ಮನೆಯಲ್ಲಿದ್ದ ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ: ಚಿನ್ನಾಭರಣ, ನಗದು ಕಳ್ಳತನ ಮಾಡಿ ಹಂತಕರು ಎಸ್ಕೇಪ್

ಸಂಜೆ ಮನೆಯಲ್ಲಿದ್ದವರು ಹಾರ್ಡ್‌ವೇರ್‌ ಅಂಗಡಿಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿದ ಹಂತಕರು ಮನೆಯಲ್ಲಿದ್ದ ಸಿಸಿಟಿವಿಗಳನ್ನ ಕಿತ್ತಾಕಿ ಕೃತ್ಯ ಎಸಗಿ ಡಿವಿಆರ್ ಸಮೇತ ಎಸ್ಕೇಪ್‌ ಆಗಿದ್ದಾರೆ.

ಮನೆಯಲ್ಲಿದ್ದ ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ: ಚಿನ್ನಾಭರಣ, ನಗದು ಕಳ್ಳತನ ಮಾಡಿ ಹಂತಕರು ಎಸ್ಕೇಪ್
ಮನೆಯಲ್ಲಿದ್ದ ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ
Updated By: ಆಯೇಷಾ ಬಾನು

Updated on: Jul 15, 2022 | 9:46 PM

ದೇವನಹಳ್ಳಿ: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕೊಂದು(Murder) ಕಳ್ಳರು ಚಿನ್ನಾಭರಣ ಕಳವು(Theft) ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಐಶ್ವರ್ಯ ಬಡಾವಣೆಯ ಮನೆಯಲ್ಲಿ ನಡೆದಿದೆ. ಕುತ್ತಿಗೆ ಕೊಯ್ದು ಅಂಚನಾ ತುಳಸಿಯಾನ(57) ಎಂಬುವವರ ಬರ್ಬರ ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ 12 ಲಕ್ಷ ಮೌಲ್ಯದ ಚಿನ್ನಾಭರಣ, 4 ಲಕ್ಷ ರೂ. ನಗದು ಕದ್ದು ಹಂತಕರು ಎಸ್ಕೇಪ್ ಆಗಿದ್ದಾರೆ. ಮಹಿಳೆಯ ಕೊಲೆಯಿಂದಾಗಿ ಬಡಾವಣೆಯ ಜನ ಬೆಚ್ಚಿ ಬಿದ್ದಿದ್ದಾರೆ.

ಪರಿಚಿತರಿಂದಲೇ ದುಷ್ಕ್ರತ್ಯ ಶಂಕೆ

ಸಂಜೆ ಮನೆಯಲ್ಲಿದ್ದವರು ಹಾರ್ಡ್‌ವೇರ್‌ ಅಂಗಡಿಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿದ ಹಂತಕರು ಮನೆಯಲ್ಲಿದ್ದ ಸಿಸಿಟಿವಿಗಳನ್ನ ಕಿತ್ತಾಕಿ ಕೃತ್ಯ ಎಸಗಿ ಡಿವಿಆರ್ ಸಮೇತ ಎಸ್ಕೇಪ್‌ ಆಗಿದ್ದಾರೆ. ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯವರು ಅಂಗಡಿಗೆ‌ ಹೋಗಿದ್ದನ್ನ ಕಂಡು ಪರಿಚಿತರಿಂದಲೇ ದುಷ್ಕ್ರತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಎಲ್ಲಾ ಆಯಾಮಗಳಿಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಂಡ, ಶ್ವಾನದಳ ಪರಿಶೀಲನೆ ನಡೆಸಿದೆ. ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಂ‌ ಹೂಡಿದ್ದಾರೆ. ಹಂತಕರು ಮನೆಯಲ್ಲಿ ಯಾವುದೇ ವಸ್ತುಗಳನ್ನ ಮುಟ್ಟಿಲ್ಲ. ಕೇವಲ ಲಾಕರ್ಗಳನ್ನ ತೆರೆದು ಚಿನ್ನಾಭರಣ, ನಗದು ಖದ್ದು ಎಸ್ಕೇಪ್ ಆಗಿದ್ದಾರೆ. ಸಂಚು ರೂಪಿಸಿ ಫ್ರೀ ಪ್ಲಾನ್ ಮಾಡಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

Published On - 9:46 pm, Fri, 15 July 22