Buntings: ರಾಜಕೀಯ ಪಕ್ಷದ ಬಂಟಿಂಗ್ಸ್​​​ಗೆ ಸಿಲುಕಿ ಅಮಾಯಕ ಕೋತಿಯ ದುರ್ಮರಣ

Doddaballapur: ರಾಜಕೀಯ ಪಕ್ಷದ ಬಂಟಿಂಗ್ ನಲ್ಲಿ ಆಟವಾಡುವ ವೇಳೆ ಅದು ಕೋತಿಯ ಕುತ್ತಿಗೆಗೆ ಸುತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಅದು ಬಿಗಿಯಾಗಿ ಕುತ್ತಿಗೆಗೆ ಸುತ್ತಿಕೊಂಡ ಕಾರಣ ಕೋತಿ ಸಾವು ಕಂಡಿದೆ.

Buntings: ರಾಜಕೀಯ ಪಕ್ಷದ ಬಂಟಿಂಗ್ಸ್​​​ಗೆ ಸಿಲುಕಿ ಅಮಾಯಕ ಕೋತಿಯ ದುರ್ಮರಣ
ರಾಜಕೀಯ ಪಕ್ಷದ ಬಂಟಿಂಗ್ಸ್ ಗೆ ಸಿಲುಕಿ ಪ್ರಾಣ ಬಿಟ್ಟ ಕೋತಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 03, 2023 | 10:56 AM

ದೊಡ್ಡಬಳ್ಳಾಪುರ: ಮುಂಬರುವ ಅಸೆಂಬ್ಲಿ ಚುನಾವಣೆಯ ಕಾವು ಜೋರಾಗಿಯೇ ಇದೆ. ಆದರೆ ಚುನಾವಣೆ ನಿಮಿತ್ತ ಪಕ್ಷಗಳ ಆರ್ಭಟದ ಮಧ್ಯೆ ಅಮಾಯಕ ಪ್ರಾಣಿಯೊಂದು ಅಸುನೀಗಿದೆ. ರಾಜಕೀಯ ಪಕ್ಷವೊಂದು ಪ್ರಚಾರ ನಿಮಿತ್ತ ಮರದಲ್ಲಿ ನೇತು ಹಾಕಿದ್ದ ಬಂಟಿಂಗ್ಸ್ (Buntings)ಗೆ ಸಿಲುಕಿ ಕೋತಿಯೊಂದು ಪ್ರಾಣ ಬಿಟ್ಟಿದೆ. ಮರಕ್ಕೆ ಕಟ್ಟಿದ್ದ ಬಂಟಿಂಗ್ಸ್​​ನಿಂದ ಕೋತಿ (Monkey) ನೇಣು ಬಿಗಿದ‌ ಸ್ಥಿತಿಯಲ್ಲಿ (Hanging) ಮೃತಪಟ್ಟಿದೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ‌ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಆರೂಡಿ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ.

ರಾಜಕೀಯ ಪಕ್ಷದ ಬಂಟಿಂಗ್ ನಲ್ಲಿ ಆಟವಾಡುವ ವೇಳೆ ಅದು ಕೋತಿಯ ಕುತ್ತಿಗೆಗೆ ಸುತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಅದು ಬಿಗಿಯಾಗಿ ಕುತ್ತಿಗೆಗೆ ಸುತ್ತಿಕೊಂಡ ಕಾರಣ ಕೋತಿ ಸಾವು ಕಂಡಿದೆ. ಅಂದಹಾಗೆ ಬಿಜೆಪಿ ಕಾರ್ಯಕ್ರಮಕ್ಕಾಗಿ ಕಟ್ಟಿದ್ದ ಬಂಟಿಂಗ್ಸ್ ಅದಾಗಿತ್ತು. ಮರದ ತುದಿಯಲ್ಲಿ ಬಂಟಿಂಗ್ಸ್ ಗೆ ಸಿಲುಕಿ, ಕೋತಿ ಸಾವನ್ನಪಿದೆ.

ಇದನ್ನೂ ಓದಿ: ಬೆಂಗಳೂರು ಉಪನಗರ ರೈಲು ಯೋಜನೆಗೆ ನಮೋ ಶಂಕುಸ್ಥಾಪನೆ, ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಬಂಟಿಂಗ್ಸ್ ಗೆ ಮೂಖ‌ ಪ್ರಾಣಿ ಬಲಿಯಾಗಿರುವುದಕ್ಕೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಪಕ್ಷ ಪ್ರಚಾರದ ವೇಳೆ ತೋರಿರುವ ಬೇಜವಾಬ್ದಾರಿತನದಿಂದ ಆಂಜನೇಯ ರೂಪಿ ಕೋತಿ ಮೃತಪಟ್ಟಿರುವುದು ದುರ್ದೈವವೇ ಸರಿ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Fri, 3 February 23