರ್ಥ್​ಗೆ ವಿಶ್ ಮಾಡಿದ್ದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada