ಪ್ರೀತಿ ವಿಚಾರದಲ್ಲಿ ಮನೆಯವರ ತೀವ್ರ ವಿರೋಧ; ಹುಣಸೆಗಟ್ಟೆಪಾಳ್ಯದಲ್ಲಿ ಯುವತಿ ನೇಣಿಗೆ ಶರಣು

ಮೃತ ಶಶಿಕಲಾ ಹಲವಾರು ತಿಂಗಳಿಂದ ಬೆಂಗಳೂರು ಮೂಲದ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇವರಿಬ್ಬರ ಪ್ರೀತಿ ವಿಚಾರದಲ್ಲಿ ತಡರಾತ್ರಿ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮನನೊಂದು ಶಶಿಕಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • TV9 Web Team
  • Published On - 8:49 AM, 13 Feb 2021
ಪ್ರೀತಿ ವಿಚಾರದಲ್ಲಿ ಮನೆಯವರ ತೀವ್ರ ವಿರೋಧ; ಹುಣಸೆಗಟ್ಟೆಪಾಳ್ಯದಲ್ಲಿ ಯುವತಿ ನೇಣಿಗೆ ಶರಣು
ಮೃತ ಶಶಿಕಲಾ

ನೆಲಮಂಗಲ: ಪ್ರೀತಿಸುವ ವಿಚಾರದಲ್ಲಿ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯತೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಣಸೆಗಟ್ಟೆಪಾಳ್ಯ ಗ್ರಾಮದಲ್ಲಿ ನಡೆದಿದೆ.

ಶಶಿಕಲಾ (23) ಮನೆಯಲ್ಲಿ ನೇಣಿಗೆ ಶರಣಾದ ಯುವತಿಯಾಗಿದ್ದು, ಮೃತ ಶಶಿಕಲಾ ಹಲವಾರು ತಿಂಗಳಿಂದ ಬೆಂಗಳೂರು ಮೂಲದ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇವರಿಬ್ಬರ ಪ್ರೀತಿ ವಿಚಾರದಲ್ಲಿ ತಡರಾತ್ರಿ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮನನೊಂದು ಶಶಿಕಲಾ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ:18ನೇ ವಯಸ್ಸಿಗೆ ನೇಣಿಗೆ ಶರಣಾದ ಟಿಕ್‌ಟಾಕ್ ತಾರೆ ಡಜಾರಿಯಾ ಕ್ವಿಂಟ್, ಆತ್ಮಹತ್ಯೆಗೆ ಕಾರಣವೇನು?