ಸೈನಾ ನೆಹ್ವಾಲ್ ಟ್ವೀಟ್​​ಗೆ ಕೆಟ್ಟದಾಗಿ ಪ್ರತಿಕ್ರಿಯಿಸಿದ ನಟ ಸಿದ್ಧಾರ್ಥ್ ಟ್ವಿಟರ್ ಖಾತೆ ಬ್ಲಾಕ್ ಮಾಡಿ: ಟ್ವಿಟರ್​​ಗೆ ಮಹಿಳಾ ಆಯೋಗ ಮನವಿ

ಸೈನಾ ನೆಹ್ವಾಲ್ ಟ್ವೀಟ್​​ಗೆ ಕೆಟ್ಟದಾಗಿ ಪ್ರತಿಕ್ರಿಯಿಸಿದ ನಟ ಸಿದ್ಧಾರ್ಥ್ ಟ್ವಿಟರ್ ಖಾತೆ ಬ್ಲಾಕ್ ಮಾಡಿ: ಟ್ವಿಟರ್​​ಗೆ ಮಹಿಳಾ ಆಯೋಗ ಮನವಿ
ಸಿದ್ಧಾರ್ಥ್-ಸೈನಾ ನೆಹ್ವಾಲ್

ನಟನ ಖಾತೆಯನ್ನು ನಿರ್ಬಂಧಿಸಲು ಮತ್ತು ಅಂತಹ ಟೀಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಎನ್‌ಸಿಡಬ್ಲ್ಯೂ ಟ್ವಿಟರ್ ಇಂಡಿಯಾಗೆ ಗೆ ಪತ್ರ ಬರೆದಿದೆ.

TV9kannada Web Team

| Edited By: Rajesh Duggumane

Jan 10, 2022 | 5:10 PM

ದೆಹಲಿ: ಖ್ಯಾತ ಶಟಲ್ ಆಟಗಾರ್ತಿ, ಭಾರತೀಯ ಜನತಾ ಪಕ್ಷದ (BJP) ನಾಯಕಿ ಸೈನಾ ನೆಹ್ವಾಲ್ (Saina Nehwal) ಅವರು ಜನವರಿ 6 ರಂದು ಮಾಡಿದ ಟ್ವೀಟ್​​ಗೆ ನಟ ಸಿದ್ಧಾರ್ಥ್ ( Siddharth) ಮಾಡಿದ ಪ್ರತಿಕ್ರಿಯೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ನಂತರ ಸಿದ್ಧಾರ್ಥ್ ಅವರ ಹ್ಯಾಂಡಲ್ ಅನ್ನು ನಿರ್ಬಂಧಿಸುವಂತೆ ಟ್ವಿಟರ್‌ಗೆ (Twitter) ಪತ್ರ ಬರೆದಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಸೋಮವಾರ ತಿಳಿಸಿದೆ. ಎನ್‌ಸಿಡಬ್ಲ್ಯೂ ಇಂಡಿಯಾ ಇದರ ಬಗ್ಗೆ ಗಮನ ಹರಿಸಿದೆ. ಅಧ್ಯಕ್ಷೆ ರೇಖಾಶರ್ಮಾ ಅವರು ಈ ವಿಷಯದಲ್ಲಿ ತನಿಖೆ ಮತ್ತು ಎಫ್‌ಐಆರ್ (FIR)  ದಾಖಲಿಸಲು ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದಾರೆ. ನಟನ ಖಾತೆಯನ್ನು ನಿರ್ಬಂಧಿಸಲು ಮತ್ತು ಅಂತಹ ಟೀಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಎನ್‌ಸಿಡಬ್ಲ್ಯೂ ಟ್ವಿಟರ್ ಇಂಡಿಯಾಗೆ ಗೆ ಪತ್ರ ಬರೆದಿದೆ” ಎಂದು ಆಯೋಗವು ಟ್ವಿಟರ್‌ನಲ್ಲಿ ಹೇಳಿದೆ .

ಈ ನಿಟ್ಟಿನಲ್ಲಿ ಅಧ್ಯಕ್ಷೆ ರೇಖಾ ಶರ್ಮಾ ಮಾಡಿರುವ ಟ್ವೀಟ್‌ಗೆ ಎನ್‌ಸಿಡಬ್ಲ್ಯೂ ಪ್ರತಿಕ್ರಿಯಿಸಿದೆ. “ಈ ಮನುಷ್ಯನಿಗೆ ಸರಿಯಾದ ಪಾಠ ಕಲಿಸಬೇಕು ಈ ವ್ಯಕ್ತಿಯ ಖಾತೆ ಇನ್ನೂ ಏಕೆ ಅಸ್ತಿತ್ವದಲ್ಲಿದೆ ಟ್ವಿಟರ್ ಇಂಡಿಯಾ? ಇದನ್ನು ಸಂಬಂಧಿತ ಪೊಲೀಸರಿಗೆ ತಿಳಸುತ್ತಿದ್ದೇನೆ ಎಂದು ಎಂದು ಶರ್ಮಾ ಪೋಸ್ಟ್ ಮಾಡಿದ್ದಾರೆ.

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಸಿದ್ಧಾರ್ಥ್ ಮತ್ತು ‘ರಂಗ್ ದೇ ಬಸಂತಿ’ ಸೇರಿದಂತೆ ಹಿಂದಿ ಪ್ರಾಜೆಕ್ಟ್‌ಗಳನ್ನು ಸಹ ಮಾಡಿದ್ದಾರೆ. ಹಿಂದಿನ ಟ್ವೀಟ್ ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರು ಸ್ಪಷ್ಟೀಕರಣವನ್ನು ನೀಡಿದ್ದಾರೆ. “ಕಾಕ್ & ಬುಲ್. ಅದು ಉಲ್ಲೇಖವಾಗಿದೆ. ಇದನ್ನು ಬೇರೆ ರೀತಿಯಲ್ಲಿ ಓದುವುದು ಸರಿಯಲ್ಲ. ಅಗೌರವಯುತವಾದ ಯಾವುದನ್ನೂ ಉದ್ದೇಶಿಸಿಲ್ಲ, ಹೇಳಿಲ್ಲ ಅಥವಾ ಸೂಚಿಸಲಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಜನವರಿ 5 ರ ಲೋಪವನ್ನು ನೆಹ್ವಾಲ್ ಖಂಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ಧಾರ್ಥ್, “ಸೂಕ್ಷ್ಮ ಕಾಕ್ ವಿಶ್ವ ಚಾಂಪಿಯನ್,ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ಶೇಮ್ ಆನ್ ಯೂ ರಿಹಾನ್ನಾ ಎಂದಿದ್ದರು.

ಕೃಷಿ ಕಾನೂನುಗಳ ಬಗ್ಗೆ ರೈತರು ಪ್ರತಿಭಟಿಸುತ್ತಿರುವಾಗ ಈ ಬಗ್ಗೆ ನಾವು ಯಾಕೆ ಮಾತನಾಡುತ್ತಿಲ್ಲ ಎಂದು ಕಳೆದ ಫೆಬ್ರುವರಿಯಲ್ಲಿ ಖ್ಯಾತ ಪಾಪ್ ಸ್ಟಾರ್ ರಿಹಾನ್ನಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಪರ,ವಿರೋಧ ಚರ್ಚೆಗಳೊಂದಿಗೆ ಸಂಚಲನ ಸೃಷ್ಟಿಸಿತ್ತು.

ಏತನ್ಮಧ್ಯೆ, ಸಿದ್ಧಾರ್ಥ್‌ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ನೆಹ್ವಾಲ್, ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಲು ಉತ್ತಮ ಪದಗಳನ್ನು ಆರಿಸಬಹುದಿತ್ತು ಎಂದು ಹೇಳರುವುದಾಗಿ ದಿ ಹಿಂದೂಸ್ತಾನ್ ಟೈಮ್ಸ್  ವರದಿ ಮಾಡಿದೆ.

ಇದನ್ನೂ ಓದಿ: National Youth Festival 2022: ಜ. 12ಕ್ಕೆ ರಾಷ್ಟ್ರೀಯ ಯುವಜನೋತ್ಸವ; ಯುವಕರಿಂದ ಸಲಹೆ, ಐಡಿಯಾಗಳನ್ನು ಆಹ್ವಾನಿಸಿದ ಮೋದಿ  

Follow us on

Related Stories

Most Read Stories

Click on your DTH Provider to Add TV9 Kannada