ಬೆಂಗಳೂರು ಗ್ರಾಮಾಂತರ: ಅತ್ತಿಗೆ ಕಿರುಕುಳಕ್ಕೆ ಬೇಸತ್ತ ಮೈದುನ ನೇಣುಬಿಗಿದುಕೊಂಡು ಆತ್ಮಹತ್ಯೆ
ನೆಲಮಂಗಲದ ಅರಿಶಿನಕುಂಟೆಯಲ್ಲಿ(Arasinakunte) ಅತ್ತಿಗೆಯ ಕಿರುಕುಳಕ್ಕೆ ಬೇಸತ್ತು ಮನೆಯ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಮೈದುನ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾವಿಗೆ ಕಾರಣರಾದ ಭಾಗ್ಯಮ್ಮ ಹಾಗೂ ದಿಲೀಪ್ ಎಂಬುವವರ ಮೇಲೆ ದೂರು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ, ಏ.18: ಅತ್ತಿಗೆಯ ಕಿರುಕುಳಕ್ಕೆ ಬೇಸತ್ತು ಮನೆಯ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಮೈದುನ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದ ಅರಿಶಿನಕುಂಟೆಯಲ್ಲಿ(Arasinakunte) ನಡೆದಿದೆ. ನಾಗರಾಜು(35) ಮೃತ ರ್ದುದೈವಿ. ಇನ್ನು ಘಟನೆ ಕುರಿತು ಸೊಸೆ ಭಾಗ್ಯಮ್ಮ ವಿರುದ್ಧ ಮೃತನ ತಂದೆ-ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡಿದ್ದಾರೆ.
ಇನ್ನು 2 ವರ್ಷದ ಹಿಂದೆ ಅರಿಶಿನಕುಂಟೆಯಲ್ಲಿ ಮನೆ ಕಟ್ಟಿಸುವಾಗ ಮೇಸ್ತ್ರಿಯಾಗಿ ಬಂದಿದ್ದ ದಿಲೀಪ್ ಜೊತೆ ಸಲುಗೆಯಿಂದ ಇದ್ದ ಅತ್ತಿಗೆಯನ್ನ ಮೃತ ನಾಗರಾಜ್ ಪ್ರಶ್ನೆ ಮಾಡಿದ್ದ. ಈ ವಿಷಯವಾಗಿ ಮನೆ ಬಿಟ್ಟು ಹೋಗುವಂತೆ ದಂಡ ಪಿಂಡ ಎಂದು ಭಾಗ್ಯಮ್ಮ ಹೀಯಾಳಿಸಿದ್ದಳು. ಇದರಿಂದ ಮನನೊಂದ ನಾಗರಾಜು, ವೇಲ್ ಬಳಸಿ ರೂಂನ ಪ್ಯಾನ್ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣರಾದ ಭಾಗ್ಯಮ್ಮ ಹಾಗೂ ದಿಲೀಪ್ ಮೇಲೆ ದೂರು ದಾಖಲು ಮಾಡಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಮಕ್ಕಳಾಗಿಲ್ಲ ಎಂದು ಕಿರುಕುಳ; ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು
ಕರಡಿ ದಾಳಿಗೊಳಗಾಗಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಸಾವು
ಕೊಪ್ಪಳ: ಕೊಪ್ಪಳದಲ್ಲಿ ಕರಡಿ ದಾಳಿಗೊಳಗಾಗಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚೆನ್ನಪ್ಪ ಮಡಿವಾಳರ್(74) ಕೊನೆಯುಸಿರೆಳೆದಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರದಲ್ಲಿ ಕರಡಿ ದಾಳಿ ಮಾಡಿತ್ತು. ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ್ದ ಕರಡಿ ಸೆರೆಹಿಡಿದಿದ್ದರು. ಈ ಹಿಂದೆ ತಪ್ಪಿಸಿಕೊಂಡು ಬಂದಿದ್ದ ಕರಡಿ ವೃದ್ಧ ಚೆನ್ನಪ್ಪ ಮೇಲೆ ದಾಳಿ ಮಾಡಿತ್ತು. ಗಾಯಾಳು ಚೆನ್ನಪ್ಪ ಮಡಿವಾಳರ್ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.ಇಂದು ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Thu, 18 April 24