ಅನುಮಾನಾಸ್ಪದ ಸಾವು ಪ್ರಕರಣ ಭೇದಿಸಿದ ನೆಲಮಂಗಲ ಪೊಲೀಸರು: ನಾಲ್ವರ ಬಂಧನ

| Updated By: ವಿವೇಕ ಬಿರಾದಾರ

Updated on: Aug 11, 2023 | 9:00 AM

ಮದ್ಯದ ಅಮಲಿನಲ್ಲಿ ಕಾರಿನಿಂದ ಗುದ್ದಿ ಪಾದಾಚಾರಿಯ ಸಾವಿಗೆ ಕಾರಣವಾಗಿದ್ದ ನಾಲ್ವರು ಆರೋಪಿಗಳನ್ನು ನೆಲಮಂಗಲ ಟೌನ್​ ಪೊಲೀಸರು ಬಂಧಿಸಿದ್ದಾರೆ.

ಅನುಮಾನಾಸ್ಪದ ಸಾವು ಪ್ರಕರಣ ಭೇದಿಸಿದ ನೆಲಮಂಗಲ ಪೊಲೀಸರು: ನಾಲ್ವರ ಬಂಧನ
ನೆಲಮಂಗಲ ಪೊಲೀಸ್​ ಠಾಣೆ
Follow us on

ನೆಲಮಂಗಲ: ಆಗಸ್ಟ್ 5ರಂದು ಹೆದ್ದಾರಿ4ರ ಬ್ರಿಡ್ಜ್ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ನೆಲಮಂಗಲ (Nelamangala) ಟೌನ್ ಪೊಲೀಸರು ಅನುಮಾನಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಪೊಲೀಸರು (Police) ಪ್ರಕರಣವನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಲಗ್ಗೆರೆ ಮಂಜುನಾಥ್ (31), ಅರಿಶಿನಕುಂಟೆಯ ಅಬ್ದುಲ್ ಸಲಾಂ(34), ಸುನೀಲ್(26),ಶರಣ್ ಗೌಡ(27) ಬಂಧಿತ ಆರೋಪಿಗಳು. ಸಂತೋಷ್(32) ಮೃತ ದುರ್ದೈವಿ.

ನಾಲ್ವರು ಆರೋಪಿಗಳು ಆ.5 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಚಂದು ಡಾಬಾದಲ್ಲಿ ಕಂಠಪೂರ್ತಿ ಕುಡಿದಿದ್ದರು. ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿ ನೆಲಮಂಗಲ ಟೌನ್ ದಾನೋಜಿಪಾಳ್ಯ ಬಳಿ ಪಾದಚಾರಿ ಸಂತೋಷ್​ಗೆ ಕಾರಿನಿಂದ ಗುದ್ದಿ ಪರಾರಿಯಾಗಿದ್ದರು.

ಇದನ್ನೂ ಓದಿ: ನೆಲಮಂಗಲ: ಶೋಕಿ ಜೀವನಕ್ಕಾಗಿ ಬೈಕ್ ಕದಿಯುತ್ತಿದ್ದ ಕಳ್ಳ ಸ್ನೇಹಿತರು ಅರೆಸ್ಟ್

ಸಂತೋಷ್​ ಮೃತ ದೇಹ ಹೆದ್ದಾರಿ4ರ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು. ವಿಷಯ ತಿಳಿದ ನೆಲಮಂಗಲ ಟೌನ್​ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ತಿನಿಖೆ ನಡೆಸುವಾಗ ಪೊಲೀಸರಿಗೆ ಮೃತ ಸಂತೋಷ್ ರಸ್ತೆ ಪಕ್ಕದಲ್ಲಿ ನಡೆದು ಬರುತ್ತಿದ್ದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಇದರ ಅಧಾರದ ಮೇಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ತನಿಖೆ ಪೂರ್ಣಗೊಳಿಸಿ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದಾರೆ.

ಟ್ರಾಕ್ಟರ್ ಮತ್ತು ಬೊಲೆರೋ ಜೀಪ್ ನಡುವೆ ಅಪಘಾತ

ದೇವನಹಳ್ಳಿ: ಟ್ರಾಕ್ಟರ್ ಮತ್ತು ಬೊಲೆರೋ ಜೀಪ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಎನ್​ಹೆಚ್​ 75 ರ ಪ್ಲೈ ಒವರ್ ಮೇಲೆ ನಡೆದಿದೆ. ಅಪಘಾತದ ರಬಸಕ್ಕೆ ಹೆದ್ದಾರಿಯಲ್ಲಿ ಪಲ್ಟಿಯಾದ‌ ಟ್ರಾಕ್ಟರ್ ಟ್ರಾಲಿ ಪಲ್ಟಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಓರ್ವನ ಸ್ಥಿತಿ ಗಂಭೀರವಾಗಿದ್ದು ಸ್ಥಳಿಯ ಆಸ್ವತ್ರೆಗೆ ದಾಖಲಿಸಲಾಗಿದೆ. ಟ್ರಾಕ್ಟರ್​ನಲ್ಲಿ ತೋಟಕ್ಕೆ ಗೊಬ್ಬರ ತುಂಬಲು ಹೋಗುತ್ತಿದ್ದ ವೇಳೆ ಬೊಲೆರೋ ಜೀಪ್ ಡಿಕ್ಕಿ ಹೊಡದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 am, Fri, 11 August 23