ಆಕೆ ಆತ ಜೀವನ ಪೂರ್ತಿ ತನ್ನ ಜೊತೆ ಇರ್ತಾನೆ, ತನಗೊಂದು ಬಾಳು ಕೊಡ್ತಾನೆ ಅಂತ ಅಂತ ನಂಬಿ ಹಣ ಆಭರಣದ ಜೊತೆಗೆ ಸರ್ವಸ್ವವನ್ನು ಆತನಿಗೇ ನೀಡಿದ್ಲು. ಜೊತೆಗೆ ಪತ್ನಿಯಂತೆ (wife) ಎಲ್ಲೆಡೆ ಪೂಜೆ ಪುನಸ್ಕಾರ ಮಾಡಿದ್ದು ಇನ್ನೇನು ಹೊಸ ಮನೆ ತನಗೆ ಕೊಡ್ತಾನೆ ( live in together) ಅಂತಲೆ ಅಂದುಕೊಂಡಿದ್ಲು. ಆದ್ರೆ ಹಣ ಆಭರಣ ಎಲ್ಲ ಪಡೆದವನು ರಾತ್ರೋ ರಾತ್ರಿ ಮನೆಯಿಂದ ಆಕೆಯನ್ನ ಹೊರ ಹಾಕಿಬಿಟ್ಟಿದ್ದಾನೆ (cheating). ಇದೀಗ ನ್ಯಾಯಕ್ಕಾಗಿ ಮಹಿಳೆ ಆತನ ಮನೆಯ ಮುಂದೆ ಧರಣಿಗೆ ಮುಂದಾಗಿದ್ದಾಳೆ. ಸೈಟ್ ನಲ್ಲಿ ಸಾಕ್ಷಾತ್ ದಂಪತಿಯಂತೆ ಕುಳಿತು ಪೂಜೆ ಮಾಡ್ತಿದ್ದಾರೆ ಒಬ್ಬರಿಗೋಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿ. ಒಂದೇ ಮನೆಯಲ್ಲಿ ತಿಂದು ಉಂಡು ಪೋಟೋಗೆ ಪೋಸ್ ಸಹ ಕೊಟ್ಟಿದ್ದಾರೆ. ಇನ್ನು ಇಬ್ಬರು ದಂಪತಿಯೇ ಅಂತ ಅಂದುಕೊಳ್ಳುವಷ್ಟರಲ್ಲಿ ಉಂಡು ಹೋದ ಕೊಂಡು ಹೋದ ಎಂಬಂತೆ ಮಹಿಳೆ ಬಳಿ ಇದ್ದ ಹಣವನ್ನೆಲ್ಲ ಲಪಟಾಯಿಸಿದ ಭೂಪ ಮನಸು ಕೊಟ್ಟವಳನ್ನ ಮನೆಯಿಂದ ಹೊರಗಡೆ ಹಾಕಿಬಿಟ್ಟಿದ್ದಾನೆ. ನ್ಯಾಯಕ್ಕಾಗಿ ವೃದ್ದ ಪೋಷಕರ ಜೊತೆ ಮಹಿಳೆ ಹೋರಾಟದ ಹಾದಿ ಹಿಡಿದಿದ್ದಾಳೆ. ಅಂದಹಾಗೆ ಈ ರೀತಿ ಲಕ್ಷ ಲಕ್ಷ ಹಣ, ಆಭರಣ ಪಡೆದು ಮಹಿಳೆಗೆ ವಂಚನೆ ಮಾಡಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ( Vijayapura, Devanahalli).
ಹೌದು ಅಂದಹಾಗೆ ಈ ಪೋಟೋದಲ್ಲಿ ಮಹಿಳೆ ಜೊತೆ ಚಕ್ಕಂದಾ ಆಡುತ್ತಾ ಸೆಲ್ಫಿಗೆ ಪೋಸ್ ಕೊಟ್ಟಿರುವ ಇವನ ಹೆಸರು ಪುರುಷೋತ್ತಮ. ವಿಜಯಪುರ ಪಟ್ಟಣದ ಜಯಮಾಲಿನಿ ಬಡಾವಣೆಯ ನಿವಾಸಿ. ಇವನು ಇದೇ ಪಟ್ಟಣದ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿಕೊಂಡು ಆಕೆಯನ್ನ ಗಂಡನಿಂದ ದೂರ ಮಾಡಿ ತನ್ನ ಜೊತೆಯೆ ಕಳೆದ ಹಲವು ವರ್ಷಗಳಿಂದ ಮನೆ ಮಾಡಿ ಇಟ್ಟುಕೊಂಡಿದ್ನಂತೆ.
ಜೊತೆಗೆ ಗಂಡ ಹೆಂಡತಿಯಂತೆ ಇಬ್ಬರೂ ಸಹ ಜೀವನ ನಡೆಸಿದ್ದು ಮಹಿಳೆಗೆ ತವರು ಮನೆಯಿಂದ ಬಂದಿದ್ದ 10 ಲಕ್ಷ ಹಣ ಹಾಗೂ ಆಭರಣಗಳನ್ನೆಲ್ಲ ಸೈಟ್ ತೆಗೆದುಕೊಂಡಿರುವುದಾಗಿ ಹೇಳಿ ತಾನೆ ಪಡೆದುಕೊಂಡು ಸೈಟ್ ನಲ್ಲಿ ಮನೆ ಕಟ್ಟೋಕೆ ಭೂಮಿ ಪೂಜೆ ಸಹ ಮಾಡಿಸಿದ್ನಂತೆ. ಆದ್ರೆ ಭೂಮಿ ಪೂಜೆ ಮಾಡಿ ಮನೆ ನಿರ್ಮಾಣ ಮಾಡ್ತಿದ್ದಂತೆ ಮಹಿಳೆ ಸೈಟ್ ಮತ್ತು ಮನೆಯನ್ನ ಇಬ್ಬರ ಹೆಸರಿಗೂ ಜಂಟಿಯಾಗಿ ಮಾಡುವಂತೆ ಕೇಳಿದ್ದಾಳೆ. ಈ ವೇಳೆ ಮನೆಯಲ್ಲಿ ಭಾಗ ಕೇಳ್ತಿದ್ದಂತೆ ಪುರುಷೋತ್ತಮ ತನ್ನ ಅಸಲಿ ರೂಪವನ್ನ ತೋರಿಸಿದ್ದು ಮಹಿಳೆಯ ವಿರುದ್ದ ಕಿಡಿಕಾಡಿದ್ದಾನೆ. ಜೊತೆಗೆ ಮಹಿಳೆಯನ್ನ ರಾತ್ರೋರಾತ್ರಿ ಮನೆಯಿಂದ ಹೊರಗಡೆ ಹಾಕಿದ್ದು ಇದೀಗ ನನಗೂ-ನಿನಗೂ ಯಾವುದೇ ಸಂಬಂಧವಿಲ್ಲ ಅಂತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ ನೊಂದ ಮಹಿಳೆ ಶಾರದಾ.
Also Read: ಉಡುಪಿ – ಪರ್ಕಳದ ಕೆರೆ ಅಭಿವೃದ್ಧಿ ವೇಳೆ ಪುರಾತನ ದೇವಾಲಯದ ಅವಶೇಷಗಳು ಪತ್ತೆ
ಮನೆಯಿಂದ ಹೊರಗಡೆ ಹಾಕಿದ ಪರಿಣಾಮ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಹಿಳೆಯ ಕುಟುಂಬಸ್ಥರು ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಜೊತೆಗೆ ಇದೀಗ ಹಣ ಆಭರಣವನ್ನೆಲ್ಲ ಪಡೆದು ಮೋಸ ಮಾಡಿದ್ದಾನೆ ಅಂತ ವಂಚಿಸಿದ ಪುರುಷೋತ್ತಮನ ಮನೆ ಮುಂದೆ ತಮಟೆ ಹೊಡೆದು ನ್ಯಾಯಕ್ಕಾಗಿ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಧರಣಿ ನಡೆಸಿದ್ರು. ಇನ್ನು ಮಹಿಳೆ ಧರಣಿ ನಡೆಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿಜಯಪುರ ಠಾಣೆ ಪೊಲೀಸರು ಮಹಿಳೆಯಿಂದ ದೂರು ಪಡೆದು ಆರೋಪಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಟ್ಟಾರೆ ಸ್ನೇಹಿತ ಬಾಳು ಕೊಡ್ತಾನೆ, ಜೀವನ ಚೆನ್ನಾಗಿರುತ್ತೆ ಅಂತ ನಂಬಿ ಬಂದ ಮಹಿಳೆ ಇದೀಗ ಗಂಡನೂ ಇಲ್ಲದೆ ಹಣವೂ ಇಲ್ಲದೆ ಬೀದಿಗೆ ಬಿದ್ದಿದ್ದು ನ್ಯಾಯಕ್ಕಾಗಿ ಪರದಾಡ್ತಿದ್ದಾಳೆ. ಇಂತಹ ಅಮಾಯಕ ಮಹಿಳೆಯರನ್ನೆ ಟಾರ್ಗೆಟ್ ಮಾಡಿಕೊಂಡು ವಂಚಿಸುವ ಇಂತಹ ನಯವಂಚಕರನ್ನ ನಂಬುವ ಮುನ್ನ ಸ್ವಲ್ಪ ಎಚ್ಚರದಿಂದಿರುವುದು ಒಳ್ಳೆಯದು ಅಲ್ಲವೇ ಹೆಂಗೆಳೆಯರೇ?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ