ಶಿವಮೊಗ್ಗ: ಹಿಂದೂ ಯುವಕನಿಗೆ ಚಾಕು ಇರಿತ; ಬುದ್ದಿವಾದ ಹೇಳಿದಕ್ಕೆ ಕೊಲೆಗೆ ಯತ್ನ

ಭದ್ರಾವತಿಯಲ್ಲಿ ಅನ್ಯಕೋಮಿನ ಯುವಕರು, ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣ ಇನ್ನೂ ಕಾವು ಕಮ್ಮಿ ಆಗಿಲ್ಲ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲಿಯೇ ಹಿಂದೂ ಯುವಕನಿಗೆ ಅನ್ಯ ಕೋಮಿನ ಯುವಕರು ಚಾಕು ಇರಿದಿದ್ದಾರೆ. ಬೈಕ್ ವ್ಹೀಲಿಂಗ್ ಮಾಡದಂತೆ ಬುದ್ದಿ ಹೇಳಿದ ತಪ್ಪಿಗೆ ಯುವಕನು ಶಿವಮೊಗ್ಗದ ಖಾಸಗಿ ಆಸ್ಪತ್ರೆ ಪಾಲಾಗಿದ್ದಾನೆ.

ಶಿವಮೊಗ್ಗ: ಹಿಂದೂ ಯುವಕನಿಗೆ ಚಾಕು ಇರಿತ; ಬುದ್ದಿವಾದ ಹೇಳಿದಕ್ಕೆ ಕೊಲೆಗೆ ಯತ್ನ
ಶಿಕಾರಿಪುರದಲ್ಲಿ ಹಿಂದೂ ಯುವಕನಿಗೆ ಅನ್ಯಕೋಮಿನ ಯುವಕನಿಂದ ಚಾಕು ಇರಿತ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 07, 2024 | 6:54 PM

ಶಿವಮೊಗ್ಗ , ಫೆ.07: ಬೈಕ್ ವ್ಹೀಲಿಂಗ್ ಮಾಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಚಾಕು ಇರಿದಿರುವ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಶಿಕಾರಿಪುರ ಪಟ್ಟಣದ ದೊಡ್ಡಪೇಟೆ ಬಳಿ ನಡೆದಿದೆ. ಚಾಕು ಇರಿತಕ್ಕೊಳಗಾದ ಯುವಕನನ್ನು ಸುಶೀಲ್ (23) ಎಂದು ಗುರುತಿಸಲಾಗಿದೆ. ‌ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು ಈ ಘಟನೆ ಖಂಡಿಸಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಶಿಕಾರಿಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ಮೂಲಕ ಘಟನೆ ಕುರಿತು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಯುವಕ ಸುಶೀಲ್ ವೃತ್ತಿಯಲ್ಲಿ ಖಾಸಗಿ ಕಾಲೇಜೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ನಿನ್ನೆ ರಾತ್ರಿ ಊಟ ಮುಗಿಸಿಕೊಂಡು ಶಿಕಾರಿಪುರದ ದೊಡ್ಡಪೇಟೆ ಮುಖ್ಯ ರಸ್ತೆಯ ವಿಠ್ಠಲ ದೇವಸ್ಥಾನದ ಬಳಿ ತಮ್ಮ ನಾಯಿ ಹಿಡಿದುಕೊಂಡು ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಅನ್ಯಕೋಮಿನ ಯುವಕನೋರ್ವ ಬೈಕ್ ವ್ಹೀಲಿಂಗ್ ಮಾಡುತ್ತಾ ಬಂದಿದ್ದಾನೆ. ಇತ ಇದೇ ಮೊದಲ ಬಾರಿ ಅಲ್ಲ, ಹಲವು ಬಾರಿ ಈ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದ.

ಇದನ್ನೂ ಓದಿ:ಚಾಮರಾಜನಗರ: ಯುವತಿಗೆ ಚುಡಾಯಿಸಿದಕ್ಕೆ ಯುವಕನಿಗೆ ಆರು ಬಾರಿ ಚಾಕು ಇರಿತ

ಈ ಹಿನ್ನಲೆ ಇದನ್ನು ಗಮನಿಸಿದ ಸುಶೀಲ್, ಈ ರಸ್ತೆಯಲ್ಲಿ ವೃದ್ದರು, ಮಕ್ಕಳು ಓಡಾಡುತ್ತಿರುತ್ತಾರೆ. ವ್ಹೀಲಿಂಗ್ ಮಾಡಿದರೆ ಸಮಸ್ಯೆ ಆಗುತ್ತದೆ. ವ್ಹೀಲಿಂಗ್ ಮಾಡಬೇಡ ಎಂದು ಬುದ್ದಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಯುವಕ, ಅಲ್ಲಿಂದ ಹೋಗಿ ಮತ್ತೆ ಮೂವರನ್ನು ಗುಂಪು‌ ಕಟ್ಟಿಕೊಂಡು ಬಂದು ಅಲ್ಲಿಯೇ ವಾಕಿಂಗ್ ಮಾಡುತ್ತಿದ್ದ ಸುಶೀಲ್ ಮೇಲೆ ಚಾಕು ಇರಿದಿದ್ದಾನೆ. ಚಾಕು ಇರಿತಕ್ಕೊಳಗಾಗಿ ಗಾಯಗೊಂಡ ಸುಶೀಲ್​ಗೆ ತಕ್ಷಣವೇ ಸ್ಥಳೀಯರು ಶಿಕಾರಿಪುರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನೂ ಘಟನೆ ಖಂಡಿಸಿ ಹಾಗು ಪೊಲೀಸರು ವೈಫಲ್ಯ ಎಂದು ಆರೋಪಿಸಿ ಸಂಸದ ಬಿ.ವೈ‌.ರಾಘವೇಂದ್ರ ಶಿಕಾರಿಪುರ ಪೊಲೀಸ್ ಠಾಣೆ ಎದುರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಈ ಸರಕಾರ ಓಟಿಗಾಗಿ ಮುಸ್ಲಿಂರನ್ನು ಓಲೈಸುವುದು ಬಿಡಬೇಕು. ಓಟ್ ಬ್ಯಾಂಕ್ ರಾಜಕಾರಣದಿಂದ ಕ್ರಿಮಿನಲ್ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದುಗಳ ಕುಗ್ಗಿಸುವ ಕೆಲಸ‌ ಮಾಡಲು ಹೋಗಬೇಡಿ.‌ ಅಪರಾಧಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು. ಸರಕಾರ ಇಂತಹವರಿಗೆ ಸರಿಯಾದ ಬುದ್ದಿ ಕಲಿಸಬೇಕು. ಇಲ್ಲವಾದರೆ ಹಿಂದು ಯುವಕರೇ ಬುದ್ದಿ ಕಲಿಸಬೇಕಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಎಚ್ಚರಿಕೆ ನೀಡಿದ್ದಾರೆ. ಇನ್ನು ಇದೇ ವೇಳೆ ಚಾಕು ಇರಿತಕ್ಕೊಳಗಾದ ಸುಶೀಲ್ ತಂದೆ ಘಟನೆ ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ‌ನಮ್ಮ ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಬುದ್ದಿವಾದ ಹೇಳಿದ್ದಕ್ಕೆ ಮನೆ ಬಳಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಳಿಕ ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ ಮಾಡಿಕೊಂಡು ಬಲೆ ಬೀಸಿದ್ದರು.‌ ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಬುದ್ದಿವಾದ ಹೇಳಿದ್ದೆ ತಪ್ಪಾಯ್ತು ಎನ್ನುವಂತಾಗಿದೆ. ಬುದ್ದಿವಾದ ಹೇಳಿದ್ದಕ್ಕೆ ಚಾಕು ಇರಿತಕ್ಕೊಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ವ್ಹೀಲಿಂಗ್ ಮಾಡುವವರಿಗೆ ಪಾಠ ಕಲಿಸಬೇಕಿದೆ. ಇಲ್ಲದಿದ್ದರೆ ಅಮಾಯಕರು ಈ ರೀತಿ ಚಾಕು ಇರಿತಕ್ಕೊಳಗಾಗಿ ನೋವು ಅನುಭವಿಸುತ್ತಾರೆ.

ಇದನ್ನೂ ಓದಿ:ಚಾಮರಾಜನಗರ: ಯುವತಿಗೆ ಚುಡಾಯಿಸಿದಕ್ಕೆ ಯುವಕನಿಗೆ ಆರು ಬಾರಿ ಚಾಕು ಇರಿತ

ಮಲೆನಾಡಿನಲ್ಲಿ ಸದ್ಯ ಸಣ್ಣ ಪುಟ್ಟ ವಿಷಯಕ್ಕೆ ಗಲಾಟೆ ಕೇಸ್ ಜಾಸ್ತಿ ಆಗುತ್ತಿವೆ. ಒಂದು ಕೋಮಿನ ಮೇಲೆ ಮತ್ತೊಂದು ಕೋಮು ಟಾರ್ಗೆಟ್ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಭದ್ರಾವತಿ ಹಲ್ಲೆ ಪ್ರಕರಣ ನಡೆದು ಎರಡೇ ದಿನಕ್ಕೆ ಶಿಕಾರಿಪುರದಲ್ಲಿ ಚಾಕು ಇರಿತ ಆಗಿದ್ದು ಸದ್ಯ ಎಲ್ಲ ಕೆಂಗಣ್ಣಿಗೆ ಗುರಿಯಾಗಿದೆ… ಜಿಲ್ಲಾ ಪೋಲಿಸ್ ಮತ್ತು ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.. ಇಲ್ಲದಿದ್ದರೆ ಮಲೆನಾಡು ಕೋಮು ಸೂಕ್ಷ್ಮ ಜಿಲ್ಲೆ.. ಯಾವುದೋ ಪ್ರಕರಣ ಮತ್ತೆಲ್ಲೊ ಹೊತ್ತಿ ಉಳಿಯುವಂತಿಗಬಾರದು.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ