11ವರ್ಷದ ಬಾಲಕಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

11ವರ್ಷದ ಬಾಲಕಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಆನೇಕಲ್: ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಜೀವಂತ ಹೃದಯವನ್ನ ಯಶಸ್ವಿಯಾಗಿ ರವಾನೆ ಮಾಡಲಾಗಿದೆ. ಜೆಪಿ ನಗರದ ಆಸ್ಟರ್ ಆಸ್ಪತ್ರೆಯಿಂದ ಹೆಬ್ಬಗೋಡಿ ಬಳಿಯ ನಾರಾಯಣ ಹೃದಯಾಲಯಕ್ಕೆ ಹೃದಯ ರವಾನೆ ಮಾಡಲಾಗಿದೆ.

ನಿನ್ನೆ ಸಂಜೆ ಪುರುಷೋತ್ತಮ್ (23) ಎಂಬ ಯುವಕ ಅಪಘಾತಕ್ಕೀಡಾಗಿದ್ದ. ಬೆಳಕಿನ ಜಾವ ಮೃತಪಟ್ಟಿದ್ದಾನೆ. ಪುರುಷೋತ್ತಮ್ ಕುಟುಂಬದವರ ಅನುಮತಿ ವೇರೆಗೆ ಹೃದಯ ರವಾನೆ ಮಾಡಲಾಗಿದ್ದು, ಬಾನುಲೇಕ ಎಂಬಾ 11ವರ್ಷದ ಹುಡುಗಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಗಂಗಾವತಿ ಜಿಲ್ಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾನುಲೇಕಾಳಿಗೆ ಹೃದಯದಲ್ಲಿನ ಮಾಂಸದ ತೊಂದರೆಯಿಂದಾಗಿ ಬಳಲುತ್ತಿದ್ದಳು. ಈಗ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಡಾ.ವರುಣ್ ಶೆಟ್ಟಿರವರಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.

Click on your DTH Provider to Add TV9 Kannada