ಬೆಂಗಳೂರು ಗ್ರಾಮಾಂತರ: ರೈಲಿನಲ್ಲಿ ಸೀಟಿಗಾಗಿ ಗಲಾಟೆ; ಓರ್ವ ವ್ಯಕ್ತಿಗೆ ಚಾಕು ಇರಿತ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 31, 2024 | 3:20 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರೈಲ್ವೆ ಸ್ಟೇಷನ್​(Nelamangala Railway station)ನಲ್ಲಿ ರೈಲಿನಲ್ಲಿ ಸ್ನೇಹಿತನಿಗೆ ಹಿಡಿದಿದ್ದ ಸೀಟಿನಲ್ಲಿ ಕೂರುವ ವಿಚಾರದಲ್ಲಿ ಗಲಾಟೆಯಾಗಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ನಡೆದಿದೆ. ಚಾಕು ಇರಿದು ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದು, ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ಗ್ರಾಮಾಂತರ: ರೈಲಿನಲ್ಲಿ ಸೀಟಿಗಾಗಿ ಗಲಾಟೆ; ಓರ್ವ ವ್ಯಕ್ತಿಗೆ ಚಾಕು ಇರಿತ
ಚಾಕು ಇರಿತಕ್ಕೋಳಗಾದವರ ಜೊತೆ ಪೊಲೀಸ್​ ಮಾತುಕತೆ
Follow us on

ಬೆಂಗಳೂರು ಗ್ರಾಮಾಂತರ, ಮೇ.31: ರೈಲಿನಲ್ಲಿ ಸ್ನೇಹಿತನಿಗೆ ಹಿಡಿದಿದ್ದ ಸೀಟಿನಲ್ಲಿ ಕೂರುವ ವಿಚಾರದಲ್ಲಿ ಗಲಾಟೆಯಾಗಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರೈಲ್ವೆ ಸ್ಟೇಷನ್​(Nelamangala Railway station)ನಲ್ಲಿ ನಡೆದಿದೆ. ಗಂಗಾಧರ್ ಹಾಗೂ ಯೋಗೇಶ್​ಗೆ ಹಲ್ಲೆಗೊಳಗಾದವರು. ಯಶವಂತಪುರದಿಂದ ಬೆಂಗಳೂರು-ಹಾಸನ ಮಾರ್ಗದ ರೈಲಿನಲ್ಲಿ ಗಂಗಾಧರ್ ಹಾಗೂ ಯೋಗೇಶ್ ಬಂದಿದ್ದರು.

ಈ ವೇಳೆ ಪೋನ್​ ಕರೆಗೆ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣಕ್ಕೆ ಕುಳಿತಿದ್ದ ಸೀಟ್ ನೋಡಿಕೊಳ್ಳಲು ಸ್ನೇಹಿತ ಯೋಗೇಶ್​ಗೆ ತಿಳಿಸಿ ಗಂಗಾಧರ್ ಡೋರ್ ಬಳಿ ಹೋಗಿದ್ದಾರೆ. ರೈಲು ನೆಲಮಂಗಲ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಸೀಟ್​ನಲ್ಲಿ ಕೂರಲು ಯತ್ನಿಸಿದ್ದ. ಈ ಕುರಿತು ಪ್ರಶ್ನೆ ಮಾಡಿದ್ದಕ್ಕೆ ತರಕಾರಿ ಕೊಯ್ಯುವ ಚಾಕುವಿನಿಂದ ಹಲ್ಲೆ ನಡೆಸಿ ರೈಲಿನಿಂದ ಪರಾರಿಯಾಗಿದ್ದಾನೆ. ಗಾಯಾಳುಗಳಿಗೆ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಾಕು ಇರಿದು ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ಹಿಂದೂ ಯುವಕನಿಗೆ ಚಾಕು ಇರಿತ; ಬುದ್ದಿವಾದ ಹೇಳಿದಕ್ಕೆ ಕೊಲೆಗೆ ಯತ್ನ

ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ ಕಾರು ಗ್ಯಾರೇಜ್

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಕಾರು ಗ್ಯಾರೇಜ್​​ ಹೊತ್ತಿ ಉರಿದ​ ಘಟನೆ ನಡೆದಿದೆ. ಬೆಂಕಿಗಾಹುತಿಯಾದ ನಾಲ್ಕು ಕಾರು, ಟೈಯರ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ನಾಶವಾಗಿದೆ. ಅದೃಷ್ಟವಶಾತ್​ ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಖಂಡು ಮಾಳಿ ಎನ್ನುವವರಿಗೆ ಸೇರಿದ ಅಂಗಡಿ ಇದಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Fri, 31 May 24