ಮೋಸಗಾರರು ಏಳಿಗೆಯಾಗಲ್ಲ ಎಂದು ​ಹೇಳಿದ್ದು ಯಾರಿಗೆ? ಸಿದ್ದಾರ್ಥ್ ಕೊಟ್ರು ಉತ್ತರ

ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠ, ‘ವಂಚಕರು ಎಂದಿಗೂ ಏಳಿಗೆಯಾಗಲ್ಲ’ ಎಂದು ಸಿದ್ದಾರ್ಥ್​ ಬರೆದುಕೊಂಡಿದ್ದರು. ಇದು ಸಮಂತಾ ಉದ್ದೇಶಿಸಿ ಮಾಡಿದ ಟ್ವೀಟ್​ ಎಂದು ಹೇಳಲಾಗಿತ್ತು.

ಮೋಸಗಾರರು ಏಳಿಗೆಯಾಗಲ್ಲ ಎಂದು ​ಹೇಳಿದ್ದು ಯಾರಿಗೆ? ಸಿದ್ದಾರ್ಥ್ ಕೊಟ್ರು ಉತ್ತರ
ಸಿದ್ದಾರ್ಥ್​-ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 08, 2021 | 8:48 PM

ಸಿದ್ದಾರ್ಥ್‌​ ಹಾಗೂ ಸಮಂತಾ ಅಕ್ಕಿನೇನಿ ಒಂದು ಕಾಲದಲ್ಲಿ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಕಾರಣಾಂತರಗಳಿಂದ ಇವರ ಸಂಬಂಧ ಮುರಿದು ಬಿದ್ದಿತ್ತು. ಆ ಬಗ್ಗೆ ಅನೇಕರಿಗೆ ಗೊತ್ತಿದೆ. ಈ ಕಹಿ ಘಟನೆಯಿಂದ ಅವರು ಹೊರ ಬಂದಿದ್ದಾರೆ. ಆ ನಂತರ ನಾಗ ಚೈತನ್ಯ ಅವರನ್ನು ಪ್ರೀತಿಸಿ ಸಮಂತಾ ಮದುವೆ ಆದರು. ಈಗ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಇಬ್ಬರೂ ಬೇರೇ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ ನಟ ಸಿದ್ದಾರ್ಥ್​ ಮಾಡಿದ್ದ ಟ್ವೀಟ್​ ಒಂದು ವೈರಲ್​ ಆಗಿತ್ತು. ಇದನ್ನು ಎಲ್ಲರೂ ಟೀಕೆ ಮಾಡಿದ್ದರು. ಈಗ ಇದಕ್ಕೆ ಸಿದ್ದಾರ್ಥ್​ ಸ್ಪಷ್ಟನೆ ನೀಡಿದ್ದಾರೆ.

ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠ, ‘ವಂಚಕರು ಎಂದಿಗೂ ಏಳಿಗೆಯಾಗಲ್ಲ’ ಎಂದು ಸಿದ್ದಾರ್ಥ್​ ಬರೆದುಕೊಂಡಿದ್ದರು. ಇದು ಸಮಂತಾ ಉದ್ದೇಶಿಸಿ ಮಾಡಿದ ಟ್ವೀಟ್​ ಎಂದು ಹೇಳಲಾಗಿತ್ತು. ಸಿದ್ದಾರ್ಥ್​ಗೆ ಎಲ್ಲರೂ ಕ್ಲಾಸ್​ ತೆಗೆದುಕೊಂಡಿದ್ದರು. ಈ ರೀತಿಯಲ್ಲಿ ಹೀನಾಯಾವಾಗಿ ಮಾತನಾಡೋಕೆ ಹೇಗೆ ಮನಸ್ಸು ಬರುತ್ತದೆ ಎಂದು ಕೆಲವರು ಪ್ರಶ್ನಿಸಿದ್ದರು. ಇದಕ್ಕೆ ಸಿದ್ದಾರ್ಥ್​ ಕಟುವಾಗಿಯೇ ಉತ್ತರ ನೀಡಿದ್ದಾರೆ.

ಈ ಬಗ್ಗೆ ಸಿದ್ದಾರ್ಥ್​ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಅವರು ಮಾಡಿರುವ ಟ್ವೀಟ್​ನ ಹಿಂದೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ‘ನಿತ್ಯವೂ ನನ್ನ ಮನಸ್ಸಿಗೆ ಏನು ಬರುತ್ತದೆಯೋ ಅದನ್ನು ಟ್ವೀಟ್​ ಮಾಡುತ್ತೇನೆ. ಬೀದಿ ನಾಯಿಗಳ ಬಗ್ಗೆ ಟ್ವೀಟ್​ ಮಾಡಿದಾಗ ಅದು ತನಗೇ ಹೇಳಿದ್ದು ಎಂದು ಜನರು ಭಾವಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ’ ಎಂದಿದ್ದಾರೆ ಸಿದ್ದಾರ್ಥ್​.  ಈ ಮೂಲಕ ತಮ್ಮ ಬಗ್ಗೆ ಟೀಕೆ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ ಅವರು. ಇದನ್ನೂ ಹಲವರು ಟೀಕಿಸಿದ್ದಾರೆ.

ಇದನ್ನೂ ಓದಿ: ಮೋಸಗಾರರು ಏಳಿಗೆಯಾಗಲ್ಲ ಎಂದ ನಟ ಸಿದ್ದಾರ್ಥ್‌; ಸಮಂತಾರನ್ನು ನೆನಪು ಮಾಡಿಕೊಂಡ ನೆಟ್ಟಿಗರು

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್