Video: ಸಾರ್ವಜನಿಕರ ಸಮ್ಮುಖದಲ್ಲೇ ಯುವಕನ ಬರ್ಬರ ಹತ್ಯೆ..!
Crime News: ಈ ಭೀಕರ ಹತ್ಯೆ ಮಾಡಿದ ದಾಳಿಕೋರರಲ್ಲಿ ಮೂವರನ್ನು ಗುರುತಿಸಲಾಗಿದೆ. ಕೊಲೆಗೆ ಹಳೇ ವೈಷ್ಯಮ್ಯವೇ ಕಾರಣ ಎಂದು ಬದ್ನಿ ಕಲಾನ್ ಪೊಲೀಸ್ ಅಧಿಕಾರಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರ ಹತ್ಯೆಯಿಂದ ಇಡೀ ಪಂಜಾಬ್ ಬೆಚ್ಚಿ ಬಿದ್ದಿತ್ತು. ಈ ಭೀಕರ ಹತ್ಯೆಯ ಕರಾಳತೆ ಮಾಸುವ ಮುನ್ನವೇ ಇದೀಗ ಮತ್ತೊಮ್ಮೆ ಸಾರ್ವಜನಿಕ ಸ್ಥಳದಲ್ಲೇ ಯುವಕನ ಕೊಲೆ ನಡೆದಿದೆ. ಅದು ಕೂಡ ಮಾರುಕಟ್ಟೆ ಪ್ರದೇಶದಲ್ಲಿ. ಅಂದರೆ ಜನನಿಬಿಡ ಪ್ರದೇಶದಲ್ಲೇ ಎಲ್ಲರ ಮುಂದೆ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಭೀಕರ ಘಟನೆ ನಡೆದಿರುವುದು ಪಂಜಾಬ್‌ನ ಮೋಗಾ ಜಿಲ್ಲೆಯ ಬದ್ನಿ ಕಲಾನ್ ಪ್ರದೇಶದ ಮಾರುಕಟ್ಟೆಯಲ್ಲಿ.
ಮಾರುಕಟ್ಟೆಗೆ ಎರಡು ಬೈಕ್‌ಗಳಲ್ಲಿ ಆಗಮಿಸಿದ ಈ ತಂಡ ದೇಶ್ರಾಜ್ ಅವರನ್ನು ಹಿಂಬಾಲಿಸಿದ್ದರು. ಅಲ್ಲದೆ ಕಾಲ್ನಡಿಗೆಯಲ್ಲಿ ಮಾರುಕಟ್ಟೆಯಲ್ಲಿ ತೆರಳುತ್ತಿದ್ದ ದೇಶ್ರಾಜ್ ತನ್ನ ಮೇಲೆ ಹಲ್ಲೆಯಾಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಆರು ಜನರ ಗುಂಪು ಏಕಾಏಕಿ ದಾಳಿ ನಡೆಸಿದ್ದರಿಂದ ತಪ್ಪಿಸಿಕೊಳ್ಳಲು ಅವಕಾಶವಿರಲಿಲ್ಲ. ಇತ್ತ ಸಾರ್ವಜನಿಕರ ನಡುವೆ ದಾಳಿಯಾಗುತ್ತಿದ್ದರೂ ಯಾರೂ ಕೂಡ ಆತನ ಸಹಾಯಕ್ಕೆ ಬರಲಿಲ್ಲ.
ಇದಾಗ್ಯೂ ದೇಶ್ರಾಜ್ ಕೂಡ ಆಯುಧದೊಂದಿಗೆ ಪ್ರತಿರೋಧ ತೋರಲು ಮುಂದಾಗಿದ್ದಾರೆ. ಆದರೆ ಕತ್ತಿ ಮತ್ತು ಇತರ ಹರಿತ ಆಯುಧಗಳಿಂದ ಗುಂಪು ದಾಳಿ ನಡೆಸಿದ ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಹೀಗೆ ಭೀಕರ ಹತ್ಯೆ ಮಾಡಿ 6 ಮಂದಿ ಗುಂಪು ಓಡಿಹೋಗುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
Another Day – Another Broad Daylight Brutal Murder in Moga, Punjab.
ये ही तुम्हारा ‘बदलाव’ था केजरीवाल?? pic.twitter.com/fcNDdUd8hW
— Srinivas BV (@srinivasiyc) June 4, 2022
ಕೆಲ ದಿನಗಳ ಹಿಂದೆಯಷ್ಟೇ ದೇಶ್ರಾಜ್ ಹಾಗೂ ಕೆಲವರ ನಡುವೆ ಜಗಳವಾಗಿತ್ತು. ಆ ತಂಡವೇ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ದೇಶ್ರಾಜ್ನನ್ನು ಕೊಂದಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಇನ್ನು ಕೊಲೆಗೆ ಹಳೇ ವೈಷ್ಯಮ್ಯವೇ ಕಾರಣ ಎಂದು ಬದ್ನಿ ಕಲಾನ್ ಪೊಲೀಸ್ ಅಧಿಕಾರಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಅಲ್ಲದೆ ಈ ಭೀಕರ ಹತ್ಯೆ ಮಾಡಿದ ದಾಳಿಕೋರರಲ್ಲಿ ಮೂವರನ್ನು ಗುರುತಿಸಲಾಗಿದೆ. ಉಳಿದ ಎಲ್ಲಾ ಆರೋಪಿಗಳನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.