ದೊಡ್ಡಬಳ್ಳಾಪುರದ ಸಹೃದಯ ನಾಯಕ, ಸ್ವಾತಂತ್ರ್ಯ ಚಳವಳಿಯ ಕೊಂಡಿ ಸಂಪತ್ತಯ್ಯಂಗಾರ್ ನಿಧನ

ದೊಡ್ಡಬಳ್ಳಾಪುರದ ಸಾಂಸ್ಕೃತಿಕ ಮತ್ತು ರಾಜಕೀಯ ಜಗತ್ತಿನ ಅವಿಭಾಜ್ಯ ಅಂಗವಾಗಿದ್ದ ಎಂ.ಎಸ್.ಸಂಪತ್ತಯ್ಯಂಗಾರ್ (95) ಸೋಮವಾರ ಮಧ್ಯಾಹ್ನ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ದೊಡ್ಡಬಳ್ಳಾಪುರದ ಸಹೃದಯ ನಾಯಕ, ಸ್ವಾತಂತ್ರ್ಯ ಚಳವಳಿಯ ಕೊಂಡಿ ಸಂಪತ್ತಯ್ಯಂಗಾರ್ ನಿಧನ
ಎಂ.ಎಸ್.ಸಂಪತ್ತಯ್ಯಂಗಾರ್Image Credit source: Pic By DM Ghanashyam
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Nov 21, 2022 | 4:50 PM

ದೊಡ್ಡಬಳ್ಳಾಪುರ: ಪ್ರತಿದಿನ ಸಂಜೆಯ ಹೊತ್ತು ದೊಡ್ಡಬಳ್ಳಾಪುರ ಆಯುರ್ವೇದ ಆಸ್ಪತ್ರೆ ಎದುರಿನ ದಾರಿಯ ಮನೆ ಮುಂದೆ ಹೆಂಡತಿಯೊಂದಿಗೆ ಕುಳಿತು ಹೋಗಿ-ಬರುವ ಮಕ್ಕಳಿಗೆ ಚಾಕೊಲೇಟ್ ಕೊಡುತ್ತಿದ್ದ ಮಕ್ಕಳ ಪ್ರೀತಿಯ ಚಾಕೊಲೇಟ್ ತಾತ, ಸ್ವಾತಂತ್ರ್ಯ ಚಳವಳಿಯನ್ನು ಕಣ್ಣಾರೆ ಕಂಡಿದ್ದ, ಲಾವಣಿಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ, ಹಲವು ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸಿದ್ದ ಹಿರಿಯರಾದ ಮೇಲುಕೋಟೆ ಸೀತಾರಾಮಯ್ಯಂಗಾರ್ ಸಂಪತ್ತಯ್ಯಂಗಾರ್ (95) ಸೋಮವಾರ ಮಧ್ಯಾಹ್ನ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ದೊಡ್ಡಬಳ್ಳಾಪುರ ಪುರಸಭೆಗೆ ಐದು ಬಾರಿ ಸದಸ್ಯರಾಗಿ, ಉಪಾಧ್ಯಕ್ಷರಾಗಿದ್ದರು. ‘ಪ್ರಜಾವಾಣಿ’ ಪತ್ರಿಕೆಗೆ ಸುಮಾರು 40 ವರ್ಷ ತಾಲ್ಲೂಕು ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ನಗರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿ ಹಲವರ ಏಳುಬೀಳುಗಳನ್ನು ಕಣ್ಣಾರೆ ಕಂಡಿದ್ದರು. ದೊಡ್ಡಬಳ್ಳಾಪುರದ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸಿದ್ದರು. ಸರ್ಕಾರದಿಂದ ಸಿಗಬೇಕಿದ್ದ ಸವಲತ್ತುಗಳನ್ನು ಕೊಡಿಸಲು ಶ್ರಮಿಸಿದ್ದರು.

2009ರಲ್ಲಿ ಅವರ ಕೃತಿ ‘ಸಾಂಪ್ರದಾಯಿಕ ಪಾಕಶಾಸ್ತ್ರ’ ಪ್ರಕಟವಾಗಿತ್ತು. ಶ್ರೀವೈಷ್ಣವ ಪರಂಪರೆಯ ಸಾಂಪ್ರದಾಯಿಕ ಅಡುಗೆಗಳನ್ನು ಸರಳವಾಗಿ ವಿವರಿಸಿದ್ದ ಈ ಕೃತಿ ಜನಪ್ರಿಯವಾಗಿತ್ತು. ‘ಸುಗುಣ ಕುಬೇರ ಮತ್ತು ಇತರ ಕಥೆಗಳು’ ಕೃತಿಗಳು ಸಂಪತ್ತಯ್ಯಂಗಾರ್ ಅವರ ಹೆಸರನ್ನು ಸಾಹಿತಿಗಳ ಸಾಲಿಸಲ್ಲಿ ಸೇರಿಸಿತು. ‘ನಾಳೆ ತಿಂಡಿ ಏನು?’ ಅಯ್ಯಂಗಾರ್ ಅವರ ಮತ್ತೊಂದು ಜನಪ್ರಿಯ ಕೃತಿ. ದೊಡ್ಡಬಳ್ಳಾಪುರದ ಹೋರಾಟಗಾರರು, ಸಾಧಕರ ಜೀವನಚಿತ್ರಗಳ ಸಂಕಲನ ‘ಮಣಿಮಾಲೆ’ ಪುಸ್ತಕದ ಸಂಪಾದಕರಾಗಿ ತಮ್ಮ ಅನುಭವ ಧಾರೆಯೆರೆದಿದ್ದರು. ‘ಸಾಂಪ್ರದಾಯಿಕ ಪಾಕಶಾಸ್ತ್ರ’ ಕೃತಿಯು ಇಂಗ್ಲಿಷ್​ಗೂ ಅನುವಾದವಾಗಿ ಎರಡು ಮುದ್ರಣಗಳನ್ನು ಕಂಡಿತ್ತು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ದೇಹವನ್ನು ಕೋಲಾರದ ದೇವರಾಜ ಅರಸ್ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ. ಸೋಮವಾರ ಸಂಜೆ ಡಿಕ್ರಾಸ್ ಸಮೀಪದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಮೀಪ ಇರುವ ಸ್ವಗೃಹದಿಂದ ದೇಹವನ್ನು ಕೊಂಡೊಯ್ಯಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ನೂರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

Sampath-Iyengar-1

ಸಂಪತ್ತಯ್ಯಂಗಾರ್ ಅವರ ಕೃತಿಗಳು

ತಂದೆಯೇ ಅಡುಗೆ ಗುರು

ತಮ್ಮ 10ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಸಂಪತ್ತಯ್ಯಂಗಾರ್ ಅವರು ತಮ್ಮ ತಂದೆ ಸೀತಾರಾಮಯ್ಯಂಗಾರ್ ಅವರಿಂದ ಶ್ರೀವೈಷ್ಣವ ಪದ್ಧತಿಯ ಸಾಂಪ್ರದಾಯಿಕ ಅಡುಗೆ ಕಲಿತರು. ದೊಡ್ಡಬಳ್ಳಾಪುರದಲ್ಲಿ ಪ್ರತಿತಿಂಗಳು ‘ಮಾಸಿಕ ಸಂಗೀತ’ ಕಾರ್ಯಕ್ರಮ ಆಯೋಜಿಸುತ್ತಿದ್ದ ಅವರು, ಹಲವು ಹಿರಿಯ ವಿದ್ವಾಂಸರು ಹಾಗೂ ಸಾಹಿತಿಗಳನ್ನು ಊರಿಗೆ ಕರೆಸಿದ್ದರು. ರಾಮೋತ್ಸವ, ಗಣೇಶೋತ್ಸವಗಳಲ್ಲಿಯೂ ಸಕ್ರಿಯ ಪಾತ್ರ ನಿರ್ವಹಿಸುತ್ತಿದ್ದರು. ನಗರದ ಎಲ್ಲ ಜಾತಿ, ವರ್ಗಗಳೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದರು.

‘ನೈತಿಕತೆ ಎನ್ನುವುದು ಬದುಕಿನ ಕುಲುಮೆಯಲ್ಲಿ ಬೆಂದು ಚೊಕ್ಕವಾಗಿದ್ದು, ಮಾನವೀಯವಾಗಿದ್ದು, ಜೀವಪರ ಕಾಳಜಿ ಹೊಂದಿರಬೇಕು. ಅಂಥ ಗುಣ ಇದ್ದವರು ಮಾತ್ರ ಆಪ್ತರಾಗುತ್ತಾರೆ’ ಎಂಬ ತಮ್ಮಿಷ್ಟದ ಆದರ್ಶದ ಬಗ್ಗೆ ಆಗಾಗ ಹೇಳುತ್ತಿದ್ದ ಅವರು, ಅದೇ ಗುಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕೊನೆಯವರೆಗೂ ಯತ್ನಿಸಿದರು. ಹತ್ತು ಜನರಿಗೆ ಉಪಕಾರಿಯಾಗಿ ಇರಬೇಕೆಂಬ ಎಚ್ಚರದಲ್ಲಿಯೇ ಕೊನೆಯ ಉಸಿರಿನವರೆಗೂ ಬದುಕಿದರು ಎಂದು ಅಂತಿಮ ದರ್ಶನಕ್ಕೆ ಬಂದಿದ್ದ ಹಲವರು ನೆನಪಿಸಿಕೊಂಡರು.

Published On - 4:50 pm, Mon, 21 November 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ