AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ಗೆ ವಯಸ್ಸು ಆಗೋದೇ ಇಲ್ವಾ? ನಟಿ ರಮ್ಯಾ ನೇರ ಪ್ರಶ್ನೆ: ‘ಕೋಟಿಗೊಬ್ಬ 3’ ಟ್ರೇಲರ್​ಗೆ ಮೆಚ್ಚುಗೆ

‘ಕೋಟಿಗೊಬ್ಬ 3’ ಟ್ರೇಲರ್​ನಲ್ಲಿ ಸುದೀಪ್​ ಎನರ್ಜಿ ನೋಡಿ ಫಿದಾ ಆಗದವರೇ ಇಲ್ಲ. ಕೆಲವು ದೃಶ್ಯಗಳಲ್ಲಿ ಅವರು​ ಹದಿಹರೆಯದ ತರುಣನಂತೆ ಕಾಣುತ್ತಾರೆ. ಅದು ಅಭಿಮಾನಿಗಳಿಗೆ ಮಾತ್ರವಲ್ಲದೆ, ರಮ್ಯಾಗೂ ಅಚ್ಚರಿ ಮೂಡಿಸಿದೆ.

ಸುದೀಪ್​ಗೆ ವಯಸ್ಸು ಆಗೋದೇ ಇಲ್ವಾ? ನಟಿ ರಮ್ಯಾ ನೇರ ಪ್ರಶ್ನೆ: ‘ಕೋಟಿಗೊಬ್ಬ 3’ ಟ್ರೇಲರ್​ಗೆ ಮೆಚ್ಚುಗೆ
ಸುದೀಪ್​, ರಮ್ಯಾ
Follow us
TV9 Web
| Updated By: ಮದನ್​ ಕುಮಾರ್​

Updated on: Oct 09, 2021 | 8:31 AM

ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೂ ಕೂಡ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಘಟನೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಚಿತ್ರತಂಡಗಳಿಗೆ ಬೆನ್ನು ತಟ್ಟುತ್ತಿದ್ದಾರೆ. ಈಗ ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾದ ಟ್ರೇಲರ್​ ನೋಡಿ ರಮ್ಯಾ ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅ.14ರಂದು ಅದ್ದೂರಿಯಾಗಿ ‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಕ್ರೇಜ್​ ಇದೆ. ಅ.7ರಂದು ಟ್ರೇಲರ್​ ರಿಲೀಸ್​ ಆಗಿದ್ದು, ಅದನ್ನು ನೋಡಿ ರಮ್ಯಾ ಕೂಡ ಮೆಚ್ಚಿಕೊಂಡಿದ್ದಾರೆ. ಈ ಟ್ರೇಲರ್​ನಲ್ಲಿ ಸುದೀಪ್​ ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎನರ್ಜಿ ನೋಡಿ ಫಿದಾ ಆಗದವರೇ ಇಲ್ಲ. ಕೆಲವು ದೃಶ್ಯಗಳಲ್ಲಿ ಸುದೀಪ್​ ಹದಿಹರೆಯದ ತರುಣನಂತೆ ಕಾಣುತ್ತಾರೆ. ಅದು ಅಭಿಮಾನಿಗಳಿಗೆ ಮಾತ್ರವಲ್ಲದೆ, ರಮ್ಯಾಗೂ ಅಚ್ಚರಿ ಮೂಡಿಸಿದೆ.

‘ಟ್ರೇಲರ್​ ಅದ್ಭುತವಾಗಿದೆ. ಕಿಚ್ಚ ಸುದೀಪ್​ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ?’ ಎಂದು ರಮ್ಯಾ ಬರೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸುದೀಪ್​ ವಯಸ್ಸು ಕಮ್ಮಿ ಆಗುತ್ತಿದೆ ಎಂಬರ್ಥದಲ್ಲಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ರಂಗ ಎಸ್​ಎಸ್​ಎಲ್​ಸಿ’, ‘ಜಸ್ಟ್​ ಮಾತ್​ ಮಾತಲ್ಲಿ’, ‘ಮುಸ್ಸಂಜೆ ಮಾತು’ ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್​ ನಟಿಸಿದ್ದರು. ಮತ್ತೆ ಅವರು ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಇತ್ತೀಚೆಗೆ ಆರ್ಯನ್​ ಖಾನ್​ ಬಂಧನದ ಬಗ್ಗೆಯೂ ರಮ್ಯಾ ಪ್ರತಿಕ್ರಿಯಿಸಿದ್ದರು. ‘ಆರ್ಯನ್ ಖಾನ್ ಬಳಿ ಡ್ರಗ್​ ಇರಲಿಲ್ಲ ಮತ್ತು ಅವರು ಡ್ರಗ್ಸ್​​ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರ ಬಂಧನ ನಡೆದಿದೆ. ಮತ್ತೊಂದೆಡೆ ಬಿಜೆಪಿ ಸಚಿವರ ಮಗನಿದ್ದಾನೆ. ಅವರು 4 ರೈತರನ್ನು ಕೊಂದಿದ್ದಾರೆ, ಆದರೆ ಬಂಧನ ಮಾತ್ರ ಆಗಿಲ್ಲ. ಮೃತರ ಕುಟುಂಬವನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡಲು ಹೊರಟಾಗ ನೀವು ಅವರನ್ನು ಬಂಧಿಸಿದ್ದೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟಿಕೆಯಿಂದ ದೇಶ ನಡೆಯುತ್ತಿದೆ’ ಎಂದು ಆರೋಪಿಸಿದ್ದರು.

ಇದನ್ನೂ ಓದಿ:

‘ನಾನು ಸಿನಿಮಾ ಮಾಡಲ್ಲ ಅಂದ್ರೆ ಅನೇಕರಿಗೆ ಬೇಸರ ಆಗತ್ತೆ’; ಚಿತ್ರರಂಗಕ್ಕೆ ಬರುವ ಸೂಚನೆ ನೀಡಿದ ರಮ್ಯಾ?

‘ರಮ್ಯಾ-ರಕ್ಷಿತಾ ನಡುವೆ ಆ ವಿಚಾರಕ್ಕೆ ಕಿರಿಕ್​ ಆಗಿತ್ತು’; ಶೂಟಿಂಗ್​ ಸಮಯದ ವಿವರ ತೆರೆದಿಟ್ಟ ಕವಿತಾ ಲಂಕೇಶ್​