Devanahalli: ಕನ್ನಮಂಗಲ ಗ್ರಾ.ಪಂ ಬಿಲ್ ಕಲೆಕ್ಟರ್ ವಿರುದ್ಧ 5 ಕೋಟಿ ರೂ ತೆರಿಗೆ ಹಣ ವಂಚಿಸಿದ ಆರೋಪ

| Updated By: ವಿವೇಕ ಬಿರಾದಾರ

Updated on: Nov 28, 2022 | 6:12 PM

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್​ ತೆರಿಗೆ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ.

Devanahalli: ಕನ್ನಮಂಗಲ ಗ್ರಾ.ಪಂ ಬಿಲ್ ಕಲೆಕ್ಟರ್ ವಿರುದ್ಧ 5 ಕೋಟಿ ರೂ ತೆರಿಗೆ ಹಣ ವಂಚಿಸಿದ ಆರೋಪ
ಬಿಲ್​ ಕಲೆಕ್ಟರ್​ ಮಂಜುನಾಥ್
Follow us on

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (Devanahalli) ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ (Gram Panchayat) ಬಿಲ್ ಕಲೆಕ್ಟರ್​ ತೆರಿಗೆ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ. 2020-21ನೇ ಸಾಲಿನಲ್ಲಿ ಬಿಲ್​ ಕಲೆಕ್ಟರ್​ ಮಂಜುನಾಥ್ ಗ್ರಾಮದ ಬಡಾವಣೆ, ಅಪಾರ್ಟ್​ಮೆಂಟ್, ಮನೆಗಳ ತೆರಿಗೆ ಸಂಗ್ರಹಕ್ಕೆ 7 ಬಿಲ್​ ಬುಕ್​ ಬಳಕೆ ಮಾಡಿದ್ದನು. ಈ ಬಿಲ್​ ಬುಕ್​​ಗಳು ನಕಲಿಯಾಗಿದ್ದವು. ಈ ನಕಲಿ ಬಿಲ್​ ಬುಕ್​ ಮುಖಾಂತರ 5 ಕೋಟಿ ರೂ. ತೆರಿಗೆ ಹಣ ಸಂಗ್ರಹಿಸಿದ್ದಾನೆ.

ಇದನ್ನೂ ಓದಿ: ಯಾದಗಿರಿ: ಜಿಲ್ಲಾಸ್ಪತ್ರೆಯಲ್ಲೊಂದು ಅಮಾನುಷ ಘಟನೆ: ವೈದ್ಯರ ನಿರ್ಲಕ್ಷ್ಯದಿಂದ ಕಾರಿಡಾರ್​ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ಜಮೆ ಮಾಡದೆ ವಂಚನೆ ಮಾಡಿದ್ದಾನೆ. ಅಲ್ಲದೇ ಈ ಹಿಂದೆ ಕನ್ನಮಂಗಲ ಗ್ರಾ.ಪಂ.ಗೆ ಸೇರಿದ ಬಿಲ್​ ಬುಕ್​​ನ್ನು ಅಪರಿಚಿತ ವ್ಯಕ್ತಿಗಳು ಸುಟ್ಟಿದ್ದರು. ಪ್ರಸ್ತುತ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬಿಲ್​ ಕಲೆಕ್ಟರ್​ ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ.

ಈ ಹಿಂದೆ ಗ್ರಾಂ.ಪ ಕಂಪ್ಯೂಟರ್​ ಆಪರೇಟರ್​ ವಿರುದ್ಧ ಕೂಡ ನಕಲಿ ಬಿಲ್ ಬುಕ್​ ಮೂಲಕ ತೆರಿಗೆ ಹಣ ಸಂಗ್ರಹಿಸಿ ವಂಚಿಸಿದ ಆರೋಪ ಕೇಳಿಬಂದಿತ್ತು. ಸದ್ಯ ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಬಿಲ್​ ಕಲೆಕ್ಟರ್​ ಮಂಜುನಾಥ್ ವಿರುದ್ಧ ಸರಿಯಾಗಿ ತನಿಖೆ ನಡೆಸುವಂತೆ ಜಿ.ಪಂ., ತಾ.ಪಂ. ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:52 pm, Mon, 28 November 22