Nagara Panchami 2021: ನಾಳೆ ನಾಗರಪಂಚಮಿ; ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ
Ghati Subramanya Temple : ಕೊವಿಡ್ ಸೋಂಕು ಹರಡುವಿಕೆ ತಡೆಯುವ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ದೇವನಹಳ್ಳಿ: ನಾಳೆ ನಾಗರಪಂಚಮಿ (Nagara Panchami) ಹಬ್ಬವಿರುವ ಕಾರಣ ಕೊರೊನಾ ಮೂರನೆ ಅಲೆಯ ಆತಂಕದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ (Ghati Subrahmanya) ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಸರ್ಪದೋಷ ಸೇರಿದಂತೆ ನಾಗರಪಂಚಮಿಯಂದು ವಿವಿಧ ಪೂಜೆಗೆ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರತಿವರ್ಷ ಭಕ್ತರು ಆಗಮಿಸುತ್ತಿದ್ದರು. ಕೊವಿಡ್ ಸೋಂಕು ಹರಡುವಿಕೆ ತಡೆಯುವ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ನಾಳೆಯೂ ಸೇರಿ 2 ಶುಕ್ರವಾರ ಭಕ್ತರಿಗೆ ಪ್ರವೇಶ ನಿರ್ಬಂಧ ಮೈಸೂರು: ಪ್ರಖ್ಯಾತ ಚಾಮುಂಡಿ ಬೆಟ್ಟಕ್ಕೆ ನಾಳೆ ಶುಕ್ರವಾರ 13/08/2021 ಹಾಗೂ ಮುಂದಿನ ಶುಕ್ರವಾರ 20/08/2021ಗಳಂದು ಭಕ್ತರು, ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ. ಕೊರೊನಾ ಹಿನ್ನೆಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡೇಶ್ವರಿ ದೇಗುಲದ ಪೂಜೆಗಳು ಮತ್ತು ಧಾರ್ಮಿಕ ಆಚರಣೆಗಳು ಎಂದಿನಂತೆ ಮುಂದುವರಿಯಲಿವೆ.
ಇದನ್ನೂ ಓದಿ:
ಉಡುಪಿ ಜನರು ಹೃದಯ ವೈಶಾಲ್ಯವುಳ್ಳವರು; ಕಷ್ಟಕ್ಕೆ ಪರಿಹಾರ ಕೇಳುವರೇ ವಿನಃ ವೈಯಕ್ತಿಕವಾಗಿ ಏನೂ ಕೇಳಲ್ಲ: ಸಿಎಂ ಬೊಮ್ಮಾಯಿ
Assembly Session: ಸೆಪ್ಟೆಂಬರ್ನಲ್ಲಿ ವಿಧಾನಸಭಾ ಅಧಿವೇಶನ; ಸಿಎಂ ಬಸವರಾಜ ಬೊಮ್ಮಾಯಿ
(Nagara Panchami 2021 Ghati Subramanya Temple Restriction of entry of devotees)