ಆನೇಕಲ್​ನಲ್ಲಿ ಇರಾನಿ ಗ್ಯಾಂಗ್ ಹಾವಳಿ; ಹಗಲು-ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗೆಲ್ಲ ಸರಗಳ್ಳತನ

| Updated By: ಆಯೇಷಾ ಬಾನು

Updated on: Jan 23, 2024 | 3:10 PM

ಅತ್ತಿಬೆಲೆ, ಸೂರ್ಯನಗರ, ಜಿಗಣಿ, ಆನೇಕಲ್ ನಲ್ಲಿ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಪಲ್ಸರ್ ಎನ್ ಎಸ್ ಬೈಕ್​ನಲ್ಲಿ ಬರುವ ಖದೀಮರು ಮಹಿಳೆಯರ ಬಳಿ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದಾರೆ. ಸರಣಿ ಚೈನ್ ಸ್ನ್ಯಾಚಿಂಗ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ.

ಆನೇಕಲ್​ನಲ್ಲಿ ಇರಾನಿ ಗ್ಯಾಂಗ್ ಹಾವಳಿ; ಹಗಲು-ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗೆಲ್ಲ ಸರಗಳ್ಳತನ
ಸರಗಳ್ಳತನ ಮಾಡುವ ಖದೀಮರು
Follow us on

ಆನೇಕಲ್, ಜ.23: ಆನೇಕಲ್​ನಲ್ಲಿ (Anekal) ಇರಾನಿ ಗ್ಯಾಂಗ್ ಹಾವಳಿ ಶುರುವಾಗಿದೆ. ಕಳೆದೊಂದು ತಿಂಗಳಿನಿಂದ ಸರಗಳ್ಳರ (Chain Snatching) ಹಾವಳಿ ಮಿತಿಮೀರಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಸಿಕ್ಕ ಸಿಕ್ಕಲ್ಲಿ ಸರಗಳ್ಳತನ ನಡೆಯುತ್ತಿದೆ. ಅತ್ತಿಬೆಲೆ, ಸೂರ್ಯನಗರ, ಜಿಗಣಿ, ಆನೇಕಲ್ ನಲ್ಲಿ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಸರಣಿ ಚೈನ್ ಸ್ನ್ಯಾಚಿಂಗ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ.

ಪಲ್ಸರ್ ಎನ್ ಎಸ್ ಬೈಕ್​ನಲ್ಲಿ ಬರುವ ಖದೀಮರು ಮಹಿಳೆಯರ ಬಳಿ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದಾರೆ. ಜನನಿಬಿಡ ಪ್ರದೇಶ ಎಂದೂ ಲೆಕ್ಕಿಸದೆ ರಾಜಾರೋಷವಾಗಿ ಕತ್ತಿಗೆ ಕೈ ಹಾಕಿ ಸರ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಜನರು ಬೆಚ್ಚಿಬಿದ್ದಿದ್ದು ಕಳ್ಳರನ್ನು ಹಿಡಿಯುವಂತೆ ಪಟ್ಟು ಹಿಡಿದಿದ್ದಾರೆ. ಇತ್ತ ಪೊಲೀಸರಿಗೂ ಪಲ್ಸರ್ ಬಾಯ್ಸ್ ತಲೆ ನೋವಾಗಿದ್ದಾರೆ. ಬ್ಲಾಕ್ ಆ್ಯಂಡ್ ರೆಡ್ ಪಲ್ಸರ್ ಬೈಕ್ ನಲ್ಲಿ ಬಂದು ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದಾರೆ. ಓರ್ವ ಹೆಲ್ಮೆಟ್ ಹಾಕಿದ್ರೆ ಮತ್ತೋರ್ವ ಮಂಕಿ ಕ್ಯಾಪ್ ಧರಿಸಿ ಕೃತ್ಯ ಎಸಗುತ್ತಿದ್ದಾರೆ. ಆರೋಪಿಗಳ ವಿರುದ್ಧ ನಾಲ್ಕು ಠಾಣೆಗಳಲ್ಲಿ ದೂರು ದಾಖಲಾಗಿದೆ. ಜಿಗಣಿ, ಸೂರ್ಯನಗರ ಮತ್ತು ಅತ್ತಿಬೆಲೆ ಹಾಗೂ ತಮಿಳುನಾಡಿನ ಹೊಸೂರಿನಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾಳನ್ನು ಕೊಂದು ಬಿಟ್ನಾ ಯುವಕ? ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಶಿಕ್ಷಕಿ ಸಾವು

ಶಿಕ್ಷಕಿ ಸಾವು, ಅಕ್ಕ ಅಕ್ಕ ಅಂತಾನೇ ಮುಹೂರ್ತ ಇಟ್ಟನಾ ಹಂತಕ?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ನಿವಾಸಿ ದೀಪಿಕಾ, ಮೇಲುಕೋಟೆಯ ಎಸ್​ಇಟಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತಿದ್ರು. ಜ.20ರಂದು ಶಾಲೆಗೆ ಹೋಗಿದ್ದ ದೀಪಿಕಾ ನಾಪತ್ತೆ ಆಗಿದ್ರು. ಆದ್ರೀಗ, 3 ದಿನದ ಬಳಿಕ ಮಂಡ್ಯ ಜಿಲ್ಲೆ ಮೇಲುಕೋಟೆ ಬೆಟ್ಟದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಟೀಚರಮ್ಮನ ಹತ್ಯೆ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಶಿಕ್ಷಕಿ ದೀಪಿಕಾ ಜೊತೆ
ಮಾಣಿಕ್ಯಹಳ್ಳಿ ಗ್ರಾಮದ ಯುವಕ ಸಲುಗೆಯಿಂದ ಇದ್ನಂತೆ. ಜನವರಿ 20ನೇ ತಾರೀಖು ಮೇಲುಕೋಟೆ ಬೆಟ್ಟದ ಬಳಿ
ಬೈಕ್​ನಲ್ಲಿ ಇಬ್ಬರು ಬಂದಿದ್ರಂತೆ. ದೀಪಿಕಾ ಕೊಲೆಗೂ ಮುನ್ನ ಯುವಕನ ಜೊತೆಗೆ ಜಗಳವಾಡುತ್ತಿದ್ದ 13 ಸೆಕೆಂಡ್​​ನ ವಿಡಿಯೋ ಪ್ರವಾಸಿಗರ ಮೊಬೈಲ್​ನಲ್ಲಿ ಸೆರೆಯಾಗಿದೆ. ಬೆಟ್ಟದ ತಪ್ಪಲಲ್ಲೇ ದೀಪಿಕಾ ಡಿಯೋ ಸ್ಕೂಟರ್ ಪತ್ತೆ ಆಗಿದೆ. ಹೂತಿದ್ದ ಸ್ಥಿತಿಯಲ್ಲಿ ಶಿಕ್ಷಕಿ ದೀಪಿಕಾ ಮೃತದೇಹ ಸಿಕ್ಕಿದ್ದು ಮೃತದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ದೀಪಿಕಾ ಶವ ಸಿಗ್ತಿದ್ದಂತೆಯೇ ಯುವಕ ನಾಪತ್ತೆ ಆಗಿದ್ದಾನೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ