ಅದು ದೊಡ್ಡಬಳ್ಳಾಪುರದಲ್ಲಿರುವ (doddaballapur) ಘಾಟಿ ಸುಬ್ರಮಣ್ಯದ ಕಲ್ಯಾಣ ಮಂಟಪ. ಸಂಜೆ ಎಲ್ಲರೂ ಆರತಕ್ಷತೆಯ ಬ್ಯುಸಿಯಲ್ಲಿ ಖುಷಿ ಖಷಿಯಾಗಿದ್ದು ಎಲ್ಲವೂ ಅಂದು ಕೊಂಡಂತೆ ಸಂಭ್ರಮದಲ್ಲಿದ್ರು. ಆದ್ರೆ ಅಷ್ಟರಲ್ಲೆ ಅಲ್ಲಿಗೆ ಎಂಟ್ರಿಕೊಟ್ಟ (gate crash) ಅದೊಬ್ಬನಿಂದ ಸಂಭ್ರಮದಿಂದಿದ್ದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದ್ದು ಕ್ಷಣ ಮಾತ್ರದಲ್ಲಿ ನೆತ್ತರು ಹರಿದು ಹಸಮಣೆ ಮೇಲೆಯೆ ಮದುವೆ (wedding) ಮರಿದು ಬಿದ್ದಿದೆ. ಕತ್ತಲು ಕವಿದ ರಸ್ತೆ ಬದಿಯಲ್ಲಿ ಎಂದಿನಂತೆ ವಾಹನಗಳ ಒಡಾಟ ಇತ್ತಾದರೂ ಅಷ್ಟರಲ್ಲೆ ಅಡಿಯಿಂದ ಮುಡಿವರೆಗೂ ನೆತ್ತರು ಹರಿದಿದ್ದು ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲ ಅಂತ ಯುವಕನೋರ್ವ ಒದ್ದಾಡ್ತಿದ್ರೆ ನೋಡುಗರು ಯಾರಪ್ಪ ಈ ರೀತಿ ಮಾಡಿದ್ದು ಅಂತ ಕೇಳ್ತಿದ್ದಾರೆ. ಇನ್ನು ಈ ಯುವಕ ಈ ರೀತಿಯಾಗಲು ಕಾರಣ ಏನಪ್ಪ ಅಂತ ಹುಡುಕುತ್ತಾ ಹೋದ್ರೆ ಸಿಕ್ಕಿದ್ದು ಅದೇ ಪ್ರೇಯಸಿಯ ಮದುವೆ ಕಹಾನಿ (Love failure).
ಅಂದಹಾಗೆ ರಕ್ತದ ಮಡುವಿನಲ್ಲಿ ವಿಲವಿಲ ಅಂತ ಒದ್ದಾಡ್ತಿರೂ ಯವಕನ ಹೆಸರು ನಿತೀಶ್. ಮೂಲತಃ ಬೆಂಗಳೂರಿನ ಗೋರಿಪಾಳ್ಯದವನಾದ ಇವನು ನಿನ್ನೆ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಬಂದಿದ್ದಾನೆ. ಕ್ಷೇತ್ರಕ್ಕೆ ಬಂದವನೆ ಸೀದಾ ದೇವಸ್ಥಾನದ ಪಕ್ಕದಲಿರುವ ಖಾಸಗಿ ಕಲ್ಯಾಣ ಮಂಟಪಕ್ಕೆ ನುಗ್ಗಿದ್ದ. ಅಲ್ಲಿದವರೆಲ್ಲಾ ಯಾರೋ ಯವಕ ಮದುವೆಗೆ ಬಂದಿದ್ದಾನೆ ಅಂತಲೆ ಅಂದುಕೊಂಡಿದ್ದರು.
ಆದ್ರೆ ಅಷ್ಟರಲ್ಲೆ ನೋಡ ನೋಡ್ತಿದ್ದಂತೆ ಯುವತಿಯ ವಿರುದ್ದ ಕೂಗಾಡಿದ ಪಾಗಲ್ ಪ್ರೇಮಿ ತನ್ನನ್ನ ಪ್ರೀತಿಸಿ ಬೇರೊಬ್ಬನನ್ನ ಮದುವೆಯಾಗ್ತಿದ್ದಿಯಾ ಅಂತ ಗಲಾಟೆ ಮಾಡಿದ್ದಾನೆ. ಈ ವೇಳೆ ಕಲ್ಯಾಣ ಮಂಟಪದಲ್ಲಿದ್ದ ಯುವತಿಯ ಸಂಬಂಧಿಕರು ಯುವಕನನ್ನ ಥಳಿಸಿದ್ದು ನಂತರ ಕಲ್ಯಾಣ ಮಂಟಪದಿಂದ ಹೊರಗಡೆ ಕರೆತಂದಿದ್ದಾರೆ. ಇನ್ನು ಈ ವೇಳೆ ಮತ್ತದೇ ವಿಚಾರಕ್ಕೆ ಯುವಕ ಮತ್ತು ಯುವತಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದ್ದು ವದುವಿನ ರೂಪದಲ್ಲಿದ್ದ ತನ್ನ ಪ್ರೇಯಸಿಗಾಗಿ ಯುವಕನೇ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ ಅಂತ ಯುವತಿಯ ಕುಟುಂಬಸ್ಥರು ಹೇಳಿದ್ದಾರೆ.
ಪಾಗಲ್ ಪ್ರೇಮಿ ನಿತೇಶ್ ಮತ್ತು ನವವಧು ಇಬ್ಬರೂ ಶಾಲೆಯಲ್ಲಿ ಓದುವಾಗ ಸ್ನೇಹಿತರಾಗಿದ್ದರು. ಹಳೆಯ ಫ್ರೆಂಡ್ಸ್ ವಾಟ್ಸ್ ಆಪ್ ಗ್ರೂಪ್ ಮಾಡಿದಾಗ ಇವರಿಬ್ಬರ ಮಧ್ಯೆ ಮತ್ತೆ ಸ್ನೇಹ ಬೆಳೆದು ಸುತ್ತಾಡಿದ್ರಂತೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಕುದುರಿತ್ತಂತೆ. ಆದ್ರೆ ಯುವಕನನ್ನ ಮದುವೆಯಾಗಲು ಯುವತಿ ನಿರಾಕರಿಸಿದ್ದಳು ಅಂತ ಹಲವು ಬಾರಿ ಮನೆ ಬಳಿ ಹೋಗಿ ಯುವಕ ಗಲಾಟೆ ಮಾಡಿದ್ದಾನೆ.
ಈ ಬಗ್ಗೆ ಯುವತಿಯ ಪೋಷಕರು ಗೋರಿಪಾಳ್ಯ ಠಾಣೆಗೆ ದೂರು ಸಹ ನೀಡಿದ್ರಂತೆ. ಆದ್ರೆ ಇಷ್ಟೆಲ್ಲ ಆದ್ರು ಬಿಡದ ಪಾಗಲ್ ಪ್ರೇಮಿ ಬುಧವಾರ ಯುವತಿಯ ಮದುವೆಯಾಗುವ ವೇಳೆ ಬಂದು ಮದುವೆ ಮನೆಯಲ್ಲಿಯೂ ಗಲಾಟೆ ಮಾಡಿದ್ದಾನೆ. ಯುವಕನ ಗಲಾಟೆಯಿಂದ ಬೆಚ್ಚಿ ಬಿದ್ದ ವರನ ಕಡೆಯವರು ಮದುವೆಯನ್ನ ರದ್ದುಗೊಳಿಸಿಕೊಂಡು ವಾಪಸ್ ಹೋಗಿದ್ದಾರೆ.
ಇನ್ನೂ ಮದುವೆ ಮನೆ ಬಳಿಗೆ ಬಂದಿದ್ದ ಪಾಗಲ್ ಪ್ರೇಮಿ ಮೇಲೆ ಯುವತಿಯ ಕಡೆಯವರು ಭೀಕರವಾಗಿ ಹಲ್ಲೆ ಮಾಡಿದ್ದಾರೆ ಅಂತ ಯುವಕ ನಿತೀಶ್ ಪೊಲೀಸರಿಗೆ ಮಾಹಿತಿ ನೀಡಿದ್ದು ಯುವಕನ ಸ್ಟೇಟ್ಮೇಂಟ್ ಆಧಾರದಲ್ಲಿ ದೊಡ್ಡಬಳ್ಳಾಫುರ ಪೊಲೀಸರು ಯುವತಿಯ ಸಂಬಂಧಿಕರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಒಟ್ಟಾರೆ ಪ್ರೀತಿಸಿದ ಯುವತಿ ನಿರಾಕರಿಸಿದರೂ ಎಲ್ಲೋ ಒಂದು ಕಡೆ ಚೆನ್ನಾಗಿರಲಿ ಅಂತ ಬಯಸದೆ ಆಕೆಯ ಮದುವೆ ನಿಲ್ಲಿಸಲು ಬಂದು ಪಾಗಲ್ ಪ್ರೇಮಿ ಆಸ್ವತ್ರೆ ಪಾಲಾದ್ರೆ ಇತ್ತ ಯುವತಿಯ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗಳ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಪೋಷಕರಿಗೆ ಗಾಯದ ಮೇಲೆ ಬರೆಎಳೆದಂತಾಗಿದೆ.
ವರದಿ: ನವೀನ್ ಟಿವಿ 9 ದೇವನಹಳ್ಳಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ