ಬೆಂಗಳೂರು, ಏ.28: ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಯುವತಿ ಜೀವಂತ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ(Accident)ದಲ್ಲಿ ಗಂಭೀರ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಇಂದು(ಏ.28) ಚಿಕಿತ್ಸೆ ಫಲಕಾರಿಯಾದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಇದೇ ಏ.22 ರಂದು ಬೆಂಗಳೂರು ಉತ್ತರ ತಾಲೂಕಿನ ಮಾದವಾರ ರಾಷ್ಟ್ರೀಯ ಹೆದ್ದಾರಿ4ರಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ 16 ವರ್ಷದ ಯುವತಿ ದಿವ್ಯಾ ಎಂಬುವವರು ಸಜೀವ ದಹನವಾಗಿದ್ದರು. ಉಳಿದವರಿಗೆ ಸುಟ್ಟ ಗಾಯಗಳಾಗಿ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ನೆಡೆಯುತ್ತಿತ್ತು.6 ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಗುಜರಾತ್ ಮೂಲದ ಒಂದೇ ಕುಟುಂಬದ ಸುನೀತ್(42), ನಮನ್(20), ಮಯಾಂಕ್(19) ಸಾವನ್ನಪ್ಪಿದ್ದಾರೆ. ಮೃತ ದೇಹಗಳ ಮುಂದೆ ಸಂಬಂಧಿಕರ ಗೋಳಾಟ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಜೆಸಿ ಮಾಧುಸ್ವಾಮಿ ಪಯಣಿಸುತ್ತಿದ್ದ ಕಾರು ಕಡೂರು ಬಳಿ ಅಪಘಾತ, ಗಾಯಗಳಿಲ್ಲದೆ ಮಾಜಿ ಸಚಿವ ಪಾರು
ಇನ್ನು ಡಿಕ್ಕಿಯಾದ ಮತ್ತೊಂದು ಕಾರಿನಲ್ಲಿದ್ದ ಚಾಲಕ ರಕ್ಷಿತ್, ಚೇತನ್, ಮುಬಾರಕ್, ಸಲ್ಮಾ ಸೇರಿದಂತೆ ನಾಲ್ವರಿಗೂ ಗಂಭೀರ ಗಾಯಗಳೊಂದಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತದೆ. ಅಪಘಾತಕ್ಕೆ ಕಾರಣವಾದ ಬಲೇನೊ ಕಾರು ಚಾಲಕ ಇನ್ಶೂರೆನ್ಸ್ ಹಣ ಕಟ್ಟದೆ ಗೂಗಲ್ನಲ್ಲಿ ಸರ್ಚ್ ಪಡೆದು ಪೇಕ್ ನಂಬರ್ ಹಾಕಿದ್ದ ಎನ್ನಲಾಗಿದೆ. ಜೊತೆಗೆ ಇದರ ಅಸಲಿ ಕಾರಿನ ಕಾರ್ ನಂಬರ್ ಬೆಳಗಾವಿಯ ಪಲ್ಲವಿ ಎಂಬುವವರಿಗೆ ಸೇರಿದ್ದು, ಹೀಗಾಗಿ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಚುರಕುಗೊಂಡಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Sun, 28 April 24