‘ಭಜರಂಗಿ 2′ ಚಿತ್ರದಲ್ಲಿ ಭಾವನಾ ಮೆನನ್ ರಗಡ್​ ಲುಕ್ ಅನಾವರಣ; ಅಭಿಮಾನಿಗಳಿಂದ ಮೆಚ್ಚುಗೆ

‘ಚಿಣಿಮಿಣಿಕಿ- ದಿ ಲೇಡಿ ಫೈರ್' ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್ ಪೋಸ್ಟರ್ ಅನ್ನು  ಸಿನಿಮಾ ನಿರ್ದೇಶಕ ಎ. ಹರ್ಷ ಅವರು ಸೋಶಿಯಲ್​ ಮೀಡಿಯಾ ಸೈಟ್​ನಲ್ಲಿ ಹಂಚಿಕೊಂಡಿದ್ದಾರೆ.

‘ಭಜರಂಗಿ 2' ಚಿತ್ರದಲ್ಲಿ ಭಾವನಾ ಮೆನನ್ ರಗಡ್​ ಲುಕ್ ಅನಾವರಣ; ಅಭಿಮಾನಿಗಳಿಂದ ಮೆಚ್ಚುಗೆ
ಭಾವನಾ


‘ಭಜರಂಗಿ’ ಹಿಟ್​ ಸಿನಿಮಾ. ಅದರ ಸೀಕ್ವೆಲ್​ ಬರುತ್ತದೆ ಎಂದಾಗ ಒಂದಷ್ಟು ಕಾತುರ ಇದ್ದೇ ಇರುತ್ತದೆ. ಹೀಗಾಗಿ, ಶಿವರಾಜ್​ಕುಮಾರ್ ಅಭಿನಯದ ‘ಭಜರಂಗಿ 2′ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಪೋಸ್ಟರ್​ಗಳು ಸಿನಿಮಾಗೆ ಮೈಲೇಜ್​ ನೀಡಿದೆ. ಈಗ ನಾಯಕಿ ಭಾವನಾ ಮೆನನ್​ ಪೋಸ್ಟರ್ ಬಿಡುಗಡೆಗೊಂಡಿದ್ದು, ಸಖತ್ ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಚಿಣಿಮಿಣಿಕಿ- ದಿ ಲೇಡಿ ಫೈರ್’ ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್​ ಪೋಸ್ಟರ್ ಅನ್ನು ಸಿನಿಮಾ ನಿರ್ದೇಶಕ ಎ. ಹರ್ಷ ಅವರು ಟ್ವಿಟರ್​, ಕೂ ಮೊದಲಾದ ಸೋಶಿಯಲ್​ ಮೀಡಿಯಾ ಸೈಟ್​ನಲ್ಲಿ ಹಂಚಿಕೊಂಡಿದ್ದಾರೆ. ಭಾವನಾ ಅವರ ಈ ಲುಕ್​ ಅಭಿಮಾನಿಗಳಿಗೆ ಇಷ್ಟವಾಗಿದೆ.

ಶಿವಣ್ಣನ ಜನ್ಮದಿನದಂದು ‘ಭಜರಂಗಿ 2’ ಸಿನಿಮಾದ  ಟೀಸರ್ ಬಿಡುಗಡೆಗೊಂಡಿತ್ತು. ದೊಡ್ಡ ತಾರಾವರ್ಗದಲ್ಲಿ ಸಿನಿಮಾ ಸಿದ್ಧಗೊಂಡಿದೆ. ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ ‘ಭಜರಂಗಿ’ ಚಿತ್ರದ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿದೆ. ಮೊದಲ ಸಿನಿಮಾಗೂ ಈ ಸಿನಿಮಾಗೂ ಕಥೆಯಲ್ಲಿ ಯಾವುದೇ ಸಂಬಂಧ ಇರುವುದಿಲ್ಲ.

ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಚಿತ್ರದಲ್ಲಿ ಶ್ರುತಿ, ಸೌರವ್ ಲೋಕೇಶ್, ಶಿವರಾಜ್.ಕೆ.ಆರ್. ಪೇಟೆ ಮೊದಲಾದವರು ನಟಿಸಿದ್ದಾರೆ. ಅ.1ರಿಂದ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಸ್ಟಾರ್​ ಸಿನಿಮಾಗಳೆಲ್ಲ ಸಾಲು ಸಾಲಾಗಿ ಬಿಡುಗಡೆ ಆಗಲಿವೆ.  ಈಗಾಗಲೇ ಚಿತ್ರತಂಡಗಳು ಭರ್ಜರಿ ಪ್ರಚಾರವನ್ನೂ ಆರಂಭಿಸಿವೆ. ಅಕ್ಟೋಬರ್ 14ರಂದು ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರಗಳು ಬಿಡುಗಡೆಯಾಗಲಿವೆ. ಅಕ್ಟೋಬರ್ 29ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಭಜರಂಗಿ 2’ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Bhajarangi 2: ರಿಲೀಸ್​ ದಿನಾಂಕ​ ಘೋಷಣೆ ಮಾಡಿ ಟ್ರೆಂಡ್​ ಆದ ‘ಭಜರಂಗಿ 2’; ಇದು ಶಿವಣ್ಣನ ಹವಾ

Shiva Rajkumar: ‘ಭಜರಂಗಿ 2’ ಚಿತ್ರದಲ್ಲಿ ಸರ್ಪ್ರೈಸ್ ನೀಡುವ ಪಾತ್ರ ಪರಿಚಯಿಸಿದ ಚಿತ್ರತಂಡ; ಯಾವ ಪಾತ್ರ? ಇಲ್ಲಿದೆ ಮಾಹಿತಿ

Read Full Article

Click on your DTH Provider to Add TV9 Kannada