ನೆಲಮಂಗಲದಲ್ಲಿ ಫಾರ್ಚೂನರ್ ಕಾರು ಅಪಘಾತ: ಕಾರಿನಲ್ಲಿ ಶಾಸಕರಿಲ್ಲ, ಆದರೆ ಪಾಸ್ ಪತ್ತೆ

| Updated By: ವಿವೇಕ ಬಿರಾದಾರ

Updated on: Nov 20, 2022 | 9:47 PM

ನೆಲಮಂಗಲ ತಾಲೂಕಿನ ಕೆಬಿಡಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೊಳಗಾದ ಕಾರ್​ನಲ್ಲಿ ಶಾಸಕ ಭೀಮಾನಾಯ್ಕ್‌ಗೆ ಸೇರಿದ ಪಾಸ್‌ ಪತ್ತೆಯಾಗಿದೆ.

ನೆಲಮಂಗಲದಲ್ಲಿ ಫಾರ್ಚೂನರ್ ಕಾರು ಅಪಘಾತ: ಕಾರಿನಲ್ಲಿ ಶಾಸಕರಿಲ್ಲ, ಆದರೆ ಪಾಸ್ ಪತ್ತೆ
ಶಾಸಕ ಭೀಮಾನಾಯ್ಕ್‌ ಆಪ್ತನ ಕಾರು ಅಪಘಾತ
Follow us on

ನೆಲಮಂಗಲ: ನೆಲಮಂಗಲ (Nelamangala) ತಾಲೂಕಿನ ಕೆಬಿಡಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ, ಷರಾಪುರಪಾಳ್ಯದ ನಿವಾಸಿ ಸಿದ್ದಪ್ಪ (55) ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಪಘಾತವಾದ ಕಾರಿನಲ್ಲಿ ಶಾಸಕರ ಪಾಸ್‌ ಪತ್ತೆ

ಅಪಘಾತಕ್ಕೊಳಗಾದ ಫಾರ್ಚೂನರ್ ಕಾರಿನಲ್ಲಿ (KA24 M4365) ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ್‌ಗೆ ಸೇರಿದ ಪಾಸ್‌ ಪತ್ತೆಯಾಗಿದೆ. ಕಾರಿನಲ್ಲಿ ಶಾಸಕ ಭೀಮಾನಾಯ್ಕ್‌ ಅವರ KA29 N1221 ಸಂಖ್ಯೆಯ ಪಾಸ್ ಪತ್ತೆಯಾಗಿದೆ.

ಅಪಘಾತವಾದ ಕಾರಿನಲ್ಲಿ ಶಾಸಕರ ಪಾಸ್‌ ಪತ್ತೆ: ಶಾಸಕ ಭೀಮಾನಾಯ್ಕ್‌ ಸ್ಪಷ್ಟನೆ

ಅಪಘಾತಕ್ಕೊಳಗಾದ ಫಾರ್ಚೂನರ್ ಕಾರು ಆಪ್ತ ನಾಗರಾಜ್‌ಗೆ ಸೇರಿದ್ದು. ನಾಗರಾಜ್‌ ನನ್ನ ಕಾರಿನ ಪಾಸ್ ಕೇಳಿ ಪಡೆದಿದ್ದನು. ಹೀಗಾಗಿ ಪಕ್ಷದ ಕೆಲಸ ಸೇರಿದಂತೆ ಕ್ಷೇತ್ರದ ಕೆಲಸಕ್ಕೆ ಬಳಸಲು ನಾನೇ ಎಂಎಲ್​ಎ ಪಾಸ್​​ ನೀಡಿದ್ದೇನೆ. ನಾನು ಕೊಪ್ಪಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ನೆಲಮಂಗಲದ ಅಪಘಾತದ ವಿಚಾರ ನನಗೆ ತಡವಾಗಿ ಮಾಹಿತಿ ದೊರೆತಿದೆ  ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ