ಆನೇಕಲ್: ಮುಸ್ಲಿಮ್ ಅಂಗಡಿಗಳಲ್ಲಿ ಮಾಂಸವನ್ನು ಖರೀದಿಸಬೇಡಿ ಅನ್ನೋ ಕೂಗು ರಾಜ್ಯದಲ್ಲಿ ಭುಗಿಲೆದ್ದಿದೆ. ಮುಸ್ಲಿಮ್ ಮಾಂಸದಂಗಡಿಗಳಲ್ಲಿ ಮಾಡೋ ಹಲಾಲ್ ಕಟ್ ಮಾಂಸವನ್ನ ಖರೀದಿಸಬೇಡಿ ಅನ್ನೋ ಕ್ಯಾಂಪೇನ್ ಶುರುವಾಗಿದೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಬನ್ನೇರುಘಟ್ಟದಲ್ಲಿ ಕುರಿ ಮಾಂಸ ದುಬಾರಿಯಾಗಿದ್ದು ರೇಟ್ ಇಳಿಸುವಂತೆ ಪಂಚಾಯಿತಿ ನೋಟಿಸ್ ನೀಡಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ಪ್ರತಿ ಕೆಜಿ ಮಟನ್ಗೆ 800 ರೂ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕೆಜಿ ಮಟನ್ಗೆ 650 ರೂ ಮಾರಾಟಕ್ಕೆ ಸೂಚಿಸುವಂತೆ ಬನ್ನೇರುಘಟ್ಟ ಗ್ರಾಮ ಪಂಚಾಯಿತಿಗೆ ಕೆಲವರು ಮನವಿ ಸಲ್ಲಿಸಿದ್ದರು. ಸದ್ಯ ಪಂಚಾಯಿತಿ ನಿಗದಿ ಮಾಡಿದ ಬೆಲೆಗಿಂತ ಹೆಚ್ಚು ಬೆಲೆ ಮಾರಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರತಿ ಮಾಂಸದ ಅಂಗಡಿಗೆ ಗ್ರಾ.ಪಂ ಸದಸ್ಯರು ನೋಟಿಸ್ ಅಂಟಿಸಿದ್ದಾರೆ.
ಯುಗಾದಿ ಹಬ್ಬ ಬರಲಿದೆ. ಕಳೆದ ಎರಡು ವರ್ಷದಿಂದ ಕೊರೊನಾದಿಂದ ಹಬ್ಬ ಆಚರಿಸಿದ ಮಂದಿ ಈ ಬಾರಿ ಯುಗಾದಿಯನ್ನ ಭರ್ಜರಿಯಾಗಿ ಆಚರಿಸೋಕೆ ಸಜ್ಜಾಗಿದ್ದಾರೆ. ಯುಗಾದಿ ಹಬ್ಬದ ಮಾರನೇ ದಿನ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ರಾಜ್ಯದ ದಕ್ಷಿಣ ಭಾಗದಲ್ಲಿ ಯುಗಾದಿ ಹೊಸತೊಡಕನ್ನ ಆಚರಿಸಲಿದ್ದು, ಬಹುತೇಕರ ಮನೆಯಲ್ಲಿ ಮಾಂಸದೂಟ ಮಾಡಲಿದ್ದಾರೆ. ಆದ್ರೆ, ಈಬಾರಿ ಮುಸ್ಲಿಮರ ಅಂಗಡಿಗಳಲ್ಲಿ ಮಾಡೋ ಹಲಾಲ್ ಕಟ್ ಮಾಂಸವನ್ನ ಖರೀದಿಸಬಾರದು. ಅದು ಹಿಂದುಗಳಿಗೆ ಅಪವಿತ್ರ ಅಂತೆಲ್ಲ ಅಭಿಯಾನ ಶುರುವಾಗಿದೆ. ಹೀಗಾಗಿ ಕೆಲವು ಅಂಗಡಿಗಳು ಮಾಂಸದ ದರವನ್ನು ಹೆಚ್ಚಿಸಿವೆ. ಅದೇ ರೀತಿ ಬನ್ನೇರುಘಟ್ಟದಲ್ಲಿ ಮಟನ್ ಬೆಲೆ 800 ರೂ ಇದ್ದು ಗ್ರಾ.ಪಂ ಸದಸ್ಯರು ಮಾಂಸದಂಗಡಿಗಳ ಮುಂದೆ ನೋಟಿಸ್ ಅಂಟಿಸಿದ್ದಾರೆ. ಪಂಚಾಯಿತಿ ನಿಗದಿ ಮಾಡಿದ ಬೆಲೆಗಿಂತ ಹೆಚ್ಚು ಬೆಲೆ ಮಾರಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಅಂಕೋಲಾ ಉದ್ಯಮಿ ಆರ್ಎನ್ ನಾಯಕ್ ಹತ್ಯೆ ಪ್ರಕರಣ; 9 ಆರೋಪಿಗಳ ವಿರುದ್ಧದ ಆರೋಪ ಸಾಬೀತು, ಮೂವರು ನಿರ್ದೋಷಿಗಳೆಂದು ತೀರ್ಪು
ನಾಳೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್
Published On - 5:41 pm, Wed, 30 March 22