ಅವನ್ಯಾವನೋ ಪೊಲೀಸ್ ಇನ್ಸ್‌ಪೆಕ್ಟರ್ ಬಚ್ಚಾ, ಇಂತಹವನನ್ನು ಎಷ್ಟು ಜನ ನೋಡಿಲ್ಲ: ಪೋಲಿಸ್ ಇನ್ಸ್ ಪೆಕ್ಟರ್ ವಿರುದ್ಧ ಎಂ.ಕೃಷ್ಣಪ್ಪ ಆಕ್ರೋಶ
ಅವನ್ಯಾವನೋ ಪೊಲೀಸ್ ಇನ್ಸ್‌ಪೆಕ್ಟರ್ ಅಂತೆ, ಇಂತಹ ಬಚ್ಚಾ ಇನ್ಸ್ಪೆಕ್ಟರ್ನಾ ಎಷ್ಟು ಜನ ನೋಡಿಲ್ಲ. ನಾನಾ ಮೂರನೇ ಕಣ್ಣು ಬಿಟ್ಟರೆ ಪ್ರತಿದಿನ ಕೋರ್ಟು-ಕಚೇರಿ ಅಂತ ಮೆಟ್ಟಲು ಹತ್ತಬೇಕು ತೊಡೆತಟ್ಟಿದವನಿಗೆ ತೊಡೆಮುರಿಯೋವರಗೆ ನಿದ್ದೆ ಬರಲ್ಲ ನನಗೆ ಎಂದು ಶಾಸಕ ಎಂ.ಕೃಷ್ಣಪ್ಪ ಆನೆಕಲ್ನಲ್ಲಿ ಹೇಳಿದ್ದಾರೆ.
ಆನೆಕಲ್: ಅವನ್ಯಾವನೋ ಪೊಲೀಸ್ (Police) ಇನ್ಸ್‌ಪೆಕ್ಟರ್ ಅಂತೆ, ಇಂತಹ ಬಚ್ಚಾ ಇನ್ಸ್ಪೆಕ್ಟರ್ನಾ ಎಷ್ಟು ಜನ ನೋಡಿಲ್ಲ. ನಾನಾ ಮೂರನೇ ಕಣ್ಣು ಬಿಟ್ಟರೆ ಪ್ರತಿದಿನ ಕೋರ್ಟು-ಕಚೇರಿ ಅಂತ ಮೆಟ್ಟಲು ಹತ್ತಬೇಕು ತೊಡೆತಟ್ಟಿದವನಿಗೆ ತೊಡೆಮುರಿಯೋವರಗೆ ನಿದ್ದೆ ಬರಲ್ಲ ನನಗೆ ಎಂದು ಆನೇಕಲ್ (Anekal) ತಾಲೂಕಿನ ಶಿಕಾರಿಪಾಳ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ವಿರುದ್ಧ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ (M Krishna) ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ: ಬೋಳ ಗ್ರಾಮ ಪಂಚಾಯತ್ ರಸ್ತೆಗೆ ಅಳವಡಿಸಿದ್ದ ನಾತುರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವು
ನನ್ನ ರಾಜಕೀಯ ವಯಸ್ಸು ಅವನಿಗೆ ಅಗಿಲ್ಲ. ನಾನಿನ್ನೂ ಮೂರನೇ ಕಣ್ಣು ಬಿಟ್ಟಿಲ್ಲ, ಮೂರನೇ ಕಣ್ಣು ಬಿಟ್ರೆ ಅವನು ಬಳ್ಳಾರಿ, ರಾಯಚೂರು ಗುಲ್ಬರ್ಗ ಅಲಿಬೇಕು. ನನ್ನ ಹತ್ತಿರ ರೌಡಿಸಂ ನಡೆಯಲ್ಲ. ನಾನೆಲ್ಲ ಮಾಡ್ಬಿಟ್ಟೆ ಎಂಎಲ್ಎ ಆಗಿ ಬಂದಿರೋದು. ಕೋವಿಡ್ ಸಂದರ್ಭದಲ್ಲಿ ಊರುಗಳಿಗೆ ಹೋಗಲು ಬಸ್ ಇರಲಿಲ್ಲ. ಆ ಸಮಯದಲ್ಲಿ ಬಿಎಂಟಿಸಿ ಬಸ್ಸನ್ನು ಬಿಡಿಸಿ ತುಂಬಾ ಜನಕ್ಕೆ ಉಪಯೋಗ ಮಾಡಿಕೊಟ್ಟಿದ್ದೇನೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಟ್ಟು ಐದು ರೂಪಾಯಿ ಕೆಲಸ ಮಾಡಿಲ್ಲ. ಮನೆಯಲ್ಲಿ ಇರುವವರೆಲ್ಲ ಮಾತಾಡಕ್ಕೆ ಆದರೆ, ನಾನು ಬೀದಿಲಿ ಇರೋನು. ಬೆಳಗ್ಗೆಯೆದ್ದರೆ ನನಗೆ ಕಾಂಪೌಂಡ್ ತಕರಾರಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಸಾರ್ವಜನಿಕರ ಸಮ್ಮುಖದಲ್ಲೇ ಯುವಕನ ಬರ್ಬರ ಹತ್ಯೆ..!
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.