ಸೆಪ್ಟೆಂಬರ್ 2020 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಯಿತು. ಜನವರಿ 27 ರಂದು ನಿವೃತ್ತರಾದ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಅವರು (Lokayukta Justice P Vishwanath Shetty) ತನಿಖೆ ನಡೆಸಿದ್ದರು. ಜನವರಿ 24 ರಂದು ಸರ್ಕಾರಕ್ಕೆ 60 ಪುಟಗಳ ವರದಿಯನ್ನು ಸಲ್ಲಿಸಲಾಯಿತು. ಮುಖ್ಯಮಂತ್ರಿಗಳ ನವ ನಗರೋತ್ಥಾನ ಕಾರ್ಯಕ್ರಮದಡಿ (Nava Nagarothana programme) ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರಕ್ಕೆ (RR Nagar assembly constituency) ಬಿಡುಗಡೆಯಾದ ಹಣವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್ -KRIDL) ನಕಲಿ ಬಿಲ್ ಸಲ್ಲಿಸಿ, ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಪತ್ತೆ ಹಚ್ಚಿತ್ತು ಎಂದು deccanherald ವೆಬ್ ಸೈಟ್ ವರದಿ ಮಾಡಿದೆ.
2020 ರ ಜನವರಿಯಲ್ಲಿ 126 ಯೋಜನೆಗಳಿಗೆ ಮೀಸಲಿಟ್ಟ 250 ಕೋಟಿ ರೂ.ಗಳನ್ನು ಯಾವುದೇ ಕಾಮಗಾರಿಗಳು ನಡೆಸದೆ ಗುಳುಂ ಮಾಡಲಾಗಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದರು. ಬಿಬಿಎಂಪಿ ಹಾಗೂ ಕೆಆರ್‌ಐಡಿಎಲ್ ಎಂಜಿನಿಯರ್‌ಗಳನ್ನು ಬಂಧಿಸುವಂತೆಯೂ ದೂರುದಾರರು (Bangalore Rural MP D K Suresh) ಒತ್ತಾಯಿಸಿದ್ದಾರೆ.
ಲೋಕಾಯುಕ್ತ ವರದಿಯಲ್ಲಿ 114 ಕಾಮಗಾರಿಗಳಲ್ಲಿ ಲೋಪದೋಷಗಳಿವೆ ಎಂದು ಉಲ್ಲೇಖಿಸಲಾಗಿದೆ. ಎರಡು ಕಾಮಗಾರಿಗಳು ಮಾತ್ರ ಸಮರ್ಪಕವಾಗಿ ಅನುಷ್ಠಾನಗೊಂಡಿರುವುದು ಕಂಡುಬಂದಿದೆ. “ಕೆಲವು ಕಾಮಗಾರಿಗಳು ಕಾರ್ಯಗತವಾಗಿಲ್ಲ, ಕೆಲವು ಕಾಮಗಾರಿಗಳು ಕಳಪೆಯಾಗಿವೆ, ಟೆಂಡರ್ ಷರತ್ತುಗಳನ್ನು ಅನುಸರಿಸದೆ ಕೆಲವು ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಲೋಕಾಯುಕ್ತ ವರದಿ ಹೇಳುತ್ತದೆ.
ಎರಡು ತಿಂಗಳಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ವರದಿಯಲ್ಲಿ ಶಿಫಾರಸು:
ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಎಬಿ ದೊಡ್ಡಯ್ಯ -ಬಿಬಿಎಂಪಿಯ ತಾಂತ್ರಿಕ ವಿಜಿಲೆನ್ಸ್ ಸೆಲ್‌ನಲ್ಲಿ (TVCC) ಮುಖ್ಯ ಎಂಜಿನಿಯರ್; ಸತೀಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಟಿವಿಸಿಸಿ; ಬಸವರಾಜ್, ಕಾರ್ಯಪಾಲಕ ಎಂಜಿನಿಯರ್, ಆರ್.ಆರ್. ನಗರ; ಸಿದ್ದರಾಮಯ್ಯ, ಸಹಾಯಕ ಎಂಜಿನಿಯರ್ (ವಾರ್ಡ್ 129 ಮತ್ತು 160); ಉಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ವಾರ್ಡ್ 73); ಚಂದ್ರನಾಥ್ -ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, KRIDL; ಟಿವಿಸಿಸಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವೆಂಕಟಲಕ್ಷ್ಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀತೇಜ್. ಹಗರಣದಲ್ಲಿ ಭಾಗಿಯಾಗಿರುವ ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಲೋಕಾಯುಕ್ತ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.