ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ರೈತ ಸಂಘ, ಹಸಿರು ಸೇನೆ; ಸ್ವಚ್ಛತಾ ಅಭಿಯಾನ ಶುರು

ರೈತ ಸಂಘ ಮತ್ತು ಹಸಿರು ಸೇನೆ ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ಯಲಹಂಕ ರೈತ ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹೆಸರಘಟ್ಟ ಕೆರೆ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೂ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ಕೆರೆ ವ್ಯಾಪ್ತಿಯಲ್ಲಿ ಪರಿಸರ‌ ಸಂರಕ್ಷಣೆಗಾಗಿ ಅಧಿಕಾರಿಗಳಿಗೆ ಮನವಿ ಪತ್ರ ಬರೆಯಲಾಗಿದೆ.

ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ರೈತ ಸಂಘ, ಹಸಿರು ಸೇನೆ; ಸ್ವಚ್ಛತಾ ಅಭಿಯಾನ ಶುರು
ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯ
Follow us
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು

Updated on: May 15, 2024 | 9:51 AM

ನೆಲಮಂಗಲ, ಮೇ.15: ಮನುಷ್ಯನ‌ ನಾಗರೀಕತೆ, ಬೆಳವಣಿಗೆ, ಅಭಿವೃದ್ಧಿಗೆ ಪೂರಕ ನೀರಾವರಿ ಮೂಲಾಧಾರ. ಅರ್ಕಾವತಿ ನದಿಪಾತ್ರದ ಅತ್ಯಂತ ಪ್ರಮುಖ ಕೆರೆ ಬೆಂಗಳೂರಿನ ಹೆಸರಘಟ್ಟಕೆರೆ (Hesaraghatta Lake). ಹೆಸರಘಟ್ಟ ಕೆರೆ ವ್ಯಾಪ್ತಿಯಲ್ಲಿ ನಲ್ವತ್ತರಿಂದ ಐವತ್ತು ಹಳ್ಳಿಗಳಿವೆ. ನಂದಿಬೆಟ್ಟದಲ್ಲಿ (Nandi Hills) ಹುಟ್ಟುವ ಅರ್ಕಾವತಿ ನದಿ ದೊಡ್ಡಬಳ್ಳಾಪುರ-ದೇವನಹಳ್ಳಿ ಮಾರ್ಗವಾಗಿ ಹರಿಯುತ್ತದೆ. ಕೆರೆಯಿಂದ ಕೆರೆಗೆ ಕೊಡಿ ರೂಪದಲ್ಲಿ ಹರಿದು ಹೆಸರಘಟ್ಟ- ತಿಪ್ಪಗೊಂಡನಹಳ್ಳಿ ಕೆರೆ ಮಾರ್ಗವಾಗಿ ಹರಿಯುತ್ತದೆ. ಅರ್ಕಾವತಿ (Arkavathi River) ಮಾಗಡಿಯ ತಿಪ್ಪಗೊಂಡನಹಳ್ಳಿ, ರಾಮನಗರದ ಮಂಚನಬೆಲೆ ಜಲಾಶಯ ಮೂಲಕ ಹರಿಯುತ್ತಾಳೆ. ಚನ್ನಪಟ್ಟಣದ ಕಣ್ವಾ ಜಲಾಶಯದ ಮೂಲಕ ಸಂಗಮದಲ್ಲಿ ಕಾವೇರಿ ನದಿ ಸೇರ್ತಾಳೆ. ಅರ್ಕಾವತಿ ನದಿ ಕಾವೇರಿ ನದಿಯ ಉಪನದಿ. ಹೀಗೆ ಕೆರೆಯಿಂದ ಕೆರೆಗೆ ಹರಿಯುವ ಅರ್ಕಾವತಿ ನದಿಪಾತ್ರದ ‌ಹೆಸರಘಟ್ಟ ಕೆರೆ‌ ಪರಿಸರ ನಾಶವಾಗ್ತಿದೆ.

ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೆಸರಘಟ್ಟ ಕೆರೆ ವ್ಯಾಪಿಸಿದೆ. ಈ ಹೆಸರಘಟ್ಟ ಕೆರೆ ಪ್ರದೇಶವನ್ನು ವ್ಯಾಸರಘಟ್ಟ ಎಂದು ಕರೆಯುತ್ತಿದ್ದರು. ವ್ಯಾಸ ಮಹರ್ಷಿ ವಾಸದಿಂದ ಈ ಪ್ರದೇಶ ವ್ಯಾಸರಘಟ್ಟವಾಗಿ ನಂತರ ಹೆಸರಘಟ್ಟ ಆಗಿದೆ ಎನ್ನಲಾಗುತ್ತೆ. ಇಂತಹ ಹಿನ್ನಲೆಯ ಹೆಸರಘಟ್ಟ ಕೆರೆ ನೀರನ್ನು 1886ರಲ್ಲಿ ಬೆಂಗಳೂರಿನ 10ಲಕ್ಷ ಜನತೆಯ ಕುಡಿಯುವ ನೀರಿಗೆ ಬಳಸಲಾಗ್ತಿತ್ತು. ಜನಸಂಖ್ಯೆ ಹೆಚ್ಚಾದಂತೆ ಸರ್ಕಾರ ಕಾವೇರಿ ನೀರಿನತ್ತ ಗಮನ ಹರಿಸಿತು. ದಶಕಗಳ ಕಾಲ ಬೆಂಗಳೂರಿನ ದಾಹದ ದಣಿವೂ‌ ನೀಗಿಸಿದ ಹೆಸರಘಟ್ಟ ಕೆರೆ ಪರಿಸರ ಇಂದು‌ ನಾಶವಾಗ್ತಿದೆ. ಸದ್ಯ ಕೆರೆಯಲ್ಲಿರುವ ಅಲ್ಪ ಸ್ವಲ್ಪ ನೀರು ಕೃಷಿ, ಹೈನುಗಾರಿಕೆಗೆ ಸಹಾಯಕವಾಗಿದೆ. ಇಂತಹ‌ ಹೆಸರಘಟ್ಟ ಕೆರೆ ಪಾತ್ರದ ಪರಿಸರವನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಸರ್ಕಾರ ತಂತಿ ಬೇಲಿ ಹಾಕಿ ಲಕ್ಷಾಂತರ ವೆಚ್ಚದಲ್ಲಿ ಕೆರೆ ಪರಿಸರ ಸಂರಕ್ಷಣೆಗೆ ಮುಂದಾಗಿದೆ. ಆದರೆ ಈಗ ಕೆರೆ ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಹಾಳಾದ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್​ನಿಂದ ನೀರು ಪೋಲು; ಬೆಳೆ ಬೆಳೆಯಲಾಗದೆ ಅನ್ನದಾತನ ಸಂಕಷ್ಟ

ಒಂದು ದಿನದ ಪ್ರವಾಸಕ್ಕೆ ಬಂದು ಹೋಗುವ ಬೆಂಗಳೂರಿಗರ ಪ್ರವಾಸಿ ತಾಣವಾಗಿದೆ. ಆದರೆ ಸೂಕ್ತ ನಿರ್ವಹಣೆ ಮತ್ತು ಜನತೆಗೆ ಪರಿಸರ ಕಾಳಜಿ‌ ಇಲ್ಲದೆ ಸೊರಗುತ್ತಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಕೆರೆ ಅಂಗಳದಲ್ಲಿ ಸ್ವಚ್ಛತೆಯೇ ಕಣ್ಮರೆಯಾಗಿದೆ. ಪ್ರತಿದಿನ‌ ಸಾವಿರಾರು ಜನ ಪ್ರೇಮಿಗಳು ಬಂದೋಗುವ ಇಲ್ಲಿ ಪರಿಸರದ ರಕ್ಷಣೆ ಆಗಬೇಕಿದೆ. ಎಲ್ಲೆಂದರಲ್ಲಿ ಕುಡಿದು ಬಿಸಾಕಿರುವ ಪ್ಲಾಸ್ಟಿಕ್ ಬಾಟಲ್ ಮತ್ತು ಮದ್ಯದ ಬಾಟಲಿಗಳು ಕಾಣಿಸುತ್ತವೆ. ಕೆರೆಗೆ ತಂತಿ ಬೇಲಿ‌ ಹಾಕಿದ್ದರೂ ಕೆರೆ ಕಟ್ಟೆ ಸುತ್ತಾಮುತ್ತಾ ಬಿಸಾಕಿರುವ ಪ್ಲಾಸ್ಟಿಕ್ ಮತ್ತಿತರ ವಸ್ತು ಜಾಸ್ತಿ ಆಗ್ತಿವೆ. ಏಳೋರಿಲ್ಲ ಕೇಳೋರಿಲ್ಲದಂತಾಗಿ ಪ್ರೇಮಿಗಳಿಗೆ ಆಡಿದ್ದೇ ಆಟದಂತಾಗಿದೆ. ಈ ಹಿನ್ನಲೆ ರೈತ ಸಂಘ ಮತ್ತು ಹಸಿರು ಸೇನೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ರೈತ ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹೆಸರಘಟ್ಟ ಕೆರೆ ವ್ಯಾಪ್ತಿಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ.

ಹೆಸರಘಟ್ಟ ಕೆರೆ ವ್ಯಾಪ್ತಿಲಿ ಪರಿಸರ‌ ಸಂರಕ್ಷಣೆಗಾಗಿ ಅಧಿಕಾರಿಗಳಿಗೆ ಮನವಿ ಪತ್ರ ಬರೆಯಲಾಗಿದೆ. ಕೆರೆ ಉಳಿದರೆ ನಾಡು ಉಳಿಯುತ್ತದೆ, ಬೆಳೆಯುತ್ತದೆ. ಕೆರೆಯಿಂದ‌ ನಾವು- ನೀವು. ಕೆರೆಯಿಂದ ‌ಜೀವಜಲ- ಕೆರೆಯಿಂದ ಮಾನವಕುಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ