ರೈಲು ಹರಿದು 46 ಕುರಿಗಳ ಮಾರಣ ಹೋಮ, 15ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಕುರಿ ಕಳಕೊಂಡ ರೈತ ಕಂಗಾಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 14, 2024 | 7:29 PM

ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ಬಳಿಯಿರುವ ರೈಲ್ವೆ ಹಳಿಯನ್ನು ದಾಟುತ್ತಿದ್ದ ಕುರಿಗಳ ಮೇಲೆ ರೈಲು ಹರಿದಿದ್ದು, ಸ್ಥಳದಲ್ಲೇ 46 ಕುರಿಗಳು ಸಾವನ್ನಪ್ಪಿವೆ. ಇತ್ತ ಲಕ್ಷಾಂತರ ಮೌಲ್ಯದ ಕುರಿಗಳನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದು, ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ರೈಲು ಹರಿದು 46 ಕುರಿಗಳ ಮಾರಣ ಹೋಮ, 15ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಕುರಿ ಕಳಕೊಂಡ ರೈತ ಕಂಗಾಲು
ರೈಲು ಹರಿದು 46 ಕುರಿಗಳ ಮಾರಣ ಹೋಮ
Follow us on

ಬೆಂಗಳೂರು ಗ್ರಾಮಾಂತರ, ಮೇ.14: ರೈಲ್ವೆ ಹಳಿ ದಾಟುವ ವೇಳೆ ಕುರಿಮಂದೆ ಮೇಲೆ ರೈಲು ಹರಿದ ಪರಿಣಾಮ 46 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ರೈಲ್ವೆ ಹಳಿಯ ಮೇಲೆ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ರೈತ ದೇವರಾಜು ಅವರಿಗೆ ಸೇರಿದ ಕುರಿಗಳು ಇದಾಗಿದ್ದು, 15 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಕುರಿಗಳನ್ನ ಕಳದೆಕೊಂಡ ರೈತ, ಕಂಗಾಲಾಗಿದ್ದಾನೆ. ಕುರಿಗಳು ಕೆರೆಯಲ್ಲಿ ನೀರು ಕುಡಿದು ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಲಿಸುತ್ತಿದ ಕ್ಯಾಂಟರ್​ ವಾಹನದಲ್ಲಿ ಬೆಂಕಿ

ವಿಜಯಪುರ: ಸಿಂದಗಿ ತಾಲೂಕಿನ ಮೊರಟಗಿ ಗ್ರಾಮದ ಬಳಿ ಚಲಿಸುತ್ತಿದ್ದ ಕ್ಯಾಂಟರ್​ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಕೆಎ 02, ಎಜೆ 9127 ಸಂಖ್ಯೆಯ ಕ್ಯಾಂಟರ್​ ವಾಹನದ ಕ್ಯಾಬಿನ್ ಮತ್ತು ಇಂಜಿನ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದು ಕಲಬುರಗಿಯಿಂದ ಬೆಂಗಳೂರಿಗೆ ತಂಪು ಪಾನೀಯಾದ ಖಾಲಿ ಬಾಟಲಿಯನ್ನು ಸಾಗಿಸುತ್ತಿತ್ತು. ಈ ವೇಳೆ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಆಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರಾಯಚೂರಿನಲ್ಲಿ ಎಮ್ಮೆಗೆ ಡಿಕ್ಕಿಯಾಗಿ ಉರುಳಿಬಿದ್ದ ಖಾಸಗಿ ಬಸ್! ಚಿತ್ರದುರ್ಗದಲ್ಲಿ ಹೈಬ್ರೀಡ್ ಜೋಳದ ಚಿಗುರು ಸೇವಿಸಿ 11 ಕುರಿಗಳು ಸಾವು

ಉಡುಪಿಯಲ್ಲಿ ಹೊತ್ತಿ ಉರಿದ ಬಿರಿಯಾನಿ ಹಟ್ ಹೋಟೆಲ್​

ಉಡುಪಿ: ನಗರದ ಕರಾವಳಿ ಜಂಕ್ಷನ್ ಬಳಿ ಇರುವ ಬಿರಿಯಾನಿ ಹಟ್ ಹೋಟೆಲ್​ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹೋಟೆಲ್ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಅವರು ಬೆಂಕಿ ನಂದಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಮಾಲೀಕರು ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರು. ಇದೀಗ ಅಗ್ನಿ ಅವಘಡ ನಡೆದಿದ್ದು, ಶಾರ್ಟ್ ​​ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Tue, 14 May 24